fbpx

ದೇವರು ಕಿವಿ ಕಳೆದುಕೊಂಡಿದ್ದಾನೆ..

 

ಎನ್.ಶಂಕರ ಕೆಂಚನೂರ

 

ಮದ್ದು ಗುಂಡುಗಳ
ಕಿವಿಗಡಚಿಕ್ಕುವ ಸದ್ದು
ದೇವರನ್ನು ಕಿವುಡಾಗಿಸಿದೆ

ವ್ಯರ್ಥ ಪ್ರಾರ್ಥಿಸದಿರಿ
ಇಲ್ಲಿಂದ
ನಿಮ್ಮ ನಿತ್ಯದ ಪ್ರಾರ್ಥನೆಯ ಸದ್ದು
ದೇವರಿಗೆ ತಲುಪಲಾರದು

ಅದಕ್ಕೆಂದೇ ಪ್ರಾರ್ಥಿಸುವವರನ್ನು
ಕಿವಿಯಿಲ್ಲದ ದೇವರು
ತನ್ನಲ್ಲಿಗೇ ಕರೆಸಿಕೊಳ್ಳಲಿದ್ದಾನೆ

ಅಲ್ಲಿ ಹೋಗಿ
ಮತ್ತೆ ಇಲ್ಲಿನ ಕುರಿತು ದೂರು ಹೇಳದಿರಿ
ದೇವರು ಕಿವಿ ಕಳೆದುಕೊಂಡಿದ್ದಾನೆ

2 Responses

  1. ಕೈದಾಳ್ ಕೃಷ್ಣಮೂರ್ತಿ says:

    nice

  2. nutana doshetty says:

    Nice

Leave a Reply

%d bloggers like this: