“ಕಾಡು” ಮನುಷಾ ಓಡಿ ಬಂದಿದ್ದಾ..!!

 

 

 

ಗಿರಿಜಾ ಶಾಸ್ತ್ರಿ

 

 

 

ನಿನ್ನೆ ಆರ್ಡರ್ ಕೊಟ್ಟು ಸಮಸ್ಯೆ ಹೊಲಿಸಿಕೊಂಡ ಬಿ.ವಿ.ಭಾರತಿಯವರಿಗೆ ಗಿರಿಜಾ ಶಾಸ್ತ್ರಿ ಸಾಥ್ ನೀಡಿದ್ದಾರೆ..

ಭಾರತಿ ಬಿ.ವಿ. ಹಾಕಿರುವ ಪೋಸ್ಟ್ ನೋಡಿ ನನಗೂ ಆದ ಇಂತಹ ಅನುಭವಗಳಲ್ಲಿ ಒಂದನ್ನು ಹಂಚಿಕೊಳ್ಳಬೇಕೆನಿಸಿದೆ.
ಸುಮಾರು ಹದಿನೈದು ವರ್ಷಗಳ ಹಿಂದೆ ವ್ಯಾಸರಾಯ ಬಲ್ಲಾಳರ ಕೃತಿ ಬಿಡುಗಡೆ ಶೇಷಾದ್ರಿ ಪುರದ ಒಂದು ಭವನದಲ್ಲಿ ಇತ್ತು. ನಾನು ಅದೇ ಸಮಯಕ್ಕೆ ಅಣ್ಣನ ಮನೆಯ ಗೃಹ ಪ್ರವೇಶ ಕ್ಕೆಂದು ಬೆಂಗಳೂರಿಗೆ ಬಂದಿದ್ದವಳು, ಬಲ್ಲಾಳರು ನಮಗೆ ಒಳ್ಳೆಯ ಸ್ನೇಹಿತರಾದ್ದರಿಂದ ಅವರು ಕಾರ್ಯಕ್ರಮಕ್ಕೂ ಹೋಗಿದ್ದೆ.

ಕಾರ್ಯಕ್ರಮಕ್ಕೆ ಬಂದಿದ್ದ ಒಬ್ಬ ಮಧ್ಯವಯಸ್ಸಿನ ವ್ಯಕ್ತಿ ಅಲ್ಲಿಂದ ವಾಪಸ್ಸಾಗುವಾಗ ರಸ್ತೆಯಲ್ಲಿ ಸಿಕ್ಕಿ ಮಾತಿಗೆ ತೊಡಗಿದ.
ಮೇಡಂ ನಿಮಗೆ ಬಲ್ಲಾಳರೆಂದರೆ ತುಂಬಾ ಇಷ್ಟಾನಾ?

ನಾನು : ಹೌದು ಅವರ ಕೃತಿಗಳು ನನಗೆ ಬಹಳ ಇಷ್ಟ. ಅವರು ನಮಗೆ ತುಂಬಾ ಪರಿಚಿತರು. ಆದ್ದರಿಂದ ಬಂದಿದ್ದೆ.ನನ್ನ ಕೈಯಲ್ಲಿದ್ದ ನನ್ನ ಪುಸ್ತಕ ‘ಕಥಾಮನಸಿ’ ಮೇಲೆ ಹೆಣ್ಣು ಮಕ್ಕಳ ಚಿತ್ರವಿದ್ದುದನ್ನು ನೋಡಿ

ವ್ಯಕ್ತಿ :ಮೇಡಂ ಆ ಪುಸ್ತಕ ನಿಮ್ಮದಾ? ನನಗೊಂದು ಕಾಪಿ ಕೊಡ್ತೀರಾ, ಕೊಂಡು ಕೋತೀನಿ.

ನಾನು : ಅಯ್ಯೋ ದುಡ್ಡೆಲ್ಲಾ ಬೇಡ. ಇದು ಮ‌ಹಿಳೆಯರ ಕುರಿತಾದ ಸಂಶೋಧನೆಯ ಪುಸ್ತಕ ನಿಮಗೆ ಬೇಕಾದರೆ ತೆಗೆದು ಕೊಳ್ಳಿ. ಎಂದು ಕೈಯಲ್ಲಿದ್ದ ಪುಸ್ತಕ ಕೊಟ್ಟು ಬಿಟ್ಟೆ. ಆ ವ್ಯಕ್ತಿ great ಎನ್ನುವಂತೆ ನನ್ನ ನೋಡಿ, ಒಂದೆರೆಡು ಸಲ ಪುಸ್ತಕ ವನ್ನು ಹಿಂದೆ ಮುಂದೆ ತಿರುಗಿಸಿ, ಮೇಡಂ ನೀವೂ ನೊಂದ ಮಹಿಳೆ ನಾನೂ ನೊಂದ ಮನುಷ್ಯ ಎಂದು ಹೇಳಿದ.

ಕೇಳಿ ಕಕ್ಕಾಬಿಕ್ಕಿಯಾದೆ. ನಾನೇನೂ ನೊಂದ ಮಹಿಳೆಯಲ್ಲ ಅಂತಹವರ ಬಗ್ಗೆ ಅನುಕಂಪ ವಿದೆ. ಪ್ರೀತಿ ಇದೆ ಅದಕ್ಕೇ ಬರೆಯುತ್ತೇನೆ.  ( ನನ್ನ ಬೋಳು ಕುತ್ತಿಗೆ, ಬೋಳು ಕೈ ನೋಡಿಯೋ ಏನೋ) ಮುಂಬೈ ಯಲ್ಲಿ ಯಾರ್ಯಾರು ಇದ್ದೀರಾ? ಎಂದ. ಗಂಡ ಮುದ್ದಾದ ಮಕ್ಕಳು ಬಹಳ ಸುಖೀ ಸಂಸಾರ ನಮ್ಮದೂ ಎಂದೆ.

ಅವನಿಗೆ ಸ್ವಲ್ಪ ನಿರಾಶೆಯಾಗಿರಬೇಕು. ಅಷ್ಟರೊಳಗೆ ಬಸ್ ಸ್ಟಾಪ್ ತಲುಪಿದ್ದೆವು. ಇನ್ನು ಈ ಪ್ರಾಣಿ ಕಳಚಿಕೊಳ್ಳತ್ತೆ ಎಂದು ಕೊಳ್ಳುವಾಗ, ಬೆನ್ನು ಬಿಡದ ಬೇತಾಳನ ಹಾಗೆ ಹಿಂಬಾಲಿಸಿ, ನೀವು ಫೆಮಿನಿಸ್ಟ್ ಇರಬೇಕು ಎಂದ, ನಾನು ಏನೂ ಉತ್ತರ ಕೊಡದೇ ನಿಂತಿದ್ದಾಗ, ಹತ್ತಿರ ಬಂದು ಮೇಡಂ ಇಲ್ಲೇ ಒಂದು ಹೋಟೆಲ್ ಇದೆ ಬುಕ್ ಮಾಡ್ತೀನಿ, ನನ್ನ ಜೊತೆ ಎರಡು ದಿನ ಇರ್ತೀರಾ? ಎಂದದ್ದನ್ನು ಕೇಳಿ ಕೈಕಾಲು ಗಳು ಅದುರ ಹತ್ತಿದವು. ಅಷ್ಟು ಹೊತ್ತಿಗೆ ನನ್ನ ಬಸ್ ಬಂದಿದ್ದರಿಂದ ಓಡಿ ಹೊತ್ತಿಕೊಂಡು ಬಚಾವಾದೆ.

‘ಯಾಕೇ ಇಷ್ಟು ಹೊತ್ತು ಎಲ್ಲಾ ನಿನಗಾಗಿ ಕಾಯ್ತಾ ಇದ್ದಾರೆ’ ಎಂದು ಅಕ್ಕ ಗದರಿಕೊಂಡಾಗ ಯಾವ ವಿಷಯವನ್ನೂ ಹೇಳದೇ ತೆಪ್ಪಗಾದೆ. ಹೇಳಿದ್ದಿದ್ದರೆ your feminism is disgusting ಎನ್ನುವ ಬೈಗುಳ ನನ್ನ ಮಕ್ಕಳಿಂದಲೇ ಕೇಳಬೇಕಾಗುತ್ತಿತ್ತು?
ಹೆಂಗಸು ಧೈರ್ಯವಾಗಿ ಓಡಾಡಿದರೂ, ಪುಕ್ಕಲಾಗಿ ಮನೆಯೊಳಗೇ ಕುಳಿತರೂ easily accessable …

Leave a Reply