ನನ್ನ ಮೊದಲ ಹೀರೋ ಕುಟ್ಟ ಬ್ಯಾರಿಯೇ ಐ ಲವ್ ಯೂ

 

 

ಪುರುಷೋತ್ತಮ ಬಿಳಿಮಲೆ

 

 

 

ಅವ ಕೊಡುತ್ತಿದ್ದ ಚಹಾವೇ ನನ್ನ ಮೊದಲ ಪುಕ್ಕಟೆ ಡ್ರಿಂಕ್ಸ್!

ಬಂಟಮಲೆ ಕಾಡಿನೊಳಗೆ ಸುಮಾರು ೧೦ ಕಿ ಮೀ ನಡೆದು ಬಂದು, ನಮ್ಮ ಮನೆಗೆ ಮೀನು ಮತ್ತು ಬೆಲ್ಲ ತರುತ್ತಿದ್ದ ಕುಟ್ಟ ಬ್ಯಾರಿ ನನ್ನ ಮೊದಲ ಹೀರೋ, ಬಂಟಮಲೆಯ ಆಚೆಗೆ ಮಾತ್ರವಲ್ಲ ಕಡಲಾಚೆಗೂ ಇರುವ ಊರುಗಳ ಬಗ್ಗೆ ಅವನು ನೀಡುತ್ತಿದ್ದ ಮಾಹಿತಿಗಳೇ ನನ್ನ ಮೊದಲ ಓದು. ಮೀನು ಕಟ್ಟಿ ತಂದ ನವಭಾರತ ಪೇಪರ್ ನ ತುಂಡುಗಳೇ ನನ್ನ ಮೊದಲ ಪುಸ್ತಕ. ಪಂಜದಲ್ಲಿ ನಡೆಯುತ್ತಿದ್ದ ಯಕ್ಷಗಾನದ ಟೆಂಟಿನ ಬಳಿ ಬಂದು, ನನ್ನನ್ನು ಹುಡುಕಿ ಅವ ಕೊಡುತ್ತಿದ್ದ ಚಹಾವೇ ನನ್ನ ಮೊದಲ ಪುಕ್ಕಟೆ ಡ್ರಿಂಕ್ಸ್! ಅಪ್ಪನಿಂದ ಖರೀದಿಸಿದ ಒಂದೆರೆಡು ಕಿಲೋ ಅಡಿಕೆಯನ್ನು ನಮ್ಮಂಗಳದಲ್ಲೇ ಒಣಗಲು ಹಾಕಿ ಹೋಗುತ್ತಿದ್ದ ಆತ. ಮತ್ತೆ ಅವ ಅದನ್ನು ಕೊಂಡೊಯ್ಯುವವರೆಗೂ ಅದರಿಂದ ಒಂದಡಿಕೆಯೂ ಕದಲದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು! ಅದೆಂಥಾ ವಿಶ್ವಾಸ ! ೮೦ ರ ದಶಕದಲ್ಲಿ ಐದು ಸೆಂಟ್ಸ್ ಜಾಗಕ್ಕೆ ಅರ್ಜಿ ಸಲ್ಲಿಸಿ, ಕೊನೆಗೂ ನೆಲಸಿಗದೆ , ನಿರಾಶೆಯಿಂದ ತೀರಿಕೊಂಡ ಕುಟ್ಟ ಬ್ಯಾರಿಯೇ, ಐ ಲವ್ ಯೂ!

 

Leave a Reply