ನೀನು ಹೋದಮೇಲೆ..

ಕೆ ನಲ್ಲತಂಬಿ 

ನೀನು ಹೋದಮೇಲೆ
ಮೇಜು, ಹಾಸಿಗೆ
ಸೋಫಾ,ಡೈನಿಂಗ್ ಟೇಬಲ್
ಎಲ್ಲ ಹುಡುಕುತ್ತೇನೆ
ಏನನ್ನಾದರು ಮರೆತು ಹೋಗಿರುವೆಯೋ ಎಂದು

ಒಂದು ಹೇರ್ ಪಿನ್
ಬಳೆ, ವಾಚ್, ಮೊಬೈಲ್,ಪರ್ಸ್
ಬಾತ್ ರೂಂ ಕನ್ನಡಿಯಲ್ಲಿ
ಸ್ಟಿಕ್ಕರ್ ಬೊಟ್ಟು,
ಬಾಚನೆಗೆಯಲ್ಲಿ ಕೂದಲ ಎಳೆ,
ಪರ್ಫ್ಯೂಂ ವಾಸನೆ
ಊಹೂಂ

ಮನೆಯೆಲ್ಲ ಹುಡುಕುತ್ತೇನೆ
ನೆಲವೆಲ್ಲ ತಡಕಾಡುತ್ತೇನೆ
ಏನೂ ಸಿಗುವುದಿಲ್ಲ.

ನಾನೂ ಸಹ.

4 thoughts on “ನೀನು ಹೋದಮೇಲೆ..”

  1. Very nice. Simplicity thy name is poem. ನಾನು ಸಹ. Two words only two words make one sit up and look and then a wonderful poem! Thank you very much.

Leave a Reply