ಪಿ ಸಾಯಿನಾಥ್ ಕೃತಿ ಬಿಡುಗಡೆ ಝಲಕ್

ಪಿ ಸಾಯಿನಾಥ್ ಅವರು ದಲಿತರ ನೋವಿನ ಲೋಕದ ಬಗ್ಗೆ ‘ದಿ ಹಿಂದೂ’ ಪತ್ರಿಕೆಗೆ ಸರಣಿ ಲೇಖನಗಳನ್ನು ಬರೆದಿದ್ದರು. ಈ ಪೈಕಿ ಅಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆ ಸ್ಥಾಪಿಸಿದ ಮಾನವ ಹಕ್ಕು ಪ್ರಶಸ್ತಿ ಪಡೆದ ಮೂರು ಲೇಖನಗಳನ್ನು ‘ದಲಿತರು ಬರುವರು ದಾರಿ ಬಿಡಿ’ ಹೆಸರಿನಲ್ಲಿ ಕನ್ನಡಕ್ಕೆ ತರಲಾಗಿದೆ. ಜಿ ಎನ್ ಮೋಹನ್ ಈ ಲೇಖನಗಳನ್ನು ಅನುವಾದಿಸಿದ್ದಾರೆ

ಈ ಕೃತಿಯ ಬಿಡುಗಡೆಯನ್ನು ‘ಗ್ರಾಮೀಣ ಕುಟುಂಬ’ದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್, ಹಿರಿಯ ವಿಜ್ಞಾನ ಬರಹಗಾರ ನಾಗೇಶ್ ಹೆಗಡೆ, ಪಿ ಸಾಯಿನಾಥ್ ಅವರು ಸ್ಥಾಪಿಸಿರುವ ‘ಪರಿ’ ಫೆಲೋಶಿಪ್ ನ ವಿಜೇತರಾದ ಪತ್ರಕರ್ತೆ ಮಂಜುಳಾ ಮಾಸ್ತಿಕಟ್ಟೆ ಸಮಾರಂಭದ ಅತಿಥಿಗಳಾಗಿದ್ದರು.

ಗ್ರಾಮೀಣ ಕುಟುಂಬದ ಸಂಸ್ಥಾಪಕ ಎಂ ಎಚ್ ಶ್ರೀಧರಮೂರ್ತಿ ಅವರ ಮುತುವರ್ಜಿಯಲ್ಲಿ ಜರುಗಿದ ಕಾರ್ಯಕ್ರಮದ ಒಂದು ನೋಟವನ್ನು ಸಾವಿತ್ರಿ ಧವಳೇಶ್ವರ್ ಇಲ್ಲಿ ಕಟ್ಟಿಕೊಟ್ಟಿದ್ದಾರೆ.

 

 

 

 

Leave a Reply