fbpx

ಮೊಗಳ್ಳಿ ಗಣೇಶ್ ಗೆ ಪ್ರಶಸ್ತಿ

ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನವು ಪ್ರತಿ ವರ್ಷ ಕನ್ನಡದಲ್ಲಿ ಪ್ರಕಟವಾದ ಅತ್ಯುತ್ತಮ ಕಥಾಸಂಕಲನಕ್ಕೆ ನೀಡುವ ಡಾ. ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿಯ 2017 ನೇ ಸಾಲಿಗೆ ಡಾ.ಮೊಗಳ್ಳಿ ಗಣೇಶ್ ಅವರ ‘ದೇವರ ದಾರಿ’ ಕಥಾಸಂಕಲನ ಆಯ್ಕೆಯಾಗಿದೆ.

2017ನೇ ಸಾಲಿನ ಪ್ರಶಸ್ತಿಗೆ ಒಟ್ಟು 31 ಕಥಾಸಂಕಲನಗಳನ್ನು ಸ್ವೀಕರಿಸಿದ್ದು ಆಯ್ಕೆಯನ್ನು ಎರಡು ಹಂತದಲ್ಲಿ ನಡೆಸಲಾಯಿತು.

ಅಂತಿಮವಾಗಿ ನಿವೃತ್ತ ಪ್ರಾಧ್ಯಾಪಕ ಪ್ರೊ. ಕಾ.ನಂ. ನಾಗರಾಜು, ಮಹಾರಾಣಿ ಅಮ್ಮಣ್ಣಿ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಟಿ.ಎಸ್.ರಘುನಾಥ್ ಮತ್ತು ಸಾಹಿತಿ ಡಾ.ಕೆ.ವೈ.ನಾರಾಯಣಸ್ವಾಮಿ ಅವರನ್ನೊಳಗೊಂಡ ತೀರ್ಪುಗಾರ ಸಮಿತಿಯು ಮೊಗಳ್ಳಿಯವರ ‘ದೇವರ ದಾರಿ’ ಕೃತಿಯನ್ನು ಆಯ್ಕೆ ಮಾಡಿತು.

ದೇವರ ದಾರಿ ಕೃತಿಯನ್ನು ಶಿವಮೊಗ್ಗದ ಅಹರ್ನಿಶಿ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ.

ಮಂಡ್ಯದಲ್ಲಿ ದಿನಾಂಕ 9ನೇ ಜೂನ್ 2018 ಶನಿವಾರ ನಡೆಯಲಿರುವ ಸಮಾರಂಭದಲ್ಲಿ ಖ್ಯಾತ ಕವಿ ಎಚ್ ಎಸ್ . ಶಿವಪ್ರಕಾಶ್ ಪ್ರಶಸ್ತಿ ಪ್ರದಾನ ಮಾಡಲಿರುವರು.

2 Responses

  1. Shyamala Madhav says:

    ಹೃತ್ಪೂರ್ವಕ ಅಭಿನಂದನೆ.

  2. Anagha LH says:

    Congratulations sir!

Leave a Reply

%d bloggers like this: