fbpx

ಮೀನುಪೇಟೆ ತಿರುವಿನ ಆಲ್ಬಂ

ಅದೊಂದು ಸುಂದರ ಕನಸೇನೋ ಎನ್ನುವಂತೆ ನಡೆದುಹೋದದ್ದು ‘ಮೀನುಪೇಟೆಯ ತಿರುವು’ ಕೃತಿ ಬಿಡುಗಡೆ. ಕಡಲ ನಗರಿಯಲ್ಲಿ, ಮೀನು ಪೇಟೆಯನ್ನು ಬಗಲಲ್ಲಿಟ್ಟುಕೊಂಡ ಊರಿನಲ್ಲಿ ರೇಣುಕಾ ರಮಾನಂದ ಅವರ ಕೃತಿ ಮೆಲ್ಲನೆ ಮೀನುಗಳ ಪ್ರತಿಕೃತಿಯಿಂದ ಹೊರಬಂತು.

ಉಪ್ಪಿನ ಸತ್ಯಾಗ್ರಹಕ್ಕೆ ದನಿಕೊಟ್ಟು ನಿಂತ ಅಂಕೋಲೆ ಸ್ವಾತಂತ್ರ್ಯ ಸ್ಮಾರಕ ಶಾಲೆಯನ್ನು ಹೊಂದಿದೆ. ಅನೇಕ ಒಳ್ಳೆಯ ಮನಸ್ಸುಗಳು ಈ ಶಾಲೆಯ ಒಡಲಿಂದ ರೂಪುಗೊಂಡಿವೆ. ಆ ಶಾಲೆಯ ಎದುರೇ ಇರುವುದು ರೇಣುಕಾ ಹಾಗೂ ರಾಮಾನಂದರ ಮನೆ-ಪ್ರಾರ್ಥನಾ.

ಬಿಸಿಲ ಬೇಗೆಯನ್ನು ತಗ್ಗಿಸುವ ಇಳಿಸಂಜೆಯಲ್ಲಿ ಕಲಾ ಶಿಕ್ಷಕರು ಅಂದವಾಗಿ ರೂಪಿಸಿದ್ದ ಹತ್ತಾರು ಮೀನುಗಳ ಪ್ರತಿಕೃತಿಯ ಒಳಗೆ ಅಡಗಿದ್ದದ್ದು ಮೀನುಪೇಟೆಯ ತಿರುವು ಕೃತಿ. ಮೀನಿನ ಒಡಲಿಗೆ ಕೈ ಹಾಕಿ ಎಲ್ಲಾ ಅತಿಥಿಗಳೂ ಅದನ್ನು ಹೊರ ತೆಗೆಯುತ್ತಿದ್ದಂತೆ ಶೆಟಗೇರಿಯ ಮನೆಯ ಅಂಗಳದಲ್ಲಿ ಸೇರಿದ್ದವರಿಗೆ ನಮ್ಮ ಊರಿನ ಹುಡುಗಿ ಇಷ್ಟೊಂದು ಸಾಧಿಸಿದ್ದಾಳಾ ಎನ್ನುವ ಹೆಮ್ಮೆ

ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಕಾದಂಬರಿಕಾರ ಬಾಳಾಸಾಬ್ ಲೋಕಾಪುರ್, ಕಥೆಗಾರರಾದ ಸುನಂದಾ ಕಡಮೆ, ಪತ್ರಕರ್ತರಾದ ಗಂಗಾಧರ ಹಿರೇಗುತ್ತಿ ಹಾಗೂ ಜಿ ಎನ್ ಮೋಹನ್, ಪಲ್ಲವ ಪ್ರಕಾಶನದ ಕನಸುಗಾರ ಪಲ್ಲವ ವೆಂಕಟೇಶ್ ಮೀನುಪೇಟೆಯ ತಿರುವು ಕೃತಿ ಹಾಗೂ ಕವಯತ್ರಿ ರೇಣುಕಾ ಇಬ್ಬರ ಹಿರಿಮೆಯನ್ನು ಮನದಟ್ಟು ಮಾಡಿಕೊಟ್ಟರು.

ಸಾಕಷ್ಟು ಕಾಲ ನೆನಪಿಡಬೇಕು ಎನ್ನುವಷ್ಟು ಕಲಾತ್ಮಕವಾಗಿ, ಅಚ್ಚುಕಟ್ಟಾಗಿ ಜರುಗಿದ ಕಾರ್ಯಕ್ರಮವನ್ನು ಅರವಿಂದ ಜೈವಂತ್ ಅವರು ‘ಅವಧಿ’ಗಾಗಿ ಸೆರೆ ಹಿಡಿದಿದ್ದಾರೆ

ಕಾರ್ಯಕ್ರಮದ ಝಲಕ್ ನೀಡುವ ಫೋಟೋ ಆಲ್ಬಮ್ ಇಲ್ಲಿದೆ-

 

 

9 Responses

 1. Lalitha siddabasavayya says:

  ಅಭಿನಂದನೆಗಳು ಮತ್ತೊಮ್ಮೆ ರೇಣುಕಾ

 2. Sharada says:

  super..congratulations… where can i get a copy?

  • ರೇಣುಕಾ ರಮಾನಂದ says:

   ಮೇಡಂ ಪಲ್ಲವ ಪ್ರಕಾಶನದಲ್ಲಿ ಸಿಗುತ್ತದೆ

 3. Anagha LH says:

  Congratulations!!!

 4. Vinathe Sharma says:

  Congratulations!

 5. congratulations

 6. katyayini says:

  Abhinandanegalu Akka. Ninna kavanagalu nammellara bhavanegala militavagi innashtu hora barali. Mundina kavanagalige kayutta iruve…

Leave a Reply

%d bloggers like this: