ಮಳೆಯನ್ನ ಹಿಂಬಾಲಿಸಿದವನಿಗೆ ಸಿಕ್ಕವಳು ಮಳೆ ಹುಡುಗಿ..

ಮೇಘನಾ ಸುಧೀಂದ್ರ 

 

ಅಲ್ಲೆಲ್ಲೋ ಜೋರು ಮಳೆಯನ್ನ ಹಿಂಬಾಲಿಸಿದವನಿಗೆ ಸಿಕ್ಕವಳು ಮಳೆ ಹುಡುಗಿ.

ಬೈ ಟೂ ಕಾಫಿಗೆ, ಗಾಂಧಿ ಬಜಾರಿನ ಓಡಾಟಕ್ಕೆ

ನಗು ಸಂತೋಷ ದುಃಖ ಎಲ್ಲ ಹಂಚಿಕೊಳ್ಳೋದಕ್ಕೆ

ಮಳೆ ಹುಡುಗಿಯ ಜೊತೆಜೊತೆಯಾಗಿ ನಡೆಯೋದಕ್ಕೆ

ಅವನು ಮಳೆಗೆ ಬೀಸೋ ತಂಗಾಳಿ

******************************************************

ಕಾಣಸಿದ್ದ ಕಡೆಯಲ್ಲೆಲ್ಲ ಅದೊಂದು ಕಿವಿಯೋಲೆ ಇದೊಂದು ಕಿವಿಯೋಲೆ ಎಂದು

ಮನೆಯಲ್ಲಿ ಪೇರಿಸಿಡುತ್ತಿದ್ದ ಹುಡುಗಿಗೆ

ಅವನು ಆ ದೇಶ, ಈ ಊರು ಸುತ್ತಿ ತಂದದ್ದು ಅದೇ ಕಿವಿಯೋಲೆಯನ್ನೆ.

ಅದರ ಜೊತೆ ಅವನಿದ್ದ ದೇಶ ಊರನ್ನೇ ಕಳಿಸಿದ್ದು ನೋಡಿ

ಪುಟ್ಟ ಮಗುವಿನಂತೆ ಹಿರಿ ಹಿರಿ ಹಿಗ್ಗಿದಳು .

******************************************************

Leave a Reply