fbpx

ಎಂಡಿಎನ್ ಕಂಡಂತೆ ‘ಪಿಂಡ’

 

‘ಸಿದ್ದರಾಮಯ್ಯ ಪಾಪದ ಪಿಂಡ: ಹುಟ್ಟಿದೆಡೆಯೇ ಮುಗಿಸಬೇಕು’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಕುಟುಕಿದ್ದಾರೆ ಎನ್ನುವ ‘ಪ್ರಜಾವಾಣಿ’ ವರದಿ ಹಿನ್ನೆಲೆಯಲ್ಲಿ ಪಿಚ್ಚಳ್ಳಿ ಶ್ರೀನಿವಾಸ್ ಅವರು ಮಾಡಿಕೊಂಡ ನೆನಪು ಇಲ್ಲಿದೆ

 

 

ಪಿಚ್ಚಳ್ಳಿ ಶ್ರೀನಿವಾಸ್ 

 

 

“ಪಿಂಡ” ಹಾಕುವವರ ಬಗ್ಗೆ ಪ್ರೊ.ನಂಜುಂಡಸ್ವಾಮಿ ರೈತ ಸಂಘದ ಕಾರ್ಯಾಗಾರಗಳಲ್ಲಿ ಸೊಗಸಾಗಿ ವಿವರಿಸುತ್ತಿದ್ದರು.

ಭಾರತಕ್ಕೆ ಹೊರಗಿನಿಂದ ಬಂದವರಿಂದ ಪಿಂಡ ಶುರುವಾಯಿತು.

ಯಾರು ಭಾರತದ ಮೂಲ ನಿವಾಸಿಗಳಾಗಿದ್ದರೋ‌ ಅವರು ಶವವನ್ನೂ ಹೂಳುತ್ತಾರೆ. ಏಕೆಂದರೆ ಮೂಲನಿವಾಸಿಗಳು ಭೂ ಒಡೆಯರಾಗಿದ್ದರು.

ಯಾರು ಹೊರಗಿನಿಂದ ಭಾರತಕ್ಕೆ ವಲಸೆ ಬಂದರೋ‌ ಅವರಿಗೆ ಭೂ ಒಡೆತನ ಇರಲಿಲ್ಲವಾದ್ದರಿಂದ ಅವರು ಶವಗಳನ್ನು ಸುಡಲು ಶುರು ಮಾಡಿದರು. ಹೆಣ ಸುಡುವ ವಲಸಿಗರು ತಾವು ವಲಸೆ ಬಂದ ದಿಕ್ಕೆಗೆ ತಮ್ಮ ಪೂರ್ವಜರಿಗೆ ತಲುಪಲಿ ಎನ್ನುವ ನಂಬಿಕೆಯಿಂದ ತಮ್ಮ ಮಾತೃದೇಶ ಯಾವ ದಿಕ್ಕಿಗೆ ಇದೆಯೋ ಆ ದಿಕ್ಕಿಗೆ ನೀರು ಹರಿಯುವ ನದಿಗಳಿಗೆ ಪಿಂಡ ಬಿಡಲು ಶುರು ಮಾಡಿದರು.

ಈ ಪಿಂಡಧಾರಿಗಳು ಭಾರತಕ್ಕೆ ಬಂದ ನಂತರ ರಾಜಾಶ್ರಯ ಸಿಕ್ಕಿತು. ನಂತರ ಅವರುಗಳು ರಾಜರಿಂದ ಭೂಮಿಯನ್ನು ದಾನವಾಗಿ ಪಡೆದು ಭೂ ಒಡೆಯರಾದರು. ಆದರೂ ತಮ್ಮ ಮಾತೃ ದೇಶ (ಮಧ್ಯ ಪ್ರಾಚ್ಯ) ದ ಮೇಲಿನ ಪ್ರೀತಿ ಕಳೆದುಕೊಳ್ಳಲಿಲ್ಲ.

ಹೀಗಾಗಿ ಪಿಂಡಧಾರಿಗಳು ಸಾಂಸ್ಕೃತಿಕವಾಗಿ ಇವತ್ತಿಗೂ ಭಾರತೀಯರಾಗಲು ಸಾಧ್ಯವಾಗಿಲ್ಲ. ಶವ ಹೂಳುವವರು ಮಾತ್ರ ಈ ನೆಲದ ಮೂಲ ನಿವಾಸಿಗಳು. ಕೆಲವರು ಹೆಣ ಹೂಳದಿದ್ದರೂ ಕಾಲಾನಂತರ ಸಾವು, ಮದುವೆಯಲ್ಲಿ ಅಗ್ನಿಪೂಜೆ ಧಿಕ್ಕರಿಸಿ ಜಲಪೂಜೆ ಮಾಡಲು ಶುರು ಮಾಡಿದರು. ಅವರೂ ಭಾರತೀಯರಾದರು.

3 Responses

 1. G Narayana says:

  One should always be dignified in while commenting on anyone otherwise it will reflect on the commentator’s cultural standards
  There are lots of positive criticism which can be used instead of negative so that the society will remain healthy

 2. Kiran says:

  A professor uses the Aryan theory to push his agenda?
  British started this fake theory for their own purpose, but some selfish liberal leaders, after we got the so called independence, instead of correcting and rewriting the history textbooks use the same theory for their own purposes!
  Only in India we such paradoxes and this is the same reason India will never ever achieve true independence in real sense…

 1. December 25, 2017

  […] ಕಂಡಂತೆ ‘ಪಿಂಡ’ http://avadhimag.com/?p=189295 (‘ಪಿಂಡ’ ಸಂಸ್ಕತಿಯ ಬಗ್ಗೆ ಪ್ರೊ. […]

Leave a Reply

%d bloggers like this: