fbpx

‘ಹಾಸ್ಯೋದ್ಯಮಿ’ ಪ್ರಾಣೇಶ್ ಅವರಿಗೆ..

ರಾಘವನ್ ಚಕ್ರವರ್ತಿ 

ಗಂಗಾವತಿಯ ‘ಹಾಸ್ಯೋದ್ಯಮಿ’ ಪ್ರಾಣೇಶ್, ಯಾಕೋ ಇತ್ತೀಚಿನ ದಿನಗಳಲ್ಲಿ ‘ನಮ್ಕಡಿ ಹಂಗ್ರಿ, ನಿಮ್ಕಡಿ ಇಸ್ಟೇರಿ’ ಎಂಬ ಅಪಹಾಸ್ಯ ರಸವನ್ನು ಹೆಚ್ಚು ಉಣಬಡಿಸಲಾರಂಭಿಸಿದ್ದಾರೆ.

ಮೊನ್ನೆ ಟಿ.ವಿ. ಕಾರ್ಯಕ್ರಮವೊಂದರಲ್ಲಿ ಅವರು ವಿಶ್ವೇಶ್ವರಯ್ಯ ಬೀದಿ ದೀಪದ ಕೆಳಗೆ ಓದಿದ್ದು, ಅಬ್ದುಲ್ ಕಲಾಮ್ ಕಂದೀಲಿನ ಕೆಳಗೆ ಓದಿದ್ದನ್ನು ಪ್ರಸ್ತಾಪಿಸುತ್ತಾ ‘ನಮ್ಕಡಿ ಜನ ಹಂಗಾರ ಅವ್ರು ಬೆಳಕ್ ಹೊತ್ತಿನಲ್ಲಿ ಏನ್ಮಾಡಿತ್ದ್ರು ಅಂತಾ ಕೇಳ್ತಾರ್ರಿ’ ಎಂದು ‘ಅವರ್ಕಡಿ’ ಜನರ ಲೀಲೆಗಳನ್ನು ಬಣ್ಣಿಸುತಿದ್ದರು.

ಇಂದಿನ ನಮ್ಮ ವಿದ್ಯಾರ್ಥಿಗಳಿಗೆ ಶ್ರದ್ಧೆ-ಶ್ರಮಗಳ ಅರಿವು ಮೂಡಿಸಲು, ‘ಕೈ ಕೆಸರಾದರೆ ಬಾಯ್ಮೊಸರು’ ಎಂಬ ಸರಳ ತತ್ವ ತಿಳಿಹೇಳಲು, ವಿಶ್ವೇಶ್ವರಯ್ಯನವರನ್ನು ಉದಾಹರಿಸುತ್ತಾರೆ. ‘ನಮ್ಕಡಿ’ ‘ಅವರ್ಕಡಿ’ ಯ ವಿದ್ಯಾರ್ಥಿಗಳಿಗೆಲ್ಲಾ ವಿಶ್ವೇಶ್ವರಯ್ಯ ಒಂದು ಮಾದರಿ. ಪ್ರಾಣೇಶ್ ಗೆ ತಿಳಿಯದ್ದೇನೂ ಅಲ್ಲ.

ಪ್ರತ್ಯೇಕತೆಯ ಕೂಗು ಜೋರಾಗಿ ಕೇಳುತ್ತಿರುವ ಹಿನ್ನಲೆಯಲ್ಲಿ ನಮ್ಮ ಸಾಂಸ್ಕೃತಿಕ ರಾಯಭಾರಿಗಳು, ನೆಲ-ಜಲ-ಭಾಷೆಗಳ ಬಗ್ಗೆ ಮಾತನಾಡುವವರು ಸ್ವಲ್ಪ ಹೆಚ್ಚು ಸೂಕ್ಷ್ಮತೆ-ವಿವೇಕದಿಂದ ಕೆಲಸ ಮಾಡಬೇಕಾಗುತ್ತದೆ. (ಈ ಆತಂಕ ಸ್ವಲ್ಪ ವಿಪರೀತದ್ದು ಎನಿಸಿದರೂ ಪರವಾಗಿಲ್ಲ:-) ).

ನಮ್ಮ ಸುತ್ತ ಮುತ್ತಲು ನಡೆಯುತ್ತಿರುವ ಘಟನೆಗಳು, ರಾಜಕೀಯ ಸ್ತಿತ್ಯಂತರಗಳನ್ನು ಗಮನಿಸುತ್ತಾ ತಮ್ಮ (ಮಾತಾಡುವ) ‘ಶೈಲಿ’ಯನ್ನು update ಮಾಡಿಕೊಳ್ಳಬೇಕಾಗುತ್ತದೆ. ಅಗತ್ಯ ಬಿದ್ದರೆ upgrade ಕೂಡಾ ಮಾಡಿಕೊಳ್ಳುತ್ತಿರಬೇಕಾಗುತ್ತದೆ.

ಆಡು-ಭಾಷೆಯಲ್ಲಿನ, ನುಡಿಗಟ್ಟುಗಳ ಬಳಕೆಯಲ್ಲಿನ, ಶರಣರ ವಚನಗಳ ಅಂತರಾಳದಲ್ಲಿ ಹುದಗಿರುವ, ಒಟ್ಟಾರೆ ನಮ್ಮ ಸಾಹಿತ್ಯದಲ್ಲಿ ಅಂತರ್ಗಾಮಿಯಾಗಿ ಸಾಗುವ ಹಾಸ್ಯವನ್ನು ಹೆಕ್ಕಿ ತೆಗೆದು ಡಾ.ಎಮ್.ಎಸ್.ಸುಂಕಾಪುರ ಎಂಬ ಮೇಷ್ಟ್ರು ‘ಕನ್ನಡ ಸಾಹಿತ್ಯದಲ್ಲಿ ಹಾಸ್ಯ’ ಎಂಬ ಪ್ರೌಢ ಪ್ರಬಂಧವನ್ನೇ ಬರೆದಿದ್ದಾರೆ.

ನಮ್ಮ ನಿತ್ಯ ಜೀವನದಲ್ಲೂ ಹಾಸ್ಯ ಹಾಸುಹೊಕ್ಕಾಗಿರುವ ಬಗೆ, ಅದನ್ನು ಡಾ.ಸುಂಕಾಪುರ ಸರಳವಾಗಿ ಪ್ರತಿಪಾದಿಸಿರುವ ರೀತಿ ಅಚ್ಚರಿ-ಸಂತೋಷಗಳನ್ನು ತರುತ್ತದೆ. ನಾವು ಹೈಸ್ಕೂಲಿನಲ್ಲಿ ಕಲಿಯುತ್ತಿದ್ದಾಗ ಈ ಪುಸ್ತಕದ ಒಂದು ಅಧ್ಯಾಯ ನಮ್ಮ ಪಠ್ಯದಲ್ಲಿತ್ತು. ನಮ್ಮ ಮಂಡ್ಯದ ಕಡೆಯ ಮೇಷ್ಟ್ರು ಕೃಷ್ಣೇಗೌಡ್ರು ಸ್ವಲ್ಪ ಸುಂಕಾಪುರರ ಹಾದಿಯಲ್ಲೇ ಸಾಗುವುದು ಆರೋಗ್ಯಕರ ಬೆಳವಣಿಗೆ.

ಏಕತಾನತೆಯ ಹಾಸ್ಯ ಉ(ಒ)ಣಬಡಿಸುವ ಪ್ರಾಣೇಶ್ ತರದವರು ತಮ್ಮ ಹಾಸ್ಯಕ್ಕೊಂದಷ್ಟು ‘ಸಾಣೆ’ ಹಿಡಿಯಬೇಕಿದೆ. ‘ಇದ್ಯಾಕೋ ‘ಶಾಣೆ’ ಆಯ್ತ್ರೀ..ನಂಕಡಿ ಇದೆಲ್ಲಾ ಸರಿ ಬರೂದಿಲ್ಲಾ ನೋಡ್ರಿ’ ಅನ್ನೋ ಹಾಗಿದ್ದರೆ ‘ಹಾಸ್ಯೋದ್ಯಮ’ಬೆಳೆಯುತ್ತೆ. ಹಾಸ್ಯ’ಪ್ರವೃತ್ತಿ’ ನಶಿಸುತ್ತದೆ..

7 Responses

 1. ಅನಾಮಿಕ says:

  ಚಕ್ರವರ್ತಿಗಳೇ, ಹಾಸ್ಯದ ಈ ನಮ್ಕಡಿ-ನಿಮ್ಕಡಿಗಳ್ನ ನೀವ್ಯಾಕಷ್ಟ್ ಝೂಮ ಮಾಡಿ ನೋಡಾಕತ್ತೀರಿ?

 2. vimala.k.s says:

  ಇಂಥದ್ದೊಂದು ಅಗತ್ಯವಿತ್ತು

 3. UK_Mandi says:

  ನಮ್ಕಡಿ ನಿಮ್ಕಡಿ ಅಂತ ಅಂತ್ರ ಅದ ಅಂತ ಏತ್ತಿ ತೋರ್ಸದೋರ ನಮ್ಮ ಪ್ರಾಣಿ ಅವ್ರು.ನಮಕಡಿ ಅವ್ರು ಎಷ್ಟೊ ಜನ ಮುಖ್ಯಮಂತ್ರಿ ಆದ್ರು ನಮಕಡಿ ಜನ್ನಕ್ಕಾಗ್ಲಿ ಎನು ಮಾಡಿಲ್ಲ ರಿ. ಪ್ರತ್ಯೆಕತೆ ಎನಾದ್ರು ಆದ್ರು ಅದ್ದಕ್ಕ ನಮ್ದ್ ಬೆಂಬಲ ಅಂತ್ರು ಇದ್ದೆ ಅದ ರಿ.

 4. Avidas says:

  ಕೃಷ್ಣೇಗೌಡ್ರು ಸುಪ್ರಭಾತ ತಿರುಚಿ ಹೇಳಿದಂಗೆ .. ನಮಾಜು ದು.. ಇಲ್ಲ ಚರ್ಚು ಪ್ರೇಯರ್ ಹೇಳಿದ್ರೆ.. ಇಷ್ಟರಲ್ಲಿ ಮೂಳೆ ಮುರಿದು ಕೂರಿಸ್ತಾ ಇದ್ರು ..

 5. Badarinarayan says:

  Sir.,
  With due respects to ur view regarding
  Samagrathe.,
  i think u r over reacting to &trying to put non existent meanings into Gangavathi Pranesh jokes.
  if u observe his standup comedy nowhere does he seem to negatively differentiate Namkadi with Nimkadi…
  infact, Manytimes ,he seems to harmlessly pull legs or make light fun of Northkarnataka boys.
  He always stresses on the need to send youngsters out into the world to gain practical knowledge firsthand n to read/ know kannada Sahithya.
  Also, with their shows being on Tv 24×7
  it is extremely difficult to create new jokes n topics everyday.
  Such being the case…
  I feel,
  It is very Harsh n Uncharitable to call them “Haasyodhyama”.

 6. Malleshappa says:

  ನಮ್ಮ ಮಂಡ್ಯದ ಕಡೆಯ ಮೇಷ್ಟ್ರು ಕೃಷ್ಣೇಗೌಡ್ರು ………… idenri neevu heliddu….. haagene pranesh avaru saha heliddu…. helodu achara thinnodu badanekayi aagabaradu….

 7. H M Ramesh says:

  Nowadays it is boring as same jokes are repeated.pranesh should improve by looking at young standup comedy of young boys in english and kannada at bangalore.

Leave a Reply

%d bloggers like this: