ಕೆಎಂಎಸ್, ಅರವಿಂದ ಮಾಲಗತ್ತಿ, ವಸುಂಧರಾ ಭೂಪತಿ, ಲೋಕೇಶ್ ಅಕಾಡೆಮಿ ಅಧ್ಯಕ್ಷರಾಗಿ ನೇಮಕ

ಹಿರಿಯ ಸಾಹಿತಿಗಳಾದ ಡಾ ಕೆ ಮರಳುಸಿದ್ಧಪ್ಪ ಅವರನ್ನು ಕುವೆಂಪು ಭಾಷಾ ಭಾರತಿ ಅಧ್ಯಕ್ಷರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ, ವೈದ್ಯೆ ಡಾ ವಸುಂಧರಾ ಭೂಪತಿ ಅವರನ್ನು ಪುಸ್ತಕ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಅರವಿಂದ ಮಾಲಗತ್ತಿ ಅವರನ್ನು ಸಾಹಿತ್ಯ ಅಕಾಡೆಮಿ ಅಧ್ಯಕ್ಷರನ್ನಾಗಿ ಹಾಗೂ ಹಿರಿಯ ರಂಗಕರ್ಮಿ ಜೆ ಲೋಕೇಶ್ ಅವರನ್ನು ನಾಟಕ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಉಳಿದ ಅಕಾಡೆಮಿಗಳ ಅಧ್ಯಕ್ಷರು ಇಂತಿದ್ದಾರೆ-

ಟಿ.ಟಾಕಪ್ಪ-ಜಾನಪದ ಅಕಾಡೆಮಿ.
ಕಾಳಾಚಾರ್-ಶಿಲ್ಪಕಲಾ ಅಕಾಡೆಮಿ.
ಎ.ಸಿ.ಭಂಡಾರಿ-ತುಳು ಅಕಾಡೆಮಿ.
ಫಯಾಸ್ ಖಾನ್-ಸಂಗೀತ ಅಕಾಡೆಮಿ.
ಆರ್.ಪಿ.ನಾಯಕ್-ಕೊಂಕಣಿ ಅಕಾಡೆಮಿ

Leave a Reply