ಥಟ್ಟನೊಂದು ಪದ ಬಂತು, ಹಾರಿ..

ರಾಜೇಶ್ವರಿ ಚೆನ್ನಂಗೋಡು 

ಥಟ್ಟನೊಂದು ಪದ ಬಂತು. ಹಾರಿ,
ಕಿಟಕಿಯೆಡೆ ತುರಿ
ಎದೆಯೊಳ ಸೇರಿ ಚೀರಿ..

ಅರ್ಥವಾಗದೆ ಹೋಯ್ತು
ಅದರ ಊರು ಬೇರೆ
ಕಣ್ಸನ್ನೆಗಳ ಭಾವ ಬೇರೆ
ಒಣಮಣ್ಣಿನ, ಬಿಸಿಗಾಳಿಯ ಸಖ್ಯದಲ್ಲುಳಿದು
ಅದು ಧ್ವನಿಸುವ ಜೀವದಾಟವೇ ಬೇರೆ

ಅದು ನಿನ್ನ ಕಿಟಕಿಯ ಸರಳುಗಳೆರಡರ
ನಡುವಿಂದ ಬಂತೇ?
ನೀನಿಷ್ಟು ಒಣ, ಭಣಭಣವಾಗಿರುವುದಾದರೆ,
ಇಲ್ಲಿ, ಈ ಬೆಂಗಳೂರಲ್ಲೇಕೆ
ಹೇಗೆ
ಮಳೆ? ಮಿಂಚು?

ನಾನು ಹಸಿರಾಗೇ, ತೇವವಾಗೇ
ಉಳಿದಿರುತ್ತೇನೆ.
ನಿನಗೆಂದಾದರು ಬೇಕೆನಿಸಿದರೆ ಹೀರಲು
ನನ್ನೆದೆಯಲ್ಲಿ
ಧ್ವನಿಯಿದೆ.

Leave a Reply