fbpx

ಬರೆದು ಬೆಂಡೆತ್ತಿದ್ದಾರೆ ಭಾರತಿ ಬಿ ವಿ

ಆರ್ಡರ್ ಕೊಟ್ಟು ಸಮಸ್ಯೆ ಹೊಲಿಸೋದಂದ್ರೆ ಹೀಗೆ..

ಭಾರತಿ ಬಿ ವಿ

ನಾಟಕ ಮುಗಿಸಿ ವಾಪಸ್ಸಾದೆ
ಇನ್ಬಾಕ್ಸಲ್ಲಿ ‘ನಿಮ್ಮ ಅಡ್ರೆಸ್ ಕೊಡಿ ಬುಕ್ ಕಳಿಸ್ತೀನಿ’ ಅಂತ ಒಬ್ಬರು ಮೆಸೇಜ್ ಮಾಡಿದ್ರು.
ಅವರನ್ನು ಮೊದಲು ತುಂಬ ಸಲ ಕಮ್ಮಟದಲ್ಲಿ ಭೇಟಿ ಆಗಿದ್ರಿಂದ ಸಿದ್ದವಾಗಿಯೇ ಇರುವ ಅಡ್ರೆಸ್ ಕಾಪಿ ಪೇಸ್ಟ್ ಮಾಡಿದೆ, ಕೊರಿಯರ್’ನವರು ಫೋನ್ ನಂಬರ್ ಕೇಳೋದ್ರಿಂದ ಅದೂ ಕಾಪಿ ಪೇಸ್ಟ್ ಆಯ್ತು.

ಅಡ್ವಾನ್ಸ್ ಥ್ಯಾಂಕ್ಸ್ ಅಂತ ಮೆಸೇಜ್ ಅರ್ಧ ಟೈಪ್ ಮಾಡುವುದರಲ್ಲಿ ಯಾವುದೋ unknown ನಂಬರ್’ನಿಂದ ಕಾಲ್ ಬಂತು.
‘ಈ ಸರಿ ರಾತ್ರಿಯಲ್ಲಿ ನನಗೆ ಕಾಲ್ ಮಾಡುವವರು ಯಾರು!!’ ಅನ್ನುವ ಆಶ್ಚರ್ಯದಲ್ಲೇ ಫೋನ್ ರಿಸೀವ್ ಮಾಡಿದೆ.
ಆ ಕಡೆಯಿಂದ ಒಂದು ಗಂಡು ದನಿ ‘ಮೇಡಂ ನಾನುರೀ ಅವರತಯಚಬ’ ಅಂದಿತು.
‘ಯಾರು ಗೊತ್ತಾಗ್ಲಿಲ್ಲ’ ಅಂದೆ.

‘ಅದೇ ಮೇಡಂ ಈಗ ನಂಬರ್ ಕೊಟ್ರಲ್ಲ ಇನ್ಬಾಕ್ಸಲ್ಲಿ’ ಅಂದರು!
ನಾನು ಆ ನನಗೆ ಗೊತ್ತಿರುವ ಆ ಹೆಸರಿನಾತ ಹಾಗೆಲ್ಲ ನಂಬರ್ ಸಿಕ್ಕ ಕೂಡಲೇ ಕಾಲ್ ಮಾಡುವವರಲ್ಲ, ತುಂಬ ಗಂಭೀರದ ಮನುಷ್ಯ.

ಇದೇನು ಈ ಸರಿರಾತ್ರಿಯಲ್ಲಿ ಕಾಲ್ ಮಾಡಿದ್ದಾರಲ್ಲ ಅಂತ ಆಶ್ಚರ್ಯ ಪಡುವಾಗಲೇ ‘ಪರಿಚಯವೇ ಇಲ್ಲದ ನಂಗೆ ನಿಮ್ ಫೋನ್ ನಂಬರ್ ಕೊಡ್ತೀರಾ ಅಂತ expect ಏ ಮಾಡಿರ್ಲಿಲ್ಲ’ ಅಂದಿತು ಆ ದನಿ.
ನಾನು ‘ಇದೇನು ಇವರೇ ಹೀಗಂತೀರಾ! ಕಮ್ಮಟದಲ್ಲಿ ಬೇಕಾದಷ್ಟು ಸಲ ಸಿಕ್ಕಿದೀವಲ್ಲ’ ಅಂದೆ.
ಆತ ಬೆಬ್ಬೆಬ್ಬೆ ಅನ್ನುತ್ತ ‘ಹಾ ಹಾ ಹೌದು’ ಅಂದರು.

ನಾನು ಮನಸಿನಲ್ಲೇ ‘ಸರಿ ಫೋನ್ ಯಾಕೆ ಮಾಡಿದಾರೆ ಇವ್ರು’ ಅಂತ ಅಂದ್ಕೊಳ್ತಲೇ ಇದ್ದೆ.
ಅಷ್ಟರಲ್ಲಿ ಏನಾಯಿತು ಅಂದರೆ ಈಗ ಎರಡು ದಿನದಿಂದ ಫೋನ್’ಗೆ ಏನೋ ರೋಗವಾಗಿ ಮಾತು ಮಧ್ಯೆ ಮಧ್ಯೆ ಕೇಳಿಸೋದೇ ಇಲ್ಲ. ಅದೇ ಥರ ಇವರ ಕಾಲ್ ಕೂಡಾ ಆಗಲು ಶುರುವಾಯಿತು.
‘ಸರ್ ಕೇಳಿಸ್ತಿಲ್ಲ ಫೋನ್’ ಅಂದೆ.

ಆತ ‘ಹೆಹೆಹೆ ಹೌದು ಮೇಡಂ. ಸರೀಗೆ ಕೇಳಿಸ್ತಿಲ್ಲ. ನಾಳೆ ಬೆಳಿಗ್ಗೆ ಕಾಲ್ ಮಾಡ್ತೀನಿ’ ಅಂತ ಫೋನ್ ಇಟ್ಟರು.
ಬೆಳಿಗ್ಗೆಯಾ?!! ಮತ್ತೆ ಮಾಡ್ತಾರಾ??!!!! ಯಾಕೆ??!!!! ಅಂದುಕೊಳ್ತಾ ಕಾಲ್ ಕಟ್ ಮಾಡಿ ಇದೇನು ಅಷ್ಟು ವಿಚಿತ್ರವಾಗಿ ಆಡ್ತಿದಾರಲ್ಲ ಅಂತ ಇನ್ಬಾಕ್ಸ್ ತೆರೆದು ಅವರ ಪ್ರೊಫೈಲ್ ತೆರೆದರೆ ಆ ಹೆಸರಿನ ಮುಂದೆ ಯಾವುದೋ ಅಪರಿಚಿತ surname!!
ಥೋ ಕರ್ಮ! ಯಾರೋ ಅಂದ್ಕೊಂಡು ಮತ್ಯಾರಿಗೋ ನಂಬರ್ ಕೊಟ್ಟುಬಿಟ್ಟಿದ್ದೆ !!

ಇನ್ನು ನಾಳೆಯಿಂದ ದಿನವೂ ಬರುವ ಕಾಲ್, ಗುಡ್ ಮಾರ್ನಿಂಗ್, ಗುಡ್ ನೈಟ್ ಮೆಸೇಜ್ ನೆನಪಾಗಿ ಬೆಂಗಳೂರಿನ ಚಳಿಯಲ್ಲೂ ಬೆವರಿ, ಫೋನ್ ಮತ್ತು ಫೇಸ್‌ಬುಕ್‌ ಎರಡರಲ್ಲೂ ಬ್ಲಾಕ್ ಮಾಡಿ ನಿಟ್ಟುಸಿರಿಟ್ಟೆ.
ಸ್ಯಾಂಡ್ಸ್ Sandhya Rani ನೀನು ಯಾವಾಗಲೂ ‘ಆರ್ಡರ್ ಕೊಟ್ಟು ಸಮಸ್ಯೆ ಹೊಲೆಸಿಕೊಳ್ತೀಯಾ ಕಣೇ’ ಅಂತ ರೇಗಿಸ್ತಿರ್ತೀಯಲ್ಲಾ, you are right kane ….

1 Response

  1. ಭಾರತಿ ಬಿ ವಿ says:

    ಥ್ಯಾಂಕ್ ಯೂ ಅವಧಿ 🙂

Leave a Reply

%d bloggers like this: