ಮೊದ್ಲ್ ಮಾಡಿದ್ ಕೆಲ್ಸಾನೇ ಮೀನ್ಪೇಟೆ ತಿರುವನ್ನ ಓದಿದ್ದು..

ವಿಭಾ ನಾರಾಯಣ್ 

ಮೀನ್ಪೇಟೆ ತಿರುವು ಎಲ್ರ ಕೈ ಸೇರ್ತಿದ್ದ ಸುದ್ದಿ ಎಫ್ಬಿ ಮೂಲಕ ಸಿಗ್ತಾನೇ ಇತ್ತು.. ರೇಣು ಹೆಂಗೂ ನನ್ನೂರವ್ಳೇ ಅಲಾ.. ಆರಾಮಾಗ್ ಕೇಳ್ಕಂಡ್ರಾಯ್ತು ಅಂದ್ಕೊಳ್ತಿರ್ವಾಗ ಕಳ್ದ್ ಶುಕ್ರಾರ ತಕ್ಷಣ ರೇಣು ನೆನ್ಪಾಗಿ ಇನ್ನೇನ್ ಮೆಸೇಜ್ ಮಾಡ್ಬೇಕಂತಿರ್ವಾಗ ಬಾ ಅಂತ ಇನ್ವಿಟೇಷನ್ ವಾಟ್ಸಪ್ ಮಾಡಿದ್ಳು,

ರೇಣು ನಾಳೆ ಶನಿವಾರ ಸಂತೆಗ್ ಬರ್ತೀಯಾದ್ರೆ ಬರ್ವಾಗ ಪುಸ್ತಕ ಹಿಡ್ಕಂಡ್ಬಾ ಅಲ್ಲೇ ಸಿಗ್ತೆ ಅಂದಿದ್ದೆ…
ಹೇಳಿದ್ ಟೈಮಿಗ್ ಸರಿಯಾಗಿ ಕಾಲ್ ಮಾಡಿದ್ಳು,

ರೇಣು ಸಂತೆಗ್ ಬಂದು ಕರೆ ಮಾಡಿದ ನಂತ್ರ ನಾ ಮನೆಯಿಂದ ಹೊರಟೆ, ತರ್ಕಾರಿ ಸಂತೇಲಿ “ಮೀನ್ಪೇಟೆ ತಿರುವು” ಸಿಗ್ತು..
ಬಾರೇ ಥಂಡಾ ಏನಾದ್ರೂ ಕುಡೀವ ಅಂದ್ರೂ ಕೇಳ್ದೆ, ದುಡ್ಡೂ ತಕಳ್ದೇ ಪುಸ್ತಕ ಕೈಲಿಟ್ಟು ತಣ್ಣಗೆ ನಾಕ್ ನಗ್ನಗ್ತಾ ಮಾತಾಡಿ ಡ್ರುಂಯ್ ಅಂತ ಹೊರಟೇಹೋದ್ಳು…

ಮನೆಗ್ಬಂದ್ ಮೊದ್ಲ್ ಮಾಡಿದ್ ಕೆಲ್ಸಾನೇ ಮೀನ್ಪೇಟೆ ತಿರುವನ್ನ ಓದಿದ್ದು…

ಒಂದ್ ತಾಸ್ ತಕಂಡ್ ನನ್ನೂರಿನ ಕುರಿತ ಮಾಹಿತಿಯನ್ನ, ನನ್ನ ಹುಡ್ಗನನ್ನ, ಹೆಣ್ಣಿನ ಆಂತರಿಕ ತಳಮಳವನ್ನ, , ನನ್ನೂರಿನ ರೈತಾಪಿ ಜನ್ರನ್ನ ಎಲ್ರನ್ನೂ ಮಾತಾಡಿಸ್ಕೊಂಡ್ ಬಂದೆ,

ಗದ್ದೆಗೆಲ್ಲ ಹೋಗಿದ್ದೆ, ಮೀನ್ಪೇಟೆಗೂ ಹೋಗ್ಬಂದೆ, ರೇಣು ಮನೆಗ್ ಹೋಗಿ ರುಚ್ರುಚಿ ಮೀನ್ಸಾರ್ ಉಂಡ್ಕ ಬಂದೆ…

ಹೀಗೆ ಇಂತಹ ಅನೇಕ ಸಜೀವ ಭಾವಗಳನ್ನ ಸಾಲಂತೆ ಹೆಣ್ದು, ನಮ್ಮೆಲ್ಲರ ಒಳತುಡಿತ, ಬೇಗುದಿಗಳನ್ನ ಮೀನುಪೇಟೆಯ ತಿರುವಿನಲ್ಲಿ ಒಂದ್ಗೂಡಿಸಿದ್ದಾಳೆ ರೇಣು.

ಪ್ರಬುದ್ಧ ಲೇಖಕಿಯರ ಸಾಲಿಗೆ ಸೇರುವ ನನ್ನೂರಿನ ಹುಡುಗಿ ರೇಣು ನನ್ನ ಹೆಮ್ಮೆ.. ನನ್ನೂರಿನ ಹೆಮ್ಮೆ…

ಯಾರದ್ದೇ ಪುಸ್ತಕ ಬಿಡ್ಗಡೆ ಇದ್ರೂ ಬೆಂಗ್ಳೂರು, ಧಾರವಾಡದಲ್ಲೇ ನಡೀಬೇಕ್ಯಾಕೆ? ಬೆಂಗ್ಳೂರಿಗರಿಗೂ ತಮ್ಮ ಇಷ್ಟದ ಬರಹಗಾರರ ಮೇಲೆ ಅಭಿಮಾನ ಇದ್ಯೋ ಇಲ್ವೋ ಅಂತ ತಿಳ್ಕೊಳೋ ಒಂದು ಅವ್ಕಾಶವೂ ಸಿಗ್ದೇ ಹೋಗತ್ತಲ್ಲ ಅನ್ನೋ ಕೊರಗು ಬೇರೆಲ್ಲ ಜಿಲ್ಲೆ ತಾಲೂಕುಗಳಲ್ಲಿರುವ ನನ್ನಂಥ ಅನೇಕ ಸಾಹಿತ್ಯಾಸಕ್ತರಿಗೆ ಅನ್ನಿಸದೇ ಇರಲ್ಲ..

ಅಂಥ ಒಂದು ಕೊರಗನ್ನ ನೀಗಿಸಿದ ರೇಣುಗೆ ಎಷ್ಟ್ ಧನ್ಯವಾದ ಹೇಳಿದ್ರೂ ಕಮ್ಮಿಯೇ…

ಇದೇ ಗುರುವಾರ ಹದ್ನೇಳಕ್ಕೆ ರೇಣು ಮನೇಲೇ ಮೀನ್ಪೇಟೆ ತಿರುವು ಬಿಡ್ಗಡೆ, ನಾನಿರ್ತೀನಿ. ನೀವೆಲ್ರೂ ಬರ್ಬೇಕು ಅಂತ ಪ್ರೀತಿಪೂರ್ವಕ ಆಗ್ರಹದೊಂದಿಗೆ ಹದ್ನೇಳಕ್ಕೆಲ್ರೂ “ಪ್ರಾರ್ಥನಾ” ದಲ್ಲಿ ಸಿಗೋಣ..

1 thought on “ಮೊದ್ಲ್ ಮಾಡಿದ್ ಕೆಲ್ಸಾನೇ ಮೀನ್ಪೇಟೆ ತಿರುವನ್ನ ಓದಿದ್ದು..”

Leave a Reply