fbpx

ಹೇಸಿಗೆಗಳ ವಾಸನೆಯೇ ಬಾರದಂತೆ.. ಸಂಜು

4 Responses

 1. ಶ್ರೀರಂಗ ಯಲಹಂಕ says:

  ರಾಜ್ ಕಪೂರ್ ಒಮ್ಮೆ ‘ನಾನು ಕನಸುಗಳ ಮಾರಾಟಗಾರ’ ಎಂದು ಪತ್ರಕರ್ತರಿಗೆ ಟಾಂಗ್ ಕೊಟ್ಟಿದ್ದರು. ನಾವು ದಿನದ ೨೪ ಗಂಟೆಗಳೂ ಹುಬ್ಬು ಗಂಟಿಕ್ಕಿಕೊಂಡು ಕೂರಲು ಆಗುವುದಿಲ್ಲ. ಸ್ವಲ್ಪ ತಮಾಷೆ, ಮನರಂಜನೆಯೂ ಬೇಕಾಗುತ್ತದೆ. ನೂರಾರು ಕೋಟಿಗಳನ್ನು ಖರ್ಚು ಮಾಡಿ ಸಿನಿಮಾಗಳನ್ನು ನಿರ್ಮಿಸುವ ಇಂದಿನ ಕಾಲದಲ್ಲಿ ಅದನ್ನು ಲಾಭದ ಜತೆಗೆ ವಾಪಸ್ಸು ಪಡೆಯುವ ದರ್ದು ನಿರ್ಮಾಪಕರಿಗಿರುತ್ತದೆ. ಅದನ್ನು ತಪ್ಪು ಎಂದು ಹೇಳಲಾಗುವುದೆ?

 2. Lalitha Siddabasavaiah says:

  ಶ್ರೀರಂಗ ಅವರೆ ನಿಮ್ಮ ಮಾತು ಸರಿ , ಸಿನಿಮಾ ರುಚಿಯಾಗಿ ತೆಗೆಯುವುದು ಖಂಡಿತವಾಗಿ ತಪ್ಪಲ್ಲ. ಸಿನಿಮಾ ಮೂಲತಃ ಮನರಂಜನೆಯ ಸಾಧನ. ಹಾಗಿದ್ದರೆ ತಾನೆ ಜನ ಬರುವುದು , ಹಾಕಿದ ಪೈಸೆ ವಸೂಲಾಗುವುದು. ಆದರೆ ಅದಕ್ಕೆ ಬೇಕಾದಷ್ಟು ಕತೆಗಳಿವೆ , ಕತೆ ಹೆಣೆಯುವವರಿದ್ದಾರೆ. ಅವುಗಳನ್ನು ಸಿನಿಮಾ ಮಾಡಿದರೆ ನಮಗೂ ಚೆಂದ ನಿಮಗೂ ಚೆಂದ.

  ಅದು ಬಿಟ್ಟು ತ್ರಿಲೋಕದಾದ್ಯಂತ ಸುಖ್ಯಾತಿ ಕುಖ್ಯಾತಿ ಪಡೆದು ಕಣ್ಮುಂದೆ ಗುಂಡುಕಲ್ಲಿನ‌ ಹಾಗೆ ಇರುವವರ ಕತೆಯನ್ನು ಆರಿಸಿಕೊಂಡು ರುಚಿಯಾಗಿ ಹೇಳಬಾರದು. ಆಮೇಲಾಮೇಲೆ ಇದೇ ಒಂದು ಖಯಾಲಿಯಾಗಿ ಬದುಕಲ್ಲಿ ಏನು‌ ಮಾಡಿದರೂ ಪರವಾಗಿಲ್ಲ , ಹೆಂಗಿದ್ರೂ ಬಯೊಪಿಕ್ ತೆಗೆಯೊವಾಗ ಡೈರೆಕ್ಟರ್ ಅಡ್ಜಸ್ಟ್ ಮಾಡಿ ನೆಗಟೀವ್ ಅಂಶ ಮುಚ್ಚಾಕ್ತಾರೆ ಇಲ್ಲ ಅಳು ಬರುವ‌ ತರಹ ತೆಗೆದು ತಪ್ಪನ್ನೂ‌ ಒಪ್ಪ ಮಾಡ್ತಾರೆ ಅನ್ನುವ ಮನೋಭಾವ ಬೆಳೆದು‌ಬಿಡುತ್ತದೆ.

 3. ಶ್ರೀರಂಗ ಯಲಹಂಕ says:

  ಸಿನಿಮಾಗಳಿಗೆ ತಲೆ ಬುಡ ಇಲ್ಲದ ಕಥೆ ಹೆಣೆಯುವವರು ಸಾಕಷ್ಟು ಜನ ಇದ್ದಾರೆ ಎಂಬುದು ಸರಿ. ಅಂತಹ ಸಿನಿಮಾಗಳು ಕನ್ನಡದಲ್ಲಿ ವಾರಕ್ಕೆ ನಾಲ್ಕೈದರಂತೆ ಹಾಗೆ ಬಂದು ಹೀಗೆ ಹೋಗುತ್ತಿವೆ. ಈಗ ಕನ್ನಡದಲ್ಲಿ ವರ್ಷಕ್ಕೆ ೧೫೦-೨೦೦ರಷ್ಟು ಸಿನಿಮಾಗಳು ಬಂದರೂ ೩೫% ಪಡೆದು ಪರವಾಗಿಲ್ಲ ಎಂದು ಅನಿಸಿಕೊಳ್ಳುವುವು ಐದಾರು ಮಾತ್ರ. ಇಂತಹ ಸ್ಥಿತಿಯಲ್ಲಿ ಸ್ವಲ್ಪಮಟ್ಟಿಗಾದರೂ ನಿಜದ ‘ಎಳೆ’ ಇರುವಂತಹ ಬಯೋಪಿಕ್ ಗಳು ವಾಸಿಯಲ್ಲವೆ? ನಮಗೆ ಕಂಡದ್ದು ಮಾತ್ರ ‘ಸತ್ಯ’ವೇ? ಅದೇ ಅಂತಿಮವೇ?

 4. ಶ್ರೀರಂಗ ಯಲಹಂಕ says:

  ಎಲ್ಲಾ ಕುಖ್ಯಾತರ ಜೀವನದ ‘ಸತ್ಯ ಕಥೆ’ಯೂ ಚಲನಚಿತ್ರವಾಗುತ್ತವೆಯೇ? ಹಾಗೆ ಆಗಿದ್ದರೆ ಇತರ ಚಿತ್ರಗಳು ಇರಲೇಬಾರದಿತ್ತು. ಒಬ್ಬ ನಿರ್ದೇಶಕನಿಗೆ ಈತನ ಕಥೆ ಆರಿಸಿಕೊಂಡರೆ ನಿರ್ಮಾಪಕ ಹಾಕಿದ ಹಣಕ್ಕೆ ಮೋಸವಾಗಲಾರದು ಎಂದು ಅನಿಸುತ್ತದೆಯೋ ಅಂಥ ತ್ರಿಲೋಕದಲ್ಲೂ ಸುಖ್ಯಾತರೋ, ಕುಖ್ಯಾತರೋ ಆದವರ ಕಥೆ ಮಾತ್ರ ಆರಿಸಿಕೊಂಡು ಹಣ ಕೊಟ್ಟು ಬಂದ ಪ್ರೇಕ್ಷಕ ಸುಮಾರು ಎರಡುವರೆ ಗಂಟೆಗಳ ಕಾಲ ಚಿತ್ರಮಂದಿರಗಳಲ್ಲಿ ಕೂತಿರುವಂತೆ ಮಾಡಲು ಒಂದಷ್ಟು ‘ಫಾರ್ಮುಲಾ’ ಪ್ರಕಾರ ಚಲನಚಿತ್ರ ಮಾಡುತ್ತಾರೆ ಅಲ್ಲವೆ?

Leave a Reply

%d bloggers like this: