ಸುಟ್ಟ ದಾರಿಗಳು..

ಸದಾಶಿವ ಸೊರಟೂರು

ಇದೇ ದಾರಿಯಲ್ಲಂತೆ
ಗಾಂಧೀ ನಡೆದಿದ್ದು;
ಮಾರ್ಟಿನ್ ಲೂಥರು
ಮಂಡೇಲಾ ಲಿಂಕನ್ನು
ಹೋಗಿದ್ದು ಇದೆ ಹಾದಿಯಂತೆ!

ಮೂವತ್ತು ದಿನಗಳಲ್ಲಿ
ಇಂಗ್ಲೀಷು ಕಲಿಯರಿ
ಮಾದರಿಯಲ್ಲಿ
ಹೇಳುತ್ತಾರೆ ಕೂಗಿ ಕೂಗಿ
ನಡೆಯಿರಿ ನಡೆಯಿರಿ
ಗಾಂಧಿ ತಾತರಾಗಿರಿ!

ಮಾರು ದೂರ ನಡೆದೆ
ಬೂದಿ ; ಅರ್ಧ ಸುಟ್ಟ ಮರಗಳು
ಒಂದೂ ಚಿಗುರಿಲ್ಲ,
ಹಕ್ಕಿಗಳಿಲ್ಲ!
ಅಲ್ಲೇ ನಿಂತು ಹುಡುಕಿದೆ
ದಾರಿಯ ಕುರುಹುಗಳಿಲ್ಲ,

ಇಲ್ಲಿ ಯಾರ್ ಯಾರಿಗೊ
ಭಯವಿರಬೇಕು;
ಗಾಂಧೀ ಮಾರ್ಟಿನ್ ಲಿಂಕನ್
ರೂಪಗಳು ಬಂದರೆ
ನಮಗೆ ದಿನಗಳಿಲ್ಲ ಎಂಬುದರ
ಅರಿವಿರಬೇಕು…

1 comment

Leave a Reply