fbpx

ಪ್ರಕಾಶ್ ರೈ EXCLUSIVE: ಆ ಸಂವಿಧಾನವನ್ನು ಬದಲಾಯಿಸುತ್ತೇನೆ ಎಂದರೆ ನಾನ್ ಬಿಡ್ತೀನಾ  ಅಥವಾ ಬಿಡ್ತೀವಾ ನಾವು 

ಪ್ರಕಾಶ್ ರೈ 

ನಾನು ಯಾಕೆ ಅಂಬೇಡ್ಕರ್ ಸಡಗರದಲ್ಲಿ ಭಾಗಿಯಾಗುತ್ತೇನೆ ಎನ್ನುವುದಕ್ಕೆ ಕಾರಣವಿದೆ
ಗದಗ ಬೆಟಗೇರಿಯ ನನ್ನ ತಾಯಿ ಅವಳಿಗೆ ೧೨ ವರ್ಷವಿದ್ದಾಗ ಅವರ ತಾಯಿ ತೀರಿಕೊಳ್ಳುತ್ತಾಳೆ
ನನ್ನ ತಾಯಿ, ಅವಳ ಕೈ ಕೆಳಗೆ ಮೂರು ಜನ ತಂಗಿಯಂದಿರು, ಒಬ್ಬ ತಮ್ಮ..
ಅವರು ಅಲ್ಪಸಂಖ್ಯಾತರು.. ಅವರಿಗೆ ಯಾರೂ ಗತಿ ಇಲ್ಲ

ಬೆಳಗಾಮಿನ ಒಂದು ಅನಾಥಾಶ್ರಮದಲ್ಲಿ ನನ್ನ ತಾಯಿ ಓದುತ್ತಾಳೆ

ಆಕೆ ಓದುವಾಗ ಅವಳು ಒಬ್ಬ ಅಲ್ಪಸಂಖ್ಯಾತಳು, ಧೀನಳು, ಅವಳಿಗೆ ಬೆಂಬಲವಾಗಿ ಯಾರೂ ಇಲ್ಲ
ಎನ್ನುವುದನ್ನು ಲೆಕ್ಕ ಹಾಕದೆ,
ಅವಳು ಯಾವ ಜಾತಿ ಎನ್ನುವುದನ್ನು ನೋಡದೇ
ಓದುವ ಹಕ್ಕನ್ನು ಅವಳಿಗೆ ಕೊಟ್ಟಿದ್ದು ಅಂಬೇಡ್ಕರ್ ಅವರ ಸಂವಿಧಾನ


ಅದಾದ ನಂತರ ನನ್ನ ತಾಯಿ ನರ್ಸಿಂಗ್ ಓದುತ್ತಾಳೆ
ಆಕೆಯ ತಂಗಿಯಂದಿರು ಮೂವರೂ ಪ್ರಾಧ್ಯಾಪಕರಾಗುತ್ತಾರೆ
ತಮ್ಮ ಬ್ಯಾಂಕ್ ಮ್ಯಾನೇಜರ್ ಆಗುತ್ತಾನೆ

ಅವರು ಅಲ್ಪಸಂಖ್ಯಾತರು ಎನ್ನುವ ದೌರ್ಜನ್ಯ ಇಲ್ಲದೆ ಅವರು ಬೆಳೆಯಲು,
ವಿದ್ಯಾವಂತರಾಗಲು ಉದ್ಯೋಗ ಗಳಿಸಲು ಕಾರಣವಾಗಿದ್ದು ಈ ಸಂವಿಧಾನ

ಇದಾದ ನಂತರ ನನ್ನ ತಾಯಿ ಇನ್ನೊಂದು ಜಾತಿಯವನನ್ನು ಪ್ರೀತಿಸಿ ಮದುವೆಯಾಗುತ್ತಾಳೆ
ಅವಳಿಗೆ ಆ ಧೈರ್ಯ ನೀಡಿದ್ದು ನನ್ನ ಸಂವಿಧಾನ

ಆ ನಂತರ ನಾನು ಹುಟ್ಟುತ್ತೇನೆ
ಇವತ್ತು ಭಾರತ ದೇಶದಲ್ಲಿ ನಾನು ದೊಡ್ಡ ನಟನೆನಿಸಿಕೊಂಡರೆ
ಇವತ್ತು ಇಷ್ಟು ಜನರ ಹೃದಯದಲ್ಲಿ ನಾನು ಮನೆ ಮಾಡಿದ್ದರೆ
ನನ್ನನ್ನು ಯಾವ ಜಾತಿಯವನು, ಯಾವ ಕುಲದವನು
ಎಂದು ಯೋಚಿಸದೆ ಎಲ್ಲರೂ ನನ್ನನ್ನು ಪ್ರೀತಿಸಲು ಸಾಧ್ಯವಾಗಿದ್ದರೆ
ಅದನ್ನು ಸಾಧ್ಯವಾಗಿಸಿದ್ದು ಈ ದೇಶದ ಸಂವಿಧಾನ

ಆ ಸಂವಿಧಾನವನ್ನು ಬದಲಾಯಿಸುತ್ತೇನೆ ಎಂದರೆ ನಾನ್ ಬಿಡ್ತೀನಾ
ಅಥವಾ ಬಿಡ್ತೀವಾ ನಾವು

ನನಗೆ ಸಿಕ್ಕ ಈ ಹಕ್ಕನ್ನ, ನನಗೆ ಸಿಕ್ಕ ಈ ಸ್ವಾತಂತ್ರ್ಯವನ್ನ
ನನ್ನ ದೇಶದ ಪ್ರತಿಯೊಬ್ಬ ದೀನ ದಲಿತ ರಿಗೆ ಸಿಗುವವರೆಗೂ ಹೋರಾಡುತ್ತೇನೆ ನಾನು


ಇಂದು ನನಗೆ ಎಲ್ಲವನ್ನೂ ಪ್ರಶ್ನಿಸುವ ಹಕ್ಕು ದೊರೆತದ್ದು
ಧೈರ್ಯ ನನಗೆ ದೊರೆತದ್ದು
ನಿಮ್ಮಂತಹ ರಾಜಕಾರಣಿಗಳಿಂದಲ್ಲ
ನನ್ನ ಅಂಬೇಡ್ಕರ್ ರಿಂದ, ಅಂಬೇಡ್ಕರ್ ಕೊಟ್ಟ ಸಂವಿಧಾನದಿಂದ

ಆ ಸಮಾಜಕ್ಕೆ ನನ್ನ ಹಾಗೆ ಪ್ರಶ್ನಿಸುವ ಧೈರ್ಯ ಬರಲು
ಸ್ಫೂರ್ತಿಯಾಗುವುದಕ್ಕೆ ಸಾಧ್ಯವಾಗುವುದಾದರೆ

ನಾನು ಕೊನೆಯವರೆಗೂ ಹೋರಾಡುತ್ತೇನೆ

4 Responses

 1. Sudha ChidanandGowd says:

  ಪ್ರಕಾಶ್ ರೈ ಸರ್ ಅವರ ಮಾತುಗಳು ನನ್ನ ಮಾತುಗಳೂ ಹೌದು., ನಮ್ಮೆಲ್ಲರ ಮಾತುಗಳೂ ಹೌದು.. ಎಲ್ಲರ ಹಕ್ಕನ್ನು ಕಾಯುವ ಸಂವಿಧಾನವನ್ನು ಬದಲಾಯಿಸುವುದು ತಡೆಯುವುದು ಎಲ್ಲರ ಕರ್ತವ್ಯವೂ ಹೌದು.‌ಸಂವಿಧಾನ ಬದಲಾವಣೆಯ ಧಮಕಿಯನ್ನು ಹಾಕುವವರು ಅಂದೂ ಇದ್ದರು, ಇಂದೂ ಇದ್ದಾರೆ. ಪ್ರಾಯಷಃ ಮುಂದೆ ಕೂಡಾ ಅವರ ಪ್ರಯತ್ನಗಳು ಜಾರಿಯಲ್ಲಿರುತ್ತವೆ. ವಿಫಲಗೊಳ್ಳುತ್ತಲೇ ಇದ್ದರೂ…!
  ಅಂಬೇಡ್ಕರ್ ಜಯಂತಿ ನಮ್ಮೆಲ್ಲರ ಅರಿವನ್ನು ಮತ್ತೆಮತ್ತೆ ಸಾಣೆ ಹಿಡಿಯುವ ದಿನ.

 2. Vishalamathi N K says:

  ಆ ಸಂವಿಧಾನವನ್ನು ಬದಲಾಯಿಸುತ್ತೇನೆ ಎಂದರೆ ನಾನ್ ಬಿಡ್ತೀನಾ
  ಅಥವಾ ಬಿಡ್ತೀವಾ ನಾವು
  ಖಂಡಿತಾ ಇಲ್ಲ.

 3. Doddamane Gopalagowda says:

  ಹೌದು ನಮ್ಮ ಸಂವಿಧಾನ ಎಲ್ಲ ಮೂಲಭೂತ ಮಾನವ ಹಕ್ಕುಗಳನ್ನು ನಮಗೆ ಕೊಟ್ಟಿದೆ , ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯನ್ನು ನೀಡಿದೆ , ಇದೊಂದು ಶ್ರೇಷ್ಟ ಸಂವಿಧಾನವಾಗಿದೆ

  ಸಂವಿಧಾನಕ್ಕೆ ಇಲ್ಲಿಯವರೆಗೆ ನೂರಾರು ತಿಡ್ಡುಪಡಿಗಳನ್ನು ಮಾಡಲಾಗಿದೆ ಆದರೆ ಅದರ ಮೂಲ ಆಶಯಕ್ಕೆ , ತತ್ತ್ವಕ್ಕೆ ಧಕ್ಕೆ ಬಾರದ ಹಾಗೆ ತಿದ್ದುಪಡಿ ಮಾಡಲು ಅವಕಾಶ ಸಹ ಇದೆ . ಮುಂದೆಯೂ ಅನೇಕ್ತ ತಿದ್ದುಪಡಿಗಳಾಗಬಹುದು. ಕಾಲದ ಅವಶ್ಯಕತೆಗಳು ಅದನ್ನು ನಿರ್ಧರಿಸುತ್ತವೆ . ಒಬ್ಬ ವ್ಯಕ್ತಿಯೂ ಕಾಲದ ಅವಶ್ಯಕತೆಯಾಗಬಹುದು ಮತ್ತು ಅವನ ನಿರ್ಧಾರ ಎಲ್ಲರ ಸಮ್ಮತಿಯಾಗಬಹುದು . ಗೀತೆಯಲ್ಲಿ ಹೇಳಿರುವಂತೆ ‘ ಸಂಭವಾಮಿ ಯುಗೇ ಯುಗೇ ‘. ಹಾಗೇ ಅಲ್ಲವೇ ಅಂಬೇಡ್ಕರ್ ಭರತವರ್ಷಕ್ಕೆ ಸಂಭವಿಸಿದ್ದು .

 4. Rajani kanth says:

  ನಿಮ್ಮ ಬೆಂಬಲಕ್ಕೆ ನಿಮ್ಮ ಅಭಿಮಾನ ಬಳಗ ನಿಮ್ಮ ಜೊತೆ ಇದೆ ಸರ್. ನಿಮ್ಮ ಈ ಹೋರಾಟಕೆ ಬೇರೆ ಕಲಾವಿದರು ಕೈ‌ ಜೋಡಿಸಿದರೆ ಇನ್ನು ಹೆಚ್ಚು ಸಂತೋಷ
  ವಾಗುತಾದೆ.

Leave a Reply

%d bloggers like this: