fbpx

‘ಜುಗಾರಿ ಕ್ರಾಸ್’ನಲ್ಲಿ ವಾನಳ್ಳಿಯೂ ಮತ್ತು ಅವರ ಕನ್ಯತ್ವವೂ..

ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ ನಿರಂಜನ ವಾನಳ್ಳಿ ಅವರ ಮಾತು ಇಲ್ಲಿದೆ.

ಮೂಡಬಿದ್ರಿಯಲ್ಲಿ ಜರುಗಿದ ನುಡಿಸಿರಿಯಲ್ಲಿ ಮಾತನಾಡಿದ ಅವರು ಪತ್ರಕರ್ತನ ವಿಶ್ವಾಸಾರ್ಹತೆಯನ್ನು ಕನ್ಯತ್ವಕ್ಕೆ ಹೋಲಿಸಿದ್ದಾರೆ.

ಇದು ಭಾರೀ ಚರ್ಚೆಗೆ ಕಾರಣವಾಗಿದೆ.

ಸಾಕಷ್ಟು ಕಾಲ ಪತ್ರಿಕೋದ್ಯಮದ ಉಪನ್ಯಾಸಕರಾಗಿ ಹಾಗೂ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿರುವ ವಾನಳ್ಳಿ ಅವರ ಸಂವೇದನಾರಹಿತ ಮನಸ್ಸಿನ ಬಗ್ಗೆ ಚರ್ಚೆ ಶುರುವಾಗಿದೆ

ಅವಧಿಯ ಜುಗಾರಿ ಕ್ರಾಸ್ ಇರುವುದೇ ಇಂತಹ ಚರ್ಚೆ/ ಸಂವಾದಕ್ಕೆ ವೇದಿಕೆ ಒದಗಿಸಲು

ಬನ್ನಿ, ನೀವೂ ಚರ್ಚೆಯಲ್ಲಿ ಪಾಲ್ಗೊಳ್ಳಿ

ನೇರ ಇಲ್ಲಿಯೇ ಕಾಮೆಂಟ್ ಮಾಡಿ. ಇಲ್ಲವೇ avadhimag@gmail.com ಇಲ್ಲಿಗೆ ಇ ಮೇಲ್ ಮಾಡಿ

ಕುಸುಮ ಬಾಲೆ 

ವಾನಳ್ಳಿ ವಾನಳ್ಳಿ ಹಿಂಗಂದ್ರೆ ಹೆಂಗೇಳಿ? ಅವರು ಇರೋದೇ ಹಾಗೆ.

ದಶಕಗಳಿಂದ ಅದೇನು ಜರ್ನಲಿಸಂ ಪಾಠ ಮಾಡಿದಾರೋ.

ಅದೇ. ಕನ್ಯತ್ವ ಅಂದ್ರೆ ಹೆಂಗಸಿಗ್‌ ಮಾತ್ರ ಇರೋದಾ? ಅವರ ತಲೇಲಿ ತುಂಬಿರೋದು ಇದೇ ಸಗಣಿ. ಅದಕೇ ಮಾತಲಿ ಎತ್ತಿನ ಉಚ್ಚೆ

ಎಂತಾ ಕೊಳಕು ಮನಸ್ಥಿತಿ ಅಂದ್ರೆ ವಿಶ್ವಾಸಾರ್ಹತೆಗೆ ಕನ್ಯತ್ವ ಬಿಟ್ಟು ಬೇರೆ ಯಾವ ಉದಾಹರಣೆಯೂ ಜಗತ್ತಲ್ಲಿಲ್ಲ ಇವರಿಗೆ. ಇವರೆಲ್ಲ ಜರ್ನಲಿಸಂ ಮೇಷ್ಟ್ರುಗಳು.

 

ಭುವನೇಶ್ವರಿ 

ಹೇಳಿರುವುದು ನಿಜ ಎಂದಾದರೆ.ಅದಕ್ಕಿಂತ ಆಘಾತಕಾರಿ ಮತ್ತೊಂದಿಲ್ಲ.

ಪಾಠ ಗೀಠ ಅತ್ಲಾಗೋಗ್ಲಿ….ಹೌದು, ಕನ್ಯತ್ವ ಅಂದ್ರೇನು? ಅದು ಉಭಯ ಲಿಂಗಿ ಸೂಚಕ ಪದವಾ? ಅಲ್ಲ ವೆಂದಾದರೆ ಪುರುಷ ಸೂಚಕ ಪದ ಯಾವುದಿದೆ?
ಅದು ಮನಸ್ಸಿಗೆ ಸಂಬಂಧಪಟ್ಟದ್ದಾ….ಶರೀರಕ್ಕಾ?
ಬರೀ ಶರೀರ ಸಂಬಂಧಿಯಾದರೆ ಅದಕ್ಕೆ ನಾಮಕರಣ ಮಾಡಿದವರ್ಯಾರು….ಅದರ ಉಪಭೋಗಿಗಳು, ಅನುಭೋಗಿಗಳು‌ ಯಾರು…
ಅದು ಅಂದರೆ ಆ ಕನ್ಯತ್ವ ಎಂಬೋ ಕನ್ಯತ್ವ ಯಾವ್ಯಾವಾಗ ಯಾರ್ಯಾರಿಗೆ ಎಷ್ಟೆಷ್ಟಿರಬೇಕು….
ಉಶ್ಯಪ್ಪಾ….ಬಲ್ಲವರು ಉತ್ತರಿಸಿ

ಹೆಣ್ಣು‌- ಹೆಣ್ತನದ ಕುರಿತ ಮಾತು, ಹೋಲಿಕೆ, ಹಾಸ್ಯ, ಬೈಗುಳಗಳ ಬಗ್ಗೆ …ಇನ್ನಾದರೂ ಪ್ರಜ್ಞಾವಂತರು ಎನ್ನಿಸಿಕೊಂಡವರಾದರೂ ಜಾಗ್ರತೆಯಿಂದ ವ್ಯವಹರಿಸೋದನ್ನ ಕಲಿಯಬೇಕು.

 

ರವಿಕುಮಾರ್, ಶಿವಮೊಗ್ಗ 

ಕಾಲ ಬದಲಾಗುತ್ತಿದೆ. ಕೆಲವರು ಬದಲಾಗುತ್ತಿಲ್ಲ. ಅವರ ಯೋಚನೆಗಳು ಬದಲಾಗುತ್ತಿಲ್ಲ……ಕೊಳೆತು ನಾರುತ್ತಿವೆ…

ಅನಾದಿ ಕಾಲದಿಂದಲೂ ಇಂತಹುದ್ದೇ ಪುರಾಣ ಪುಂಗಿಗಳನ್ನು ಊದುತ್ತಾ ಹೆಣ್ಣನ್ನು ನಿಕೃಷ್ಟಗೊಳಿಸುತ್ತಾ ಬರಲಾಗುತ್ತಿದೆ. ವಾನಳ್ಳಿ ಇನ್ನೂ‌ ಅದನ್ನೆ ಮುಂದುವರೆಸುವ ಕೆಲಸ ಮಾಡುತ್ತಿದ್ದಾರೆ. ಗಂಡನ್ನು ಸದಾ ಸಚ್ಚಾರಿತ್ರ್ಯ ಗೊಳಿಸುತ್ತ ಹೆಣ್ಣನ್ನು ಕನ್ಯತ್ವ,ಶೀಲ, ಮರ್ಯಾದೆ ಎಂಬ ಗೂಟಗಳಿಗೆ ಕಟ್ಟಲಾಗುತ್ತದೆ.

ವಾನಳ್ಳಿ ಸ್ತ್ರೀ ಸಮೂಹ ಮತ್ತು ಸಂವೇದನಾ ಗುಣಕ್ಕೆ ಮಾಡಿದ ಅಪಚಾರ.

 

 

ರಾಜೀವ ಚೀರನಹಳ್ಳಿ 

ವಿವಿಗಳ ಪತ್ರಿಕಾ ಶಾಲೆಗಳು, ಪತ್ರಿಕಾಲಯಗಳಲ್ಲೂ ಪುರುಷ ಪ್ರಧಾನ ಮನಸ್ಥಿತಿ ಈಗಲೂ ಇದೆ. ಇಷ್ಟು ಮಾತ್ರವಲ್ಲ, ತಳ ಸಮುದಾಯಗಳನ್ನು ಅವಹೇಳನವಾಗಿ ಬಿಂಬಿಸುವ ನಾಣ್ಣುಡಿ, ಗಾದೆಗಳನ್ನು ತಲೆಬರಹಕ್ಕೆ ಬಳಸುವ ಪತ್ರಕರ್ತರು ಕೂಡ ಇದ್ದಾರೆ. ಇಲ್ಲೆಲ್ಲಾ ಫ್ಯೂಡಲ್ ಮನಸ್ಥಿತಿ ಹಾಗೂ ಅರಿವಿನ ಕೊರತೆ ಇದೆ.

6 Responses

 1. Smitha says:

  A professor calls the third grade journalists as call girls, another state ‘the objectivity of journalists is like verginty’ … Iam shocked. Now, let’s discuss why men always give examples of women, rather ‘spoiled’women to indicate all bad that happens in the world . Any bad women is not as bad as a normal man that’s my frank opinion when it’s about use and misuse of that body part which is responsible for getting such nomenclature as prostitute, call girl, or women who has lost verginty. These unabshed professors forgot both for losing verginty or to become call girl man is equally or in our country of double standards, more responsible. It’s he who wants women to be so. Losing or holding verginty is a matter of womens wish but not losing objectivity is journalists responsibility. At least in this century so called teachers talk with dignity when they talk to reach both men and women students. I cud not but react to the verbal demeaning of women, for iam a teacher, a woman and a mother of two boys. Nutty professors!!!

 2. Suma says:

  I am yet to get used to using Nudi, so commenting in English.

  It is understood and accepted that we should be thankful to people with progressive thoughts that help the mankind make a forward leap. What we forget is we should also be thankful for people who are regressive in nature and sow the seeds for backward leap, for every seed of theirs there are hundred other thoughts which are expressed that convince why and how wrong the regressive thoughts are.

  Welcome Mr Wanalli to the world of fight for equality of sexes.

 3. “How impossible it is to get the lost virginity back, again” – a rough translation.
  Oh, what a load of crap those words are! Give it a break and rid yourself of phobia.

 4. Manjula s gomnawara says:

  ಆಳ್ವಾಸ್ ನುಡಿಸಿರಿಯಲ್ಲಿ ಮಾಧ್ಯಮದ ವೃತ್ತಿ ಘನತೆಯ ಬಗ್ಗೆ ಮಾತನಾಡುತ್ತಾ ಆ ಘನತೆ ಕನ್ಯತ್ವಕ್ಕೆ ಸಮಾನ ಎಂದು ಹೇಳುತ್ತಾ ಹೆಣ್ಣು ಮಕ್ಕಳನ್ನು ಅವಮಾನಿಸಿದ್ದಾರೆ. ಕನ್ಯತ್ವ ಎನ್ನುವ ಹೆಸರಲ್ಲಿ ಹೆಣ್ಣುಮಕ್ಕಳನ್ನು ಕಟ್ಟಿ ಹಾಕುವ ಪ್ರಯತ್ನವೇ ವಿನಹಃ ಅವಳ ಬಗೆಗಿ‌ನ ಗೌರವವಲ್ಲ.ಇದೊಂದು ಪುರುಷ ಪ್ರಧಾನ ಮನೋಭಾವ.ಹೆಣ್ಣುಮಕ್ಕಳ ಘನತೆಗೆ ಕುಂದುತರಬೇಡಿ.ಪುರುಷ ಪ್ರಧಾನ ಮೌಲ್ಯಗಳು ಇಲ್ಲಿಯವರೆಗೂ ಇದನ್ನೇ ಹೇಳಿಕೊಂಡು ಬಂದಿವೆ. ಇನ್ನಾದರೂ ನಿಮ್ಮ ಮನೋಭಾವ ಬದಲಾಸಿಕೊಳ್ಳಿ

 5. Suma says:

  ಅ೦ದು
  ಓಡೆದು ಹೋದ ಮುತ್ತು ಕಳೆದು ಹೋದ ಸಮಯ ಎ೦ದೂ ಮರಳಿ ಬಾರವು
  ಇ೦ದು
  ಹರಿದು ಹೋದ ಕನ್ಯಾ ಪೊರೆ ಮುರಿದು ಹೋದ ವಿಶ್ವಾಸರ್ಹತೆ ಎ೦ದೂ ತಿರುಗಿ ಬಾರವು

 1. December 5, 2017

  […] ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ ನಿರಂಜನ ವಾನಳ್ಳಿ ಅವರ ಮಾತು ಇಲ್ಲಿದೆ. […]

Leave a Reply

%d bloggers like this: