ಗುಲ್ಜಾರ್ ಕವಿತೆ – ಗ್ರಹಣದ ಶುಭಾಶಯ..

 

 

 

 

ಮೂಲ: ಗುಲ್ಜಾರ್

ಕನ್ನಡಕ್ಕೆ: ಚಿದಂಬರ ನರೇಂದ್ರ

 

 

ಕಾಲೇಜಿನ ಹಿಂದಿನ ಡೆಸ್ಕುಗಳಲ್ಲಿ
ರೋಮಾನ್ಸ್ ಶುರುವಾಗೋದೇ ಹೀಗೆ.
ಸುಮ್ಮನೇ ಎರಡು ಕೈಗಳು
ನಿಧಾನವಾಗಿ
ಹತ್ತಿರ ಹತ್ತಿರ ಚಲಿಸಿ
ಒಂದನ್ನೊಂದು ಮುಟ್ಟಿಬಿಡುತ್ತವೆ.

ನಂತರ
ಅಚಾನಕ್ ಆಗಿ
ಒಂದು ಕೈ, ಇನ್ನೊಂದನ್ನು
ಪೂರ್ತಿಯಾಗಿ ಅವರಿಸಿಕೊಂಡು
ಒಂದಾಗಿ ಬಿಡುತ್ತವೆ.

Exactly ಇದೇ ಥರ
ಸೂರ್ಯ, ಚಂದ್ರನನ್ನು
ಆವರಿಸಿಕೊಂಡುಬಿಟ್ಟಿದ್ದಾನೆ ಇವತ್ತು
ಆಕಾಶದಲ್ಲಿ.

ಯಾರೋ ಈ ಪ್ರಣಯವನ್ನೇ
ಗ್ರಹಣ ಎನ್ನುತ್ತಿದ್ದಾರೆ.

 

Author: Avadhi GK

2 thoughts on “ಗುಲ್ಜಾರ್ ಕವಿತೆ – ಗ್ರಹಣದ ಶುಭಾಶಯ..

Leave a Reply