ಶಿವರಾಮ ಕಾಡನಕುಪ್ಪೆ ಇನ್ನಿಲ್ಲ..

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಡಿಗ್ರಿ ಮಾಡುವಾಗ ಮೊದಲ ವರ್ಷದ ಮೊದಲ ವಾರದಲ್ಲಿ ಪಾಠ ಮಾಡಿ ಮುಗಿಸಿದ ನಂತರ ಕ್ಲಾಸ್ ಮೇಟ್ ಹುಡುಗನೊಬ್ಬನಿಗೆ ಲೆಕ್ಚರರ್ ಗಳು ಅಪ್ಪ ಹೇಗಿದ್ದಾರೆ ಅಂತಾ ಕೇಳ್ತಾ ಇದ್ರು. ಪ್ರಾರಂಭದಲ್ಲಿ ಪರಿಚಯವಿಲ್ಲದ ಗೆಳೆಯರ ನಡುವೆ ಸ್ವಲ್ಪ ಗೆಳೆಯನಾಗಿದ್ದ ಮೈಸೂರಿನ ಲೋಕಲ್ ಹುಡುಗನಿಗೆ ಅವರಪ್ಪ ಯಾರು ಅಂತಾ ಕೇಳಿದ್ದೆ.

ಅವನು ನೇಸರ ಕಾಡನಕುಪ್ಪೆ ಅವರಪ್ಪ ಶಿವರಾಮ್ ಕಾಡನಕುಪ್ಪೆ ಅಂತಾ ಅವರೊಬ್ಬ ಸಾಹಿತಿ, ಸಾಮಾಜಿಕ ಹೋರಾಟಗಾರ ಮತ್ತು ಕಾಲೇಜೊಂದರಲ್ಲಿ ಪ್ರಿನ್ಸಿಪಾಲ್ ಎಂದರು.

ನಂತರ ನೇಸರ ಒಳ್ಳೆಯ ಗೆಳೆಯನಾದ, ಮನೆಗೋದಾಗ ಪರಿಚಯ ಸಹ ಮಾಡಿಸಿಕೊಟ್ಟ. ಮುಂದೆ ಅವರು ಕಲಾಮಂದಿರದ ಖಾಯಂ ಅತಿಥಿಯಾಗಿ ಹಲವಾರು ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಿಕ್ಕಾಗಲೆಲ್ಲ ಒಂದು ಮುಗುಳ್ನಗೆ ಖಚಿತವಾಗಿತ್ತು. ಇದೇ ನೆಪದಲ್ಲಿ ಅವರ ಒಂದೆರೆಡು ಪುಸ್ತಕಗಳನ್ನು ಸಹ ಓದಿಬಿಟ್ಟೆ, ಅವುಗಳಲ್ಲಿ ತುಂಬಾ ಇಷ್ಟವಾಗಿದ್ದು ಕುಕ್ಕರಹಳ್ಳಿ ಕುರಿತದ್ದು.

ಗೆಳೆಯ ನೇಸರನಿಗೆ ಅವರ ತಂದೆಯ ಸಾವಿನ ನೋವನ್ನು ಅರಗಿಸಿಕೊಳ್ಳುವ ಶಕ್ತಿ ಬರಲಿ  🙁

-ಜಡಿಯಪ್ಪ ಗೆದ್ಲಗಟ್ಟಿ 

ನಮ್ಮ ನೆರೆಮನೆಯವರೇ ಆದ, ಹಿರಿಯ ಬರಹಗಾರರೂ, ವಿಮರ್ಶಕರೂ ಆಗಿದ್ದ ಶ್ರೀ ಶಿವರಾಮ ಕಾಡನಕುಪ್ಪೆ ಸರ್ ಅವರು ಇಂದು ಬೆಳಿಗ್ಗೆ ನಮ್ಮನ್ನು ದೈಹಿಕವಾಗಿ ಅಗಲಿದ್ದಾರೆ. ಎರಡು ವರ್ಷಗಳಿಂದ ಅನಾರೋಗ್ಯದ ಸಮಸ್ಯೆಯಿಂದಾಗಿ ದೈಹಿಕವಾಗಿ ಬಳಲಿದ್ದರೂ ಕೂಡ, ಎಷ್ಟೋ ಬಾರಿ ಚೇತರಿಸಿಕೊಂಡು ಮರಳಿಬಂದಿದ್ದವರು ಕಳೆದ ಆರು ತಿಂಗಳಿಂದ ಹೆಚ್ಚು ಕೃಶಗೊಂಡಿದ್ದರು.

ಅವರಿಗೆ ಪ್ರೀತಿಯ ಶ್ರದ್ಧಾಂಜಲಿ…

-ಚರಿತಾ ಮೈಸೂರು 

Leave a Reply