fbpx

ಎನ್ ಎಸ್ ಡಿ ಗೆ ಪ್ರಶ್ನೆಗಳು..

ಹೊನ್ನಾಳಿ ಚಂದ್ರಶೇಖರ್ 

 

ನಾವು ದೂರದ ಶಿವಮೊಗ್ಗದಲ್ಲಿದ್ದೀವಿ. ನಮಗೆ ಏನೂ ಗೊತ್ತಾಗ್ತಿಲ್ಲ.

ಬೆಂಗಳೂರಿನವರು ಯಾರಾದರೂ ನನ್ನ ಗೊಂದಲ ಬಗೆಹರಿಸಿ.

ಮಾರ್ಗದರ್ಶನ ಮಾಡಿ.

– ಗುರುನಾನಕ್ ಭವನ ಬಾಡಿಗೆ ೧೮ ಲಕ್ಷ ಬಾಕಿಯಾಗುವಷ್ಟು ಏಕೆ ಉಳಿಯಿತು?

– ‘ಮಲೆಗಳಲ್ಲಿ ಮದುಮಗಳು’ ನಾಟಕ ಈ ಬಾರಿ ಎನ್.ಎಸ್. ಡಿ. ಮಾಡುತ್ತಿದೆಯೇ? ಅವರೇಕೆ ಅಲ್ಲಿ ತಾಲೀಮು ಮಾಡುತ್ತಿದ್ದರು?

– ಎನ್.ಎಸ್.ಡಿ.ಗೆ ರಾಜ್ಯ ಸರ್ಕಾರ ಬೇರೆ ಕಡೆ ಜಾಗ ಕೊಟ್ಟಿದೆಯೇ? ಅಲ್ಲಿ ಏನಾಗಿದೆ?

– ಅಷ್ಷೆಲ್ಲಾ ಗಲಾಟೆ ಆಗಿದೆ. ಬೆಂಗಳೂರಿನ ಬೇರೆ ಎಲ್ಲಾ ಕಲಾವಿದರು ರಾಜ್ಯದ ಪ್ರತಿಷ್ಠಿತ ಸಂಸ್ಥೆ ಉಳಿಸಲಿ ಎಂದು ಇಂದು ಪ್ರತಿಭಟನೆ ನಡೆಸುತ್ತಾರಾ?

– ರಾಜ್ಯದ ಇತರೆಡೆ ಇರುವ ನಾವೂ ಪ್ರತಿಭಟನೆ ಮಾಡಬೇಕೆಂದು ಬೆಂಗಳೂರಿನವರು ಬಯಸುತ್ತಾರಾ?

(ಏಕೆಂದರೆ ರಾಜ್ಯಕ್ಕೆ ಎನ್.ಎಸ್. ಡಿ. ಬೇಕು ಅಂತ ಪ್ರಸನ್ನ ಅವರು ಉಪವಾಸ ಕುಳಿತಾಗ ಇಲ್ಲಿ ನಾವೂ ಪ್ರತಿಭಟನೆ ಮಾಡಿದ್ದೆವು)

Leave a Reply