fbpx

ಯಜ್ಞರ ಲೆನ್ಸ್ ಕಣ್ಣಲ್ಲಿ – ಮಹಾಮಜ್ಜನದಲಿ ಮಿಂದೆದ್ದ ಬಾಹುಬಲಿ..

ಯಜ್ಞರ ಲೆನ್ಸ್ ಕಣ್ಣಲ್ಲಿ – ಶ್ರವಣಬೆಳಗೊಳದ ವಿರಾಗಿಯ ಮಹಾಮಜ್ಜನ

45 ವರ್ಷಗಳ ಫೋಟೋಗ್ರಫಿ ಅನುಭವವುಳ್ಳ ಮಂಗಳೂರಿನ ಸುಪ್ರಸಿದ್ಧ ಛಾಯಾಗ್ರಾಹಕ ಯಜ್ಞ ಬಾಹುಬಲಿಯ ಮಹಾಮಜ್ಜನದ ಫೋಟೋ ತೆಗೆದರೆ ಹೇಗಿರುತ್ತದೆ? ಅದೂ ಒಂದಲ್ಲ ಎರಡಲ್ಲ…ನಾಲ್ಕು ಮಹಾ ಮಸ್ತಕಾಭಿಷೇಕವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದ ಅನುಭವಿಯಾದರೆ..!!

ಹೌದು..!! ಛಾಯಾಪತ್ರಕರ್ತನಾಗಿ 1981 ರಿಂದ ಸತತ ನಾಲ್ಕನೇ ಮಹಾ ಮಸ್ತಕಾಭಿಷೇಕದ  ಫೋಟೊ ತೆಗೆದ ದಾಖಲೆ ಯಜ್ಞರದು..!!ಮಹಾ ಮಜ್ಜನ ಚಿತ್ರಣ ಮಹಾಪಯಣದ ಬಗ್ಗೆ  ಯಜ್ಞರು ಏನಂತಾರೆ?

“ 1981 ರಲ್ಲಿ ಸರಿಯಾದ ರಸ್ತೆಯೂ ಇರದಿದ್ದಾಗ,  ಪರಿಸರ ತಜ್ಞ ಗೆಳೆಯ ಶ್ರೀಪಡ್ರೆಯವರೊಂದಿಗೆ ಸ್ಕೂಟರಿನಲ್ಲಿ ಪುತ್ತೂರಿನಿಂದ ಶ್ರವಣಬೆಳಗೊಳದವರೆಗೆ ಹೋಗಿದ್ದೆವು.ಆಗ ಆ ಊರೂ ಏನೇನೂ ಬೆಳೆದಿರಲಿಲ್ಲ. ವಿಶೇಷವೆಂದರೆ, ಚಾರುಕೀರ್ತಿ ಭಟ್ಟಾಚಾರ್ಯ ಸ್ವಾಮೀಜಿಯವರ ನೇತೃತ್ವದ ಮೊದಲ ಮಹಾಮಸ್ತಕಾಭಿಷೇಕ ಅದಾಗಿತ್ತು. ಅನಂತರ ಊರೂ ದೊಡ್ಡದಾಯಿತು. ಮಜ್ಜನಕ್ಕೂ ರಂಗೇರಿತು.1993ರ ಮಸ್ತಕಾಭಿಷೇಕದ ವಿಶೇಷವೆಂದರೆ- ವಿಶ್ವದ ಎಲ್ಲೆಡೆಯಿಂದ ಹೂಗಳನ್ನು ತರಿಸಿ  ಪುಷ್ಪಾಭಿಷೇಕ ಮಾಡಿದ್ದು.ಇಡೀ ಮಸ್ತಕಾಭಿಷೇಕದಲ್ಲಿ ನನಗೆ ಎದ್ದು ಕಾಣಿಸಿದ ಗಮನಾರ್ಹ ಅಂಶವೆಂದರೆ..ಉತ್ಸವದುದ್ದಕ್ಕೂ ಇಡೀ ನಗರದಲ್ಲಿ ಕಂಡ ಪ್ರಶಾಂತ ವಾತಾವರಣ..! ಮಹಾ ವಿರಾಗಿಯ ಪ್ರಶಾಂತ ಮುಖಮುದ್ರೆಯಂತೇ..!!”

ಅಂದ ಹಾಗೆ, ಯಜ್ಞರು ಶ್ರವಣಬೆಳಗೊಳದ ಕುರಿತಾಗಿ ‘ಚಿಕ್ಕಬೆಟ್ಟ ದರ್ಶನ’ ಹಾಗೂ ‘ಇಂದ್ರಗಿರಿ ದರ್ಶನ’ ವೆಂಬ ಎರಡು ಛಾಯಾ ಸಂಪುಟವನ್ನು ಹೊರತಂದಿದ್ದಾರೆ.

ಇಲ್ಲಿದೆ ನೋಡಿ..ಯಜ್ಞರು ಕಂಡ ಬಾಹುಬಲಿಯ ಮಹಾಮಜ್ಜನದ ಲೆನ್ಸ್ ನೋಟ..!!

 

Leave a Reply