ಕೆಂಪಾದ ಕೆನ್ನೆಯ ರಂಗನು ಅಳಿಸಲು ಯತ್ನಿಸುತ್ತೇನೆ..

-ದಾಕ್ಷಾಯಣಿ ನಾಗರಾಜ ಮಸೂತಿ

 

ಈಗೀಗ

ನನ್ನದೇ ಭಾವಗಳಿಗೆ,

ತರತರದ ಮುಖವಾಡಗಳ

ಪ್ರಯೋಗ ಮಾಡುತ್ತೇನೆ;

ನೋವಿನ ಗೀರುಗಳು

ಕಾಣದಂತಿರಲು,

ನಗುವಿನ ಬಣ್ಣ ಹಚ್ಚುತ್ತೇನೆ

ನಿನಗೆ ತೋರದಿರಲು,,,,,

ಯಾವುದೋ ಸವಿನೆನಪಿಗೆ

ಕೆಂಪಾದ ಕೆನ್ನೆಯ ರಂಗನು

ಅಳಿಸಲು ಯತ್ನಿಸುತ್ತೇನೆ;

ನಿನಗೆ ಮುಜುಗರವಾಗದಿರಲೆಂದು,,,

ಯಾವುದೋ ಸೆಳೆತಕೆ

ಕರಗಿ,ನೀರಾದ ಒಲವನು

ನನ್ನದೆಂಬಂತೆ ಅಪ್ಪಿ ಮುದ್ದಾಡುತ್ತೇನೆ

ಮರುಕ್ಷಣವೇ;

ತಲ್ಲಣಿಸಿ,ಬಲವಂತದಿಂದ

ದೂರ ತಳ್ಳಿ ತಿರಸ್ಕರಿಸುತ್ತೇನೆ

ನನ್ನದೇ ಭಾವಗಳನು,,,,

ಕಹಿಸತ್ಯವ ಎದುರಿಸಲಾರದೆ

ಮರುಳಗಾಡಿನಲಿ

ಮೃಗತೃಷ್ಣಾದ

ಬೆನ್ನತ್ತಿ ಓಡುತ್ತೇನೆ,,,

ದಣಿದು ದಣಿದು

ಕಂಗಾಲಾಗುತ್ತೇನೆ,

ನನ್ನದೇ ಭಾವಗಳಿಗೆ

ಹೆದರಿ,, ನಡುಗುತ್ತೇನೆ,,

ನನ್ನೊಳಗಿನ ನನ್ನದೊಂದಿಗೆ

ನಿತ್ಯದ ತಿಕ್ಕಾಟ,,,,,ಹೋರಾಟ

1 comment

Leave a Reply