fbpx

ನಮ್ಮ ಮನೆ ಹತ್ರ..  ಮಟನ್ ಶಾಪಲ್ಲಿ ಇತ್ತು ಸಾರ್

Miroslav Holub

 

 

 

 

 

 

 

ಕನ್ನಡಕ್ಕೆ: ಚಿದಂಬರ ನರೇಂದ್ರ 

ಮಕ್ಕಳಾ
ನೆಪೋಲಿಯನ್ ಯಾವಾಗ್ ಹುಟ್ಟಿದ್ದು
ಹೇಳಿ ನೋಡೋಣ
ಟೀಚರ್ ಪ್ರಶ್ನೆ.

ಸಾವಿರ ವರ್ಷ ಹಿಂದೆ ಸರ್, ಮಕ್ಕಳು
ಹೂಂsssss….
ನೂರು ವರ್ಷ ಸಾರ್ ,
ಏನಂದ್ರಿ….
ಹೋದ ವರ್ಷ ಸಾ…..
ಯಾರಿಗೂ ಗೊತ್ತಿಲ್ಲ.

ಮಕ್ಕಳಾ
ನೆಪೋಲಿಯನ್ ಏನ್ ಮಾಡ್ದ?
ಯುದ್ಧ ಗೆದ್ದ ಸಾರ್…..
ಸೋತ ಸಾರ್…..
ಗೊತ್ತಿಲ್ಲ ಸಾರ್.

ನಮ್ಮ ಮನೆ ಹತ್ರ
ಮಟನ್ ಶಾಪಲ್ಲಿ ಇತ್ತು ಸಾರ್
ನೆಪೋಲಿಯನ್ ಅಂತ ನಾಯಿ.
ಫ್ರಾಂಕ್ ಕೂಗಿದ.

ಓನರ್ ಒಂದೇಸವ್ನೆ ಹೊಡೀತಿದ್ದ
ಹೋದ್ ವರ್ಷ ಸತ್ತೋಯ್ತು ಸಾರ್ ಹೊಟ್ಟೆಗಿಲ್ದೆ.

ಪಾಪ ನೆಪೋಲಿಯನ್ !!
ಮಕ್ಕಳೆಲ್ಲ ಮಂಕಾದವು..

Leave a Reply