Breaking News: ವಿಜಯಾ ದಬ್ಬೆ ಇನ್ನಿಲ್ಲ

ಹಿರಿಯ ಸಾಹಿತಿ, ಅತ್ತಿಮಬ್ಬೆ ಪ್ರಶಸ್ತಿ ಪುರಸ್ಕೃತರಾದ ವಿಜಯಾ ದಬ್ಬೆ ಇಂದು ಸಂಜೆ ನಿಧನರಾದರು.

ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಅಮೂಲ್ಯ ಕೊಡುಗೆ ನೀಡಿದ್ದ ವಿಜಯಾ ದಬ್ಬೆ ಅವರು ರಾಜ್ಯದ ಪ್ರಮುಖ ಸಾಹಿತಿ

ವಿಕಿಪೀಡಿಯಾ ಕಂಡಂತೆ-

ವಿಜಯಾ ದಬ್ಬೆ – ಕನ್ನಡದ ಮೊಟ್ಟ ಮೊದಲ ಸ್ತ್ರೀವಾದಿ ಲೇಖಕಕಿ ಎಂಬ ಅಗ್ಗಳಿಕೆ ಇವರದು. ವಿಜಯಾ ದಬ್ಬೆಯವರು ಹಾಸನ ಜಿಲ್ಲೆಯ ಬೇಲೂರಿನ ದಬ್ಬೆಯಲ್ಲಿ ೧೯೫೧ ಜೂನ್ ೧ ರಂದು ಜನಿಸಿದರು. ದಿನಾಂಕ 23.02.2018 ಸಂಜೆ ನಿಧನರಾದರು.

ಇವರು ೧೨ಕ್ಕೂ ಹೆಚ್ಚು ಕೃತಿಗಳನ್ನು ಹಾಗು ೬೦ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ‘ಇರುತ್ತವೆ’ ಕವನ ಸಂಕಲನಕ್ಕೆ ಉದಯೋನ್ಮುಖ ವರ್ಧಮಾನ ಪ್ರಶಸ್ತಿ ಲಭಿಸಿದೆ.

ಇವರ ‘ಇತಿಗೀತಿಕೆ’ ಕವನ ಸಂಕಲನಕ್ಕೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ೧೯೯೬ರ ಮಾತೋಶ್ರೀ ರತ್ನಮ್ಮ ಹೆಗ್ಗಡೆ ದತ್ತಿ ನಿಧಿಯ ತೃತೀಯ ಬಹುಮಾನ ಲಭಿಸಿದೆ.

ವಿಜಯಾ ದಬ್ಬೆಯವರು ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕಿಯಾಗಿದ್ದು, ಪುಸ್ತಕ ಪ್ರಕಟಣೆ ಸಾಹಿತ್ಯ ಪತ್ರಿಕೆಯ ಸಂಪಾದಕಿ ಸಹ ಆಗಿದ್ದರು.

ಪ್ರಶಸ್ತಿಗಳು

ಕರ್ನಾಟಕ ಸರ್ಕಾರದ “ಅತ್ತಿಮಬ್ಬೆ ಪ್ರಶಸ್ತಿ”

ಕರ್ನಾಟಕ ಲೇಖಕಿಯರ ಸಂಘದ “ಅನುಪಮಾ ಪ್ರಶಸ್ತಿ”

ಕರ್ನಾಟಕ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವ

ವರ್ಧಮಾನ ಪ್ರಶಸ್ತಿ

ರತ್ನಮ್ಮ ಹೆಗಡೆ ಪ್ರಶಸ್ತಿ

ಕನ್ನಡ ಸಾಹಿತ್ಯ ಪರಿಷತ್ತಿನ ಹಲವಾರು ದತ್ತಿ ಪ್ರಶಸ್ತಿಗಳು

ಇವರ ಕೆಲವು ಕೃತಿಗಳು:

ಕವನ ಸಂಕಲನ

ಇರುತ್ತವೆ.(೧೯೭೫)

ನೀರು ಲೋಹದ ಚಿಂತೆ.(೧೯೮೫)

ತಿರುಗಿ ನಿಂತ ಪ್ರಶ್ನೆ.(೧೯೯೫)

 

ಸಂಶೋಧನೆ

ನಯಸೇನ

ನಾಗಚಂದ್ರ ಒಂದು ಅಧ್ಯಯನ

ಹಿತೈಷಿಯ ಹೆಜ್ಜೆಗಳು

ಸಾರಸರಸ್ವತಿ

ಹಿತೋಫಿಯಾ ಹೆಜ್ಜೆಗಳು – ಪಿಎಚ್ ಡಿ ಪ್ರಬಂಧ.

 

ವಿಮರ್ಶನ ಸಾಹಿತ್ಯ

 

ಮಹಿಳಾ ಸಾಹಿತ್ಯ ಸಮಾಜ.

ನಾರಿ ದಾರಿ ದಿಗಂತ(೧೯೭೭).

ಮಹಿಳೆ ಮತ್ತು ಮಾನವತೆ.

ಸಂಪ್ರತಿ .

 

ಸಂಪಾದನೆಗಳು

ಶ್ಯಾಮಲಾ ಸಂಚಯ

ಹಿತೈಷಿಣಿಯ ಹೆಜ್ಜೆಗಳು

ಸಾರಸರಸ್ವತಿ

10 comments

 1. ನಿನ್ನೆ ಪುಟ್ಟಣ್ಣ, ಇಂದು ವಿಜಯಕ್ಕ, ನಾಳೆ ನಾನು.

  • ಸರ್, ಹಾಗನ್ಬೇಡಿ ಪ್ಲೀಸ್…
   ಹಾಗೆ ನೋಡುತ್ತಾ ಹೋದರೆ… ನಾಡಿದ್ದು ನಾನೂ..ಅಲ್ವೇ..?!

 2. ವಿಜಯಾ ಮೇಡಂ,… ಹೋಗಿಯೇಬಿಟ್ಟಿರಾ…
  ಅದೊಂದು ದಾರುಣ ಅಪಘಾತ, ಇಪ್ಪತ್ತು ವರ್ಷಗಳ ಹಿಂದೆ ಘಟಿಸದೇ ಹೋಗಿದ್ದರೆ…ಇನ್ನೆಷ್ಟು ಪುಸ್ತಕಗಳು ತಮ್ಮಿಂದ ಹೊರಬರುತ್ತಿದ್ದವೋ…
  ತುಂಬಾ ದುಃಖವಾಗುತ್ತಿದೆ..

  ಪದೇಪದೇ ಕೇಳಿಬರುತ್ತಿರುವ ಪ್ರತಿಭಾವಂತರ ಸಾವಿನ ಸುದ್ದಿಗಳು ಅತ್ಯಂತ ಆಘಾತಕಾರಿಯಾಗಿ ಕಾಡುತ್ತಿವೆ.

 3. ಬಹಳ ನೋವಿನ ಸಂಗತಿ..ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ..

 4. ಕನ್ನಡತಿಯರ ಒಡತಿ ಇನ್ನಿಲ್ಲ ವೆನ್ನುವುದು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ‌.ಅವರ ಆತ್ಮಕ್ಕೆ ಶಾಂತಿ ಸಿಗಲಿ.

 5. ಅನೇಕ ಚಳುವಳಿಗಳಲ್ಲಿ ನಮ್ಮ ಜೊತೆ ಪಾದರಸದಂತೆ ಓಡಾಡಿಕೊಂಡಿದ್ದ ಡಾ. ವಿಜಯಾ ದಬ್ಬೆ ಅವರು ಅಪಘಾತವೊಂದರಲ್ಲಿ ಎಲ್ಲವನ್ನೂ ಕಳಕೊಂಡು ನಿಶ್ಚಲರಾಗಿದ್ದರು. ನಿಧಾನವಾಗಿ ಚೇತರಿಸಿಕೊಂಡ ಅವರು ಕೆಲವು ನೆನಪುಗಳನ್ನು ಮರಳಿ ಪಡೆದುಕೊಂಡಿದ್ದರು. ಇವತ್ತು ಅವರು ಶಾಶ್ವತವಾಗಿ ಮರೆಯಾಗಿದ್ದಾರೆ. ನಮ್ಮನ್ನು ಸದಾ ಎಚ್ಚರದಲ್ಲಿರಿಸಿದ್ದ ಆ ಸಂಗಾತಿಗೆ ನನ್ನ ಅಂತಿಮ ನಮನಗಳು

Leave a Reply