ಮೀನ ಪುಳಕ ತರುತ್ತೇನೆ..

 

ಹೆಚ್.ಆರ್.ಸುಜಾತಾ

 

ಮುಳುಗಿಸುತ್ತೀಯಾ? ಚಿಪ್ಪೊಡೆದು

ಮುತ್ತು ರತ್ನಗಳ ಆಯ್ದು ತರುತ್ತೇನೆ

 

ತೇಲಿಬಿಡುತ್ತೀಯಾ? ಹುಟ್ಟುಹಾಕಿ

ಮೀನ ಪುಳಕ ತರುತ್ತೇನೆ.

 

ಕರಗಿಸಿಕೊಳ್ಳುತ್ತೀಯಾ! ತಲ್ಲಣವಿಲ್ಲದ

ಮಗುವಂತೆ ಚೆಲುವಾಗುತ್ತೇನೆ.

 

 

 

 

Author: Avadhi GK

Leave a Reply