ಸ್ವಾಮಿ ಪೊನ್ನಾಚಿ, ದೀಪ್ತಿ, ವಿಜಯಶ್ರೀಗೆ ಪ್ರಶಸ್ತಿ

ಪಾಪು ಕಥಾ ಮತ್ತು ಡಿಸೋಜ-ಎಚ್ಚೆಸ್ವಿ ಪುಟಾಣಿ ಪುರಸ್ಕಾರ: ಫಲಿತಾಂಶ

ಹಾನಗಲ್ ನ ಕನ್ನಡ ಯುವಜನ ಕ್ರಿಯಾಸಮಿತಿ ಸ್ಥಾಪಿಸಿರುವ ‘ಪಾಪು ಕಥಾ ಪುರಸ್ಕಾರ’ಕ್ಕೆ ಕೊಳ್ಳೆಗಾಲದ ಸ್ವಾಮಿ ಪೊನ್ನಾಚಿ ಅವರ`ಧೂಪದ ಮಕ್ಕಳು’ ಹಾಗೂ ಭದ್ರಾವತಿಯ ದೀಪ್ತಿ ಭದ್ರಾವತಿ ಅವರ ಆಳ’ ಕಥಾ ಹಸ್ತಪ್ರತಿಆಯ್ಕೆಯಾಗಿದೆ.

ಮಕ್ಕಳ ಸಾಹಿತ್ಯಕ್ಕಾಗಿ ನೀಡುವ `ಡಿಸೋಜ-ಎಚ್ಚೆಸ್ವಿ ಪುಟಾಣಿ ಸಾಹಿತ್ಯ ಪುರಸ್ಕಾರ’ವು ಮೂಡುಬಿದಿರೆಯ ವಿಜಯಶ್ರೀ ಹಾಲಾಡಿಯವರ ಮಕ್ಕಳ ಅನುಭವ ಕಥನ-`ಜಂಬಿಕೊಳ್ಳಿ ಮತ್ತು ಪುಟ್ಟ ವಿಜಿ’ ಕೃತಿಗೆ ಸಂದಿದೆ.

ಪ್ರಶಸ್ತಿಯು ನಗದು ಹಾಗೂ ಪ್ರಶಸ್ತಿ ಫಲಕಗಳನ್ನೊಳಗೊಂಡಿರುತ್ತದೆ. ಪುರಸ್ಕಾರ ಪ್ರಧಾನ ಸಮಾರಂಭವು ಡಿಸೆಂಬರ್ ತಿಂಗಳಿನಲ್ಲಿ ಧಾರವಾಡದಲ್ಲಿ ನೆರವೇರುವುದು ಎಂದು ಕನ್ನಡ ಯುವಜನ ಕ್ರಿಯಾಸಮಿತಿಯ ಸಂಚಾಲಕರಾದ ವಿಜಯಕಾಂತ ಪಾಟೀಲ, ಚನ್ನಪ್ಪ ಅಂಗಡಿ ಹಾಗೂ ಶಿವಾನಂದ ಕ್ಯಾಲಕೊಂಡ  ತಿಳಿಸಿದ್ದಾರೆ.

 

1 comment

Leave a Reply