fbpx

ಕೈಉತ್ಪನ್ನಗಳ ಮೇಲಿನ ಅಸಡ್ಡೆ..

ಕೈಉತ್ಪನ್ನಗಳ ಮೇಲಿನ ಅಸಡ್ಡೆಯ ವಿರುದ್ಧ ಪ್ರತಿಭಟನೆ

ಟೌನ್ ಹಾಲ್ ಮುಂಭಾಗ, ಬೆಂಗಳೂರು

6 ಮೇ 2018, ಭಾನುವಾರ, ಸಂಜೆ 4:30 – 6:30

ಗ್ರಾಮ ಸೇವಾ ಸಂಘವು ಶ್ರಮ ಜೀವಿಗಳ, ಬಡವರ, ಶೋಷಿತ ಜನರ ಸುಸ್ಥಿರ ಬದುಕಿಗಾಗಿ ಹೋರಾಟ ಮಾಡುತ್ತಿರುವ ಎಲ್ಲ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಜತೆ ಕೈಗೂಡಿಸಿ ಹೋರಾಟ ನಡೆಸುತ್ತಿದೆ. ಒಂದು ವರ್ಷದಿಂದೀಚೆ ಗ್ರಾಮ ಸೇವಾ ಸಂಘವು ಕೈಉತ್ಪನ್ನಗಳಿಗೆ ನ್ಯಾಯವಾದ ಬೆಲೆ ಹಾಗೂ ಶೂನ್ಯ ಜಿ ಎಸ್ ಟಿ ಗೋಸ್ಕರ ಹೋರಾಟದ ಮುಂಚೂಣಿಯಲ್ಲಿದ್ದು, ಕರ್ನಾಟಕದ ಮೂಲೆ ಮೂಲೆಗಳಲ್ಲಿ  ಸತ್ಯಾಗ್ರಹಗಳ ಮೂಲಕ, ಶಾಂತಿಯುತ ಪ್ರತಿಭಟನೆಗಳು ಹಾಗೂ ಉಪವಾಸ ಸತ್ಯಾಗ್ರಹಗಳ ಮೂಲಕ ಕಾಯಕಜೀವಿಗಳ ಸುಸ್ಥಿರ ಬದುಕಿಗಾಗಿ ಹೋರಾಟ  ಮಾಡುತ್ತಿದೆ.

ಏಕೆ ಈ ಪ್ರತಿಭಟನೆ ?

ನೀವು ತಿಳಿದಂತೆ ಸ್ವಾತಂತ್ರ್ಯಾನಂತರದ ರಾಜಕೀಯ ವ್ಯವಸ್ಥೆಯು ಈ ದೇಶದ ಬಹುಪಾಲು ಜನರ ಜೀವನ ಪಧ್ಧತಿ ಹಾಗೂ ಜೀವನೋಪಾಯಗಳನ್ನು ಸಂಪೂರ್ಣವಾಗಿ ಅಲಕ್ಷ್ಯ ಮಾಡಿದೆ. ಇದರಿಂದಾಗಿ ಕಾಯಕಜೀವಿಗಳ ಉಳಿವು ದುಸ್ತರವಾಗುತ್ತಲೇ ಹೋಗುತ್ತಿದೆ.

ಈಚಿನ ವರ್ಷಗಳಲ್ಲಿ ವ್ಯಾಪಕ ಯಾಂತ್ರೀಕರಣದ ಪರಿಣಾಮವಾಗಿ ಶ್ರಮಜೀವಿಗಳ ಜೀವನ ಪರಿಸ್ಥಿತಿಯು ಮತ್ತಷ್ಟು ಹದಗೆಟ್ಟಿದೆ ಎಂಬುದು ಸರ್ವವಿದಿತ. ಇದರೊಂದಿಗೆ ಶ್ರಮಿಕರ ಆತ್ಮಗೌರವ ಮತ್ತು ಉಳಿವಿಗೇ ಧಕ್ಕೆ ತರುವಂತಹ ಪರಿಸ್ಥಿತಿ ನಮ್ಮನ್ನು ಎದುರಿಸುತ್ತಿದೆ. ಯಾಂತ್ರೀಕರಣದ ಪರಿಣಾಮಗಳನ್ನು ಈಗಷ್ಟೇ ಈ ದೇಶದಲ್ಲಿ ನಾವು ಕಾಣಲಿಕ್ಕೆ ತೊಡಗಿದ್ದೇವೆ. ಮೂಲಭೂತವಾಗಿ ಯಾಂತ್ರೀಕಾರಣದಿಂದ ಕೈಉತ್ಪನ್ನಗಳ ಮಾರುಕಟ್ಟೆಗಳು ಕುಸಿದು ಬಿದ್ದು ಶ್ರಮಿಕರ ಅಧೋಗತಿಯು ಹೆಚ್ಚುತ್ತಲೇ ಹೋಗುತ್ತಿದೆ. ಇದು ಗ್ರಾಮೀಣ ಮತ್ತು ನಗರ ಪ್ರದೇಶ ಎರಡರಲ್ಲೂ ವ್ಯಾಪಕವಾಗಿದೆ.

ಆಶ್ಚರ್ಯವೆಂದರೆ ಈ ದೇಶದ ಎಲ್ಲಾ ರಾಜಕೀಯ ಪಕ್ಷಗಳೂ ಐದು ವರ್ಷಗಳಿಗೊಮ್ಮೆ ಜನಸಾಮಾನ್ಯರ ಮುಂದೆ ಹಠಾತ್ತಾಗಿ ಪ್ರತ್ಯಕ್ಷರಾಗಿ ಬಣ್ಣ ಬಣ್ಣದ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುವುದಲ್ಲದೇ ಗ್ರಾಮ, ಗ್ರಾಮೀಣ ಜನತೆ, ನಗರದ ಬಡಜನರು, ಅಭಿವೃಧ್ಧಿಯ ಆಶ್ವಾಸನೆಗಳು ಮತ್ತು ತಮ್ಮ ಸಾಧನೆಗಳ ಪಟ್ಟಿಗಳನ್ನು ಕೇವಲ ಸ್ವಪ್ರಶಂಸೆಯ ಅಸ್ತ್ರವನ್ನಾಗಿ ಮಾಡಿಕೊಂಡಿವೆ. ಇದಕ್ಕಿಂತ ಬೆರಗಿನ ಅಂಶವೆಂದರೆ ಇವೆಲ್ಲವನ್ನೂ ಅನುಭವದ ಮೂಲಕ ತಿಳಿದ ಮತದಾರನು ಕೂಡ ಮತ್ತೆ ಮತ್ತೆ ಈ ಪೊಳ್ಳು ಆಶ್ವಾಸನೆಗಳಿಗೆ ಬಲಿಯಾಗುತ್ತಿದ್ದಾನೆ.

ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡುವ ಸಲುವಾಗಿ, ಹಾಗೂ ಜನಸಾಮಾನ್ಯರಿಗೆ ಅರಿವು ಮೂಡಿಸಲು ಮತ್ತು ಶ್ರಮಿಕರ ಹಕ್ಕೊತ್ತಾಯವನ್ನು ಆಗ್ರಹಿಸಲು ಬೆಂಗಳೂರಿನ ಪುರಭವನದ ಮುಂಭಾಗದಲ್ಲಿ ತಾ|| 6 ಮೇ2018 ರಂದು (ಭಾನುವಾರ), ಸಂಜೆ 4:30 ಗಂಟೆಯಿಂದ 6:30 ರ ವರೆಗೆ ಒಂದು ಬೃಹತ್ ಪ್ರತಿಭಟನಾ ಸಭೆಯನ್ನು ಗ್ರಾಮ ಸೇವಾ ಸಂಘದ ವತಿಯಿಂದ ಆಯೋಜಿಸಲಾಗಿದೆ.

ಈ ಮಹದೋದ್ದೇಶದ ಕಾರ್ಯಕ್ರಮಕ್ಕೆ ನಿಮ್ಮನ್ನು ಆಹ್ವಾನಿಸುತ್ತಿದ್ದೇವೆ. ತಾವು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಈ ಹೋರಾಟಕ್ಕೆ ತಮ್ಮ ಬೆಂಬಲವನ್ನು ಸೂಚಿಸಬೇಕೆಂದು ಕೋರುತ್ತೇವೆ.

ಇದೊಂದು ಪಕ್ಷಾತೀತವಾದ ಪ್ರತಿಭಟನೆ – ಯಾವುದೇ ರಾಜಕೀಯ ಪಕ್ಷದ ಪರವಾಗಿ ಅಥವಾ ವಿರೋಧವಾಗಿ ಇದನ್ನು ಉದ್ದೇಶಿಸಿಲ್ಲ

ಗ್ರಾಮ ಸೇವಾ ಸಂಘ

ವಿಳಾಸ : #102, ಶೇಷನಿವಾಸ, 47, 1ನೇ ಬ್ಲಾಕ್, 1ನೇ ಮುಖ್ಯ ರಸ್ತೆ, ತ್ಯಾಗರಾಜ ನಗರ, ಬೆಂಗಳೂರು – 560 028

Mobile: +91 99800 43911 | Email: gramsevasanghindia@gmai l.com |Website: www.gramsevasangh.or g
Facebook: @gramsevasanghindia | Twitter: @gramasevasangha

1 Response

 1. Kiran says:

  The handmade and small scale industries, were not neglected after Independence, but it was British who killed them systematically to create market for their goods. But after Independence we were supposed to identify all the ways British destroyed us and reverse or address them. Which is why the responsibility of the first 10 years of administration after Independence was the most crucial phase of our existence, but what did we get?
  A clueless, clown called Nehru who was not even fit to be a local village panchayat!
  NO, wonder we are still unable to solve the most basic of the problems, like hunger, poverty and population explosion.
  The first Independent Indian government had to have a vision how the country should be 50 years from then, but instead we got lousy copycat ideas like 5-year plans, which was just a channel to loot for everyone…
  it is for this curse we are suffering today and for a long time to come still…

Leave a Reply

%d bloggers like this: