fbpx

ಲೆನಿನ್ ಪ್ರತಿಮೆನಾ ಕೆಡವಿ ಸಂಭ್ರಮಿಸ್ತಿದೆ..

ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ..

ಮಂಜುಳಾ ಹುಲಿಕುಂಟೆ 

ತ್ರಿಪುರದಲ್ಲಿ ಗೆದ್ದೆ ಅನ್ನೋದನ್ನ ಒಪ್ಪಿಸೋಕೆ ಪರದಾಡ್ತಿರೋ ಬಿಜೆಪಿ…

ಲೆನಿನ್ ಪ್ರತಿಮೆನಾ ಕೆಡವಿ ಸಂಭ್ರಮಿಸ್ತಿದೆ…

ನಂಗೆ ಭರತ, ಬಾಹುಬಲಿ ಕಥೆ ನೆನಪಾಗ್ತಿದೆ..

ಭರತನ ಪಥನ ಮೊದಲಾಗಿದ್ದು ಇನ್ನಾರದೋ ಹೆಸ್ರನ್ನ ಅಳಿಸಿ ಅದೇ ಶಾಸನದ ಮೇಲೆ ಅವ್ನ ಹೆಸ್ರನ್ನ ಕೆತ್ತಿಸಿದಾಗ್ಲೆ…ಅಂಗಂತ ಬಿಜೆಪಿ ಭರತನಾಗೆ ದಿಗ್ವಿಜಯ ಮಾಡ್ಕೊಂಡ್ಬಂದ ಪಕ್ಷ ಏನಲ್ಲ ಅದ್ಕೆ ಅಂಥಾ ಸ್ವಂತಿಕೆಯ ಇತಿಹಾಸನೂ ಇಲ್ಲ…

ಪ್ರಾಮಾಣಿಕವಾಗಿ ಗೆಲುವು ಸಾಧಿಸೋ ಯಾರೊಬ್ರಿಗೂ ಇಂಥಾ ವಿಕೃತ ಆಲೋಚನೆಗಳು ಬರಲ್ಲ ….ಕರ್ನಾಟಕದಲ್ಲಿ ಅನ್ನ ತಿನ್ನೋಜನ ಹೆಚ್ಚಿದ್ದಾರೆ..ಜೊತೆಗೆ ಪ್ರಜ್ಞಾವಂತ ಯುವಜನ ಇದಾರೆ..ಕರ್ನಾಟಕದಲ್ಲಿ ಬಸವ,ಬುದ್ಧ,ಕುವೆಂಪು, ಅಂಬೇಡ್ಕರ್ ಪ್ರತಿಮೆಗಳನ್ನ ಕೆಡವೋ ಅವಕಾಶವನ್ನ ಈ ಮನುವ್ಯಾದಿಗಳಿಗೆ ಕೊಡ್ಬಾರ್ದು…

ಪಾರದರ್ಶಕವಾದ ಚುನಾವಣೆ ನಡೆದು ಮನುಷ್ಯತ್ವಕ್ಕೆ ಜಯ ಸಿಗಬೇಕು..ಕರ್ನಾಟಕದ ಪ್ರಜ್ಞಾವಂತ ಜನಸಮುದಾಯ ಇನ್ನಷ್ಟು ಎಚ್ಚರಿಕೆಯಿಂದ ಇರ್ಬೇಕು…ತ್ರಿಪುರ ನಮಗೊಂದು ಪಾಠವಾಗ್ಲಿ…

5 Responses

 1. Yamuna says:

  ಹೌದು ಅದು ಕೆಂಪಾಗಿತ್ತು
  ನಿನ್ನೆ ಮೊನ್ನೆಯವರೆಗೆ
  ಬಲಹೀನರ ಬದುಕು ರಕ್ಷಿಸಲು
  ಬಾವುಟವಾಗಿ ಬಾನೆತ್ತರಕ್ಕೆ ಹಾರುತ್ತಾ
  ವಿನಮ್ರತೆಯ ರಕ್ಷಕನಾಗಿ… ಕೆಂಬಾವುಟವಾಗಿ…

  ಈಗ ಮತ್ತೆ ಕೆಂಪಾಗಿಸುತ್ತಿದ್ದಾರೆ ಕೇಸರಿಯವರು
  ಬೀದಿಯ ಬದಿಯೊಂದೇ ಅಲ್ಲ ಮನೆಮನೆಗಳಲ್ಲೂ ಉರಿಸುತ್ತಿದ್ದಾರೆ, ಹೆಂಗಳ ಮೈ ಪರಚಿ ರಕ್ತ ಒಡೆಯುತ್ತಿದ್ದಾರೆ,
  ಅವರು ಹೊತ್ತಿಸಿದ ಬೆಂಕಿಯಿಂದ
  ಅದು ಮತ್ತೆ ಕೆಂಪಾಗುತ್ತಿದೆ
  ಕುಂಚದ ಇಂಚಿಂಚು ಬಿಡದೇ ಕರಕಲಾಗಿ
  ಹೊಗೆಯಾಡುತ್ತಿದೆ ಅಹಂಕಾರದಿಂದ …

  ನಂಟೇನಿಲ್ಲ ಬಿಡಿ, ಕೆಂಬಾವುಟಕ್ಕೂ ಕೆನ್ನಾಲಿಗೆಗೂ
  ಕೋಗಿಲೆಗೂ ಕೋವಿಗೂ
  ಇರುವುದೆಲ್ಲ ಜ್ವಾಲಾಮುಖಿಯಷ್ಟೇ…
  ಹರಿಸಿದ ರಕ್ತ ಕನ್ನೆತ್ತರುಗಟ್ಟಿಹೋಗಿದೆ

  ಈಗ ಶುರುವಿಟ್ಟಿದೆ, ಎಲ್ಲಿಂದಲೂ ನೋಡಿ,
  ಕಿಟಕಿ, ಬಾಗಿಲು ಸಂಧಿ, ಶಾಲೆಯ ವರಾಂಡಾ ಅಥವಾ ಜೋಪಡಿಯ ಕಿಂಡಿಯಿಂದ
  ಈ ಕ್ಷಣದಲ್ಲಿ ಉರಿಯ ಬೆಂಕಿ ಹತ್ತಿದೆ
  ಬಣಿವೆಯ ಹುಲ್ಲು ದನಕ್ಕೂ ಇಲ್ಲ,
  ಗುಡಿಸಲ ಹೊದಿಸಲೂ ಸಿಕ್ಕಿಲ್ಲ …

  ಕೆನ್ನಾಲಿಗೆ ಚಾಚುತ್ತಿದೆ ಉಪಖಂಡದಗಲ
  ಮತ್ತೆ ಕಾಡಿದೆ… ಹಕ್ಕಿನ ಗುಡಿಸಿಲಿಗೆ ಹಂಗಿನ ಭಯ

  ಆತ ಹೇಳಿದ್ದ “ಸೂರ್ಯ ಮುಳುಗುವಾಗ ಕೆಂಪಾಗಿತ್ತು ಈಗ ಉದಯಿಸುತ್ತಿದ್ದಾನೆ ಅದಕ್ಕೆ ಕೇಸರಿಯಾಗಿದೆ”
  ಮಾಣಿಕ್ಯ ಎಸೆಯಿರಿ; ವಜ್ರ ಕೊಡ್ತೇನೆ.”
  ಸಾಧುವಲ್ಲದ ಮಾತು ದೊರೆಯದು!!
  ಕೈಯ ವಜ್ರದುಂಗುರ ಕೊರಳ ಉರುಳಾಗುವ ಮುನ್ನ
  ಮತ್ತೆದ್ದು ಬರುತ್ತದೆ ಅನ್ನದುಸಿರ ಕಾಯುವ
  ಮನದ ಮಾಣಿಕ್ಯ ಸಮತಾವಾದ …
  (ವ್ಯಕ್ತಿ ಶ್ರೇಷ್ಟತೆಯನ್ನು ಒಪ್ಪದ ಆದರೆ ವ್ಯಕ್ತಿಗಳಲ್ಲಿ ಶ್ರೇಷ್ಟ ಬದ್ಧತೆಯನ್ನು ಸೃಷ್ಟಿಸಿ ಸಮಾಜಮುಖಿಯಾಗಿ ರೂಪಿಸುವ ಸಿದ್ಧಾಂತವನ್ನು ತಮ್ಮದಾಗಿಸಿಕೊಂಡ ಮಾಣಿಕ್ಯರ ಸ್ವಗತದಲ್ಲಿ ಈ ದಾಳಿಗಳ ಬಗ್ಗೆ ಹೀಗೂ ಯೋಚಿಸಿರಬಹುದೇ?)

 2. ಕೈದಾಳ್ ಕೃಷ್ಣಮೂರ್ತಿ says:

  ಇನ್ನೊಂದಿಷ್ಟು ವಿವರಣೆ ಇದ್ದಿದ್ದರೆ?

 3. ಶಿವಶಂಕರ ಭಟ್ಟ says:

  ಹಿಂದೆ ಜನಗಳು ಒಪ್ಪಿಕೊಂಡ ಒಂದು ಅಂಶವನ್ನು/ಪ್ರತಿಮೆ/ಪ್ರತೀಕಗಳನ್ನು ಭಂಜನೆ ಮಾಡುವುದು ಸರಿಯಲ್ಲ. ಅದು ಒಪ್ಪಿಕೊಳ್ಳುವ ಮತು. ಅದರ ಜತೆಗೇ ಮರೆಯಬಾರದ ವಿಷಯವೆಂದರೆ ಯಾವ ರಾಜಕೀಯ ವಾದವೇ ಇರಲಿ ಅದು ಕಾಲ ಬದಲಾದಂತೆ ಬದಲಾಗುವುದು ಸಹಜ. ಬದಲಾವಣೆ ಜಗದ ನಿಯಮ. ಅದನ್ನೂ ನಾವು ಒಪ್ಪಿಕೊಳ್ಳಲು ತಯಾರಾಗಿರಬೇಕು. ಸಾರ್ವಕಾಲೀಕ ಸತ್ಯ ಎನ್ನುವುದು ಇರಲು ಸಾಧ್ಯವಿಲ್ಲ. ಇದು ಕೇವಲ ರಾಜಕೀಯಕ್ಕೆ ಸಂಬಂಧಪಟ್ಟಿದ್ದಲ್ಲ. ನಮ್ಮ ಜೀವನದ ಎಲ್ಲಾ ರಂಗಗಳಿಗೂ ಅನ್ವಯಿಸುತ್ತದೆ.ಇದನ್ನು ನಾವು ಮನಗಾಣಬೇಕಲ್ಲವೆ?

 4. Shreenidhi ds says:

  ರೆಡ್ ಟೆರರ್ ‘ ಹೆಸರು ಕೇಳಿದ್ದೀರ? ಹೆಸರಿನಲ್ಲೇ ಭಯ’ ರಕ್ತ ಎರಡನ್ನೂ ಇರಿಸಿಕೊಂಡಿರುವ ಈ ಶಬ್ದ ಚಾಲ್ತಿಗೆ ಬಂದಿದ್ದೇ ಲೆನಿನ್ ಎಂಬ ಮಹಾನುಭಾವ ರಷ್ಯ ನಾಯಕನಾದಾಗ !
  ತನ್ನ ನಾಯಕತ್ವ ವಿರೋಧಿಸಿದವರನ್ನೆಲ್ಲರನ್ನು ಬೂರ್ಷ್ವಾ ,ಹೆಸರಿನಲ್ಲಿ ,ದೇಶದ್ರೋಹದ ಹೆಸರಿನಲ್ಲಿ ಅತ್ಯಂತ ಕ್ರೂರವಾಗಿ ಕೊಲ್ಲಿಸಿದ ಮಹಾನಾಯಕ ಭಾರತೀಯ ಕಮ್ಯುನಿಷ್ಟರ ಆರಾಧ್ಯ ದೇವ ಇದೇ ಲೆನಿನ್.
  ಕೊಲ್ಲುವುದೆಂದರೆ ಬರಿಯ ಜೀವ ತೆಗೆಯುವುದಲ್ಲ.
  ಅತ್ಯಂತ ಯಾತನಾಮಯವಾಗಿ, ವಿಕೃತವಾಗಿ ಕೊಲ್ಲುತ್ತಿದ್ದ ಲೆನಿನ್ ಸೇನೆಯ ವಿಧಾನಗಳನ್ನು ಓದಿದರೆ ಬಹಳಷ್ಟು ರಾತ್ರಿ ನಿದ್ರೆ ಬರಲಾರದು.
  ಒಳಭಾಗವೆಲ್ಲ ಚೂಪುಮೊಳೆಗಳಿಂದ ತುಂಬಿಸಿ ಅದರೊಳಗೆ ಮನುಷ್ಯರನ್ನು ಕಟ್ಟಿ ಸಾಯುವವರೆಗೆ ಉರುಳಿಸುತ್ತಿದ್ದ ಡ್ರಮ್ಮುಗಳು.
  ಮರದ ದಿಮ್ಮಿಗೆ ಕಟ್ಟಿದ ಮನುಷ್ಯರನ್ನು ಸ್ವಲ್ಪಸ್ವಲ್ಪವೇ ಬೆಂಕಿಯೊಳಗೆ ದೂಡುತ್ತ ,ದಿಮ್ಮಿ ಉರಿದಂತೆ ಕಟ್ಟಿದ್ದ ಮಾನವರೂ ಬೇಯುವಂತಿದ್ದ ವ್ಯವಸ್ಥೆ.
  ಪೂರ್ಣ ಸುಲಿದ ಚರ್ಮದೊಂದಿಗೆ ನಗರ ಮಧ್ಯದಲ್ಲಿ ನೇತಾಡಿಸುತ್ತಿದ್ದ ನರಹಂತಕ ನಾಯಕನೇ ಈ ಲೆನಿನ್.
  ವಿರೋಧಿ ಅನ್ನುವ ಹಣೆಪಟ್ಟಿ ಕಟ್ಟಿ ರೆಡ್ ಟೆರರ್ ಕೊಂದಿದ್ದ ಅಮಾಯಕರ ಸಂಖ್ಯೆ ಸುಮಾರು ೨೦ ಲಕ್ಷಕ್ಕಿಂತ ಹೆಚ್ಚು. ರಷ್ಯನ್ ಚರಿತ್ರೆಯಲ್ಲಿ ಅತ್ಯಂತ
  ರಕ್ತಸಿಕ್ತ ಅಧ್ಯಾಯ ಬರೆದ ಕೀರ್ತಿ ಇವನದ್ದು.

  ಇಷ್ಟೆಲ್ಲ ಪುರಾಣ ಹೇಳಲು ಕಾರಣ ,ಭಾರತೀಯತೆಗೆ ಕಪ್ಪು ಚುಕ್ಕೆಯಂತಿದ್ದ ಈ ಮಹಾಶಯನ ಪ್ರತಿಮೆಯನ್ನು ತ್ರಿಪುರದ ಹೊಸ ಸರ್ಕಾರ ಕೆಡವುತ್ತಿದೆ ಅಂತ,ಭಾರತದ ಲಾಲ್ಸಲಾಮ್ ಬ್ರಿಗೇಡು ಧಾರಾಕಾರವಾಗಿ ಅಳುತ್ತಿರುವುದು.
  ಗಾಂಧಿ ನಡೆದ ಹಾದಿಯಲ್ಲಿ ಗೋಧ್ರ ನರಮೇಧ (?)ನಡೆಯಿತು.
  ನಮ್ಮ ಹಾದಿಯಲ್ಲಿ ಬುದ್ಧನ ಬೆಳಕಿದೆ ಅಂತೆಲ್ಲ ಬೊಬ್ಬೆ ಹೊಡೆಯುವ ಈ ಲಾಲ್ ಬ್ರಿಗೇಡಿಗೆ ತ್ರಿಪುರದಂತ ತ್ರಿಪುರ ತೆಕ್ಕೆಯಿಂದ ಜಾರಿ ಹೋಗಿದ್ದು ಸಹಿಸಲಾಗುತ್ತಿಲ್ಲ.ಬಹುಷಃ ಭಾರತದಲ್ಲಿ ಪ್ರಜಾಪ್ರಭುತ್ವ ಇಲ್ಲದೆ ಹೋಗಿದ್ದರೆ ,ಅಧಿಕಾರವುಳಿಸಿಕೊಳ್ಳಲು ಧಾರಾಳವಾಗಿ ‘ರೆಡ್ ಟೆರರ್ ‘ಬಳಸಲು ಹಿಂಜರಿಯುತ್ತಿರಲಿಲ್ಲ.ಈ ಲೆನಿನ್ ಭಕ್ತರು.

  ಅದೇನೆ ಇರಲಿ. ತ್ರಿಪುರಾಸುರನನ್ನು ಸಂಹಾರ ಮಾಡಿದ ತ್ರಿಪುರಾಂಬಿಕೆ ಅಲ್ಲಿ ಸದಾ ನೆಲೆಸುವಂತಾಗಲಿ.

  – ನನ್ನ ಸ್ನೇಹಿತೆ ಪಲ್ಲವಿ ರಾವ್ ಬರೆದ ಈ ಪುಟ್ಟ ಲೇಖನವು ನಿಮ್ಮ ಹಳಹಳಿಕೆಗಳಿಕೆ ಉತ್ತರವಾಗಬಹುದು.

 5. Umesh says:

  ಮದಲನೆಯದಾಗಿ ಲೆನಿನ್ ಪ್ರತಿಮೆ ತ್ರಿಪುರ ಸರ್ಕಾರದ ಅಧಿಕೃತ ಪ್ರತಿಮೆಯಲ್ಲ ಒಂದು ಗುಂಪಿನವರು ಪ್ರತಿಮೆ ಇಟ್ಟಿದ್ರು ಅದನ್ನು ಮತ್ತೊಂದು ಗುಂಪಿನವರು ತೆಗದರು.
  ಎರಡನೆಯದಾಗಿ ಕಮ್ಯುನಿಸ್ಟ್ ಸಿದ್ಧಾಂತ ವಿಗ್ರಹ ಆರಾಧನೆಯನ್ನು ಒಪ್ಪುವುದಿಲ್ಲ
  ಮೂರನೆಯದಾಗಿ ಲೆನಿನ್ ಒಬ್ಬ ಆರ್ಯ ಯೂರೋಪಿನವನು (ಕಾರಣ ಕಮ್ಯುನಿಸ್ಟ್ ರ ಪ್ರಕಾರ ಆರ್ಯರು ಯೂರೋಪ್ ಕಡಿಯಿಂದ ಬಂದು ಭರತ ಖಂಡದ ಮೇಲೆ ಆಕ್ರಮಣ ಮಾಡಿದರು)
  ನಾಲ್ಕನೆಯ ದಾಗಿ ಮನುವಾದಿಗಳು ಯಾರು ಮನುವಿನ ಸಂತಾನದವರು ಅಂದರೆ ಮನು ಮನುಕುಲದ ಅಜ್ಜ ಅಂದರೆ ಎಲ್ಲಾ “ಮನು”ಷ್ಯರು ಮನುಗಳೆ ಮನು=Man= ಮನುಕುಲದ ಅಜ್ಜ

Leave a Reply

%d bloggers like this: