ನಿರಂಜನರ ಕೃತಿಯನ್ನು ‘ಬಹುರೂಪಿ’ ಪ್ರಕಾಶನದವರು ಮರು ಮುದ್ರಿಸಿದ್ದಾರೆ

ಜಿ ಎನ್ ನಾಗರಾಜ್ 

“ಚಿರಸ್ಮರಣೆ ಓದೋಣ, ಕಯ್ಯೂರಿಗೆ ಹೋಗೋಣ” ಇದು ಕರ್ನಾಟಕದ ಯುವ ಮನಸ್ಸುಗಳು ಯೋಜಿಸಿದ ಒಂದು ವಿಶಿಷ್ಟ ಅಭಿಯಾನ.

ಈ ಅಭಿಯಾನದ ಸಮಯದಲ್ಲಿ ನಾನು ಕಯ್ಯೂರು ಹೋರಾಟ ಎಂಬುದೊಂದು ಎರಡನೆಯ ಮಹಾಯುದ್ಧದ ನಂತರ ಭಾರತದಲ್ಲಿ ಎದ್ದು ಬಂದ ರೈತ ಹೋರಾಟದ ಮಹಾ ಅಲೆಯ ಭಾಗ. ಕೇರಳದ ಮಲಬಾರ್‌‌‌ನ ಹಲವು ಹಳ್ಳಿಗಳಿಂದ ಈ ಹೋರಾಟದ ಕಿಡಿಗಳು ಚಿಮ್ಮಿದವು.

ಕಯ್ಯೂರು ಅಂತಹುದೊಂದು ಕಿಡಿ ಎಂದು ಅಂದಿನ ಸಂದರ್ಭವನ್ನು ಕಟ್ಟಿಕೊಡಲು ಹಲವು ಪೋಸ್ಟ್‌ಗಳನ್ನು ಹಾಕಿದ್ದೆ.
ಇದಾದ ಹಲವು ತಿಂಗಳುಗಳ ನಂತರ ನನ್ನ ಪುಸ್ತಕ ಭಂಡಾರದಲ್ಲಿ ಮತ್ಯಾವುದೋ ಪುಸ್ತಕಕ್ಕಾಗಿ ತಡಕಾಡುತ್ತಿದ್ದಾಗ ನಿಧಿ ಸಿಕ್ಕಿದಂತೆ ಈ ಕಿರು ಪುಸ್ತಕ ಕಣ್ಣಿಗೆ ಬೀಳಬೇಕೇ!

‘ಹುರ್ರಾ !’ ಎಂದು ಈ ಪುಸ್ತಕದ ಬಗ್ಗೆ ಇಲ್ಲಿ ಸ್ಟೇಟಸ್ ಹಾಕಿದ್ದದ್ದು ಹಲವರಿಗೆ ನೆನಪಿರಬಹುದು. ನನಗೊಂದು, ನನಗೊಂದು ಪ್ರತಿ ಬೇಕು ಎಂದು ನೀವುಗಳು ಕೇಳಿದಿರಿ.

ಅದನ್ನು ನೋಡಿದ ‘ಬಹುರೂಪಿ’ ಪ್ರಕಾಶನದವರು ಮರು ಮುದ್ರಿಸಲು ಮುಂದೆ ಬಂದರು. ತೇಜಸ್ವಿನಿ ನಿರಂಜನರನ್ನು ಸಂಪರ್ಕಿಸಿ ಅವರ ಒಪ್ಪಿಗೆ ಪಡೆದು ಇದನ್ನು ಸುಂದರವಾಗಿ ಮುದ್ರಿಸಿದ್ದಾರೆ.

ಈಗ ಇದು ನಿಮ್ಮೆಲ್ಲರದು. ಬೆಲೆ 30 ರೂ.
ಪ್ರತಿಗಳಿಗಾಗಿ
editor. bahuroopi@gmail.com ರವರನ್ನು ಸಂಪರ್ಕಿಸಿ.

 

Leave a Reply