fbpx

ಯಾವ ಧರ್ಮಗಳನ್ನು ಮಾತ್ರ ಬೆಂಕಿಯಲ್ಲಿ ಸುಡಬೇಕು?

ಪ್ರತಿಭಾ ನಂದಕುಮಾರ್ 

ಕ್ರಾಂತಿಕಾರಿ ಜೈನ ಮುನಿ ತರುಣ್ ಸಾಗರ್ ಅವರು ಒಂದೂವರೆ ವರ್ಷದ ಹಿಂದೆ ಆಡಿದ ಮಾತೊಂದು ಇಂದು ಮತ್ತೆ ಜೀವ ತಳೆದಿದೆ.

‘ಅವಧಿ’ಗೆ ಇದಕ್ಕಾಗಿ ಅಭಿನಂದನೆ.

ಸಾವಿರ ವರ್ಷಗಳಿಗೊಮ್ಮೆ ಧರ್ಮವನ್ನು ಸುಡಬೇಕು, ಅಗ್ನಿಯಲ್ಲಿ ಬೆಂದು ಧರ್ಮವು ಕೊಳೆಯನ್ನು ಕಳೆದುಕೊಂಡು ಮತ್ತೆ ಲಕಲಕಿಸುತ್ತದೆ ಎಂದು ಜೈನ ಮುನಿ ತರುಣ್ ಸಾಗರ್ ಹೇಳಿದ್ದರು. ಅವರ ಕಹಿ ಪ್ರವಚನ ಈಗಾಗಲೇ ಎಲ್ಲರಿಗು ಪರಿಚಿತ.

ಕನ್ನಡದ / ಕರ್ನಾಟಕದ ಸಂದರ್ಭದಲ್ಲಿ ಬೌದ್ಧ ಯುಗ ಕಳೆದು ಒಂದು ಸಾವಿರ ವರ್ಷದವರೆಗೆ ಜೈನ ಯುಗ ರಾರಾಜಿಸಿತು. ನಂತರ ಐನೂರು ವರ್ಷಗಳಲ್ಲಿ ಧರ್ಮ ಹೊರಳಿ ಲಿಂಗಾಯತ, ಬ್ರಾಹ್ಮಣ ಧರ್ಮಗಳು ಸರದಿ ಪಡೆದುಕೊಂಡವು. ಈಗ ಮತ್ತೆ ಐನೂರು ವರ್ಷಗಳ ನಂತರ ಲಿಂಗಾಯತ ಮತ್ತು ವೀರಶೈವ ಧರ್ಮಗಳು ಒಡೆದು ಬೆಂಕಿಯಲ್ಲಿ ಬೇಯುತ್ತಿವೆ. ಈ ನಡುವೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಗಳು ಕೂಡ ಕನ್ನಡ ನೆಲಕ್ಕೆ ಕಾಲಿಟ್ಟು ತಮ್ಮ ಜಾಗ ಭದ್ರಪಡಿಸಿಕೊಂಡವು. ಹೀಗೆ ಕಾಲದಿಂದ ಕಾಲಕ್ಕೆ ಧರ್ಮ ಬದಲಾಗುತ್ತಲೇ ಇದೆ.

ಇಪ್ಪತ್ತೆರಡನೆ ಶತಮಾನದಲ್ಲಿ ಧರ್ಮದ ವ್ಯಾಖ್ಯಾನವೇ ಬದಲಾಗಬೇಕು, ಸಾವಿರ ವರ್ಷದ ನಂತರ ಧರ್ಮಕ್ಕೆ ಬೆಂಕಿಯಿಡಬೇಕು ಎಂದು ಹೇಳಿದ ತರುಣ್ ಸಾಗರ್ ಮುನಿ ಅವರು ಅದನ್ನು ದಿಗಂಬರ ಜೈನಕ್ಕೂ ಅನ್ವಯಿಸಬೇಕು.

ದಿಗಂಬರ ಜೈನ ಮುನಿಗಳು ಕನ್ನಡಕ, ವಾಚ್, ನವಿಲುಗರಿಯ ಪುಚ್ಚ ಬಳಸಬಹುದಾದರೆ ಲಂಗೋಟಿಯನ್ನು ಯಾಕೆ  ಹಾಕಿಕೊಳ್ಳಬಾರದು?

ಲಂಗೋಟಿ ಹಾಕಿಕೊಳ್ಳುವುದು ಅವರ ದಿಗಂಬರತ್ವಕ್ಕೆ ಧಕ್ಕೆ ತರುವುದೇ? ಎಲ್ಲವನ್ನು ತ್ಯಜಿಸಿದ ಮುನಿಗಳು ಕನ್ನಡಕ  ವಾಚ್ ನವಿಲುಗರಿಯ ಪುಚ್ಛವನ್ನು ಯಾಕೆ ತ್ಯಜಿಸಿಲ್ಲ? ಅದನ್ನು ಬಳಸಬಹುದಾದರೆ ಲಂಗೋಟಿಗೆ ಯಾಕೆ ನಕಾರ?

ಸಾವಿರ ವರ್ಷಗಳ ನಂತರ ಧರ್ಮವು ಬೆಂದು ಬದಲಾಗಬೇಕು ಅನ್ನುವ ಅವರ ಮಾತನ್ನು ಒಪ್ಪಬಹುದಾದರೆ ಅದು ದಿಗಂಬರ ಧರ್ಮಕ್ಕೂ ಅನ್ವಯಿಸಬೇಕು. ವಿಶಾಲ್ ಧಾಡ್ಲಾನಿ ತರುಣ್ ಸಾಗರ್ ಅವರನ್ನು ಗೇಲಿ ಮಾಡಿ ಹಾಕಿದ ಟ್ವಿಟರ್ ಉಂಟು ಮಾಡಿದ ರಾದ್ಧಾಂತ ಎಲ್ಲರಿಗು ಗೊತ್ತು. ಆ ಕಾರಣಕ್ಕೆ ಧಾಡ್ಲಾನಿಯನ್ನು ಆಪ್ ಪಕ್ಪ ದಿಂದಲೇ ಉಚ್ಛಾಟನೆ ಮಾಡಲಾಯಿತು.

ಆಪ್ ಮುಖ್ಯಸ್ಥ ಕೇಜ್ರಿವಾಲ್ ಮತ್ತಿತರ ಮಂತ್ರಿಗಳು ದಾದ್ಲಾನಿ  ಪರವಾಗಿ ಕ್ಷಮಾಪಣೆ ಕೇಳಿದರು.  ಕೊನೆಗೆ ದಾದ್ಲಾನಿ ತರುಣ್ ಸಾಗರ್ ಅವರ ಕಾಲಿಗೆ ನಮಸ್ಕರಿಸಿ ಕ್ಷಮೆ ಕೇಳಿದರು.

ಸಾವಿರ ವರ್ಷಕ್ಕೊಮ್ಮೆ ಧರ್ಮವನ್ನು ಸುಟ್ಟುಹಾಕಬೇಕು ಎಂದು ಕರೆನೀಡಿದ ಜೈನ ಮುನಿಗಳಿಗೆ ಒಂದು ಸಣ್ಣ ಟೀಕೆಯನ್ನು ಸಹಿಸಲು ಆಗಲಿಲ್ಲ ಅಂದರೇನು? ತಮ್ಮ ಕಾಲಿಗೆ ಬಿದ್ದು ಕ್ಷಮೆ ಕೇಳಿದ ದಾದ್ಲ್ಯಾನಿ ಗೆ ಅವರು ಒಂದಷ್ಟು ಪ್ರವಚನ ಪುಸ್ತಕಗಳನ್ನು ನೀಡಿದರು.

ಆದರೆ ಅದೇನು ದೊಡ್ಡ ವಿಷಯ ಅಲ್ಲ ಬಿಡಿ ಎಂದು ಹೇಳಲು ಅವರಿಗೆ ಆಗಲಿಲ್ಲ. ಹಾಗಾದರೆ ಭಾರತದ ೦. ೦೪ ಭಾಗದಷ್ಟಿರುವ ಜೈನ ಧರ್ಮ ಈ ಬೆಂಕಿಗೆ ಹಾಕುವ ಉಪದೇಶಕ್ಕೆ ಹೊರತಾಗಿದೆಯೇ? ಅಲ್ಪಸಂಖ್ಯಾತರಾಗಿರುವ ಕಾರಣಕ್ಕೆ ಅವರ ಬಗ್ಗೆ ವಿಮರ್ಶಾತ್ಮಕವಾಗಿ ಮಾತನಾಡುವುದು ನಿಷಿದ್ಧವೇ? ಹಾಗಾದರೆ ಯಾವ ಧರ್ಮಗಳನ್ನು ಮಾತ್ರ ಬೆಂಕಿಯಲ್ಲಿ ಸುಡಬೇಕು?

ವಿವರ ಓದಿಗೆ

ಪ್ರತಿಭಾ ನಂದಕುಮಾರ್ ಅವರು ‘ಬೆಂಗಳೂರ್ ಮಿರರ್’ ನಲ್ಲಿ ಬರೆದ ಅಂಕಣ ಲೇಖನ ಇಲ್ಲಿದೆ. ಕ್ಲಿಕ್ಕಿಸಿ 

4 Responses

 1. Well said Prathibha madam!

 2. Chi na hally kirana says:

  Ptastuta sandarbadalli vistruta charche yaali

 3. Vijayavaman says:

  ಇದಕ್ಕೂ ಮೊದಲು 0.4 ಧರ್ಮ ಕ್ಕಿಂತ ಮಿಗಿಲಾದ ಧರ್ಮಗಳು ಹೆಣ್ಣು ಮಕ್ಕಳನ್ನು ಕಲ್ಲು ಹೊಡೆದು, ಜೀವಂತ ಸುಟ್ಟುಹಾಕುವಂತ ಧರ್ಮಗಳು ಈಗಲೂ ಇವೆಯಲ್ಲಾ ಪ್ರತಿಭಾ ಅವರೇ? ಪುಚ್ಚ, ವಾಚು, ಲಂಗೋಟಿ ಗಳು ಮಾತ್ರ ಕಂಡವೇನು? ಇಂತಹ ಜಾಣಕುರುಡನ್ನು ಮೊದಲು ಸುಡಬೇಕು.

  • prathibha nandakumar says:

   ಮೊದಲು ನಂತರ ಅಂತ ಯಾರು ಹೇಳಿದರು? ಎಲ್ಲಾ ಧರ್ಮಗಳನ್ನು ಅಂದ ಮೇಲೆ ಎಲ್ಲಾ ….

Leave a Reply

%d bloggers like this: