ಕಂಜರ್ಪಣೆಯ ‘ಅಗೇಡಿ’

ಸೀದಾಸಾದ ಸ್ವಭಾವದ ಚಿಂತಕ ಕೆ ಪಿ ಸುರೇಶ ಅವರ ವಿಜಯ ಕರ್ನಾಟಕದ ಅಂಕಣಗಳ ಸಂಗ್ರಹ ‘ಅಗೇಡಿ’ ಇದೀಗ ಪುಸ್ತಕ ರೂಪದಲ್ಲಿ…. .

ಪ್ರತಿಗಳಿಗೆ 0821 428 7558 / 93422 74331 ಸಂಪರ್ಕಿಸಿ ಮತ್ತು ಬೆಂಗಳೂರಿನ ಅಂಕಿತದಲ್ಲೂ ಲಭ್ಯ.

🥦 ವಿಷಯ ವೈವಿಧ್ಯ, ಅದನ್ನು ನಿಭಾಯಿಸುವ ಶಿಸ್ತು, ಪಾಂಡಿತ್ಯ ಸುರೇಶರಿಗೆ ಇದೆ. ಅಂಕಣ ಬರಹದಲ್ಲಿ ತೂರಿ ಬರಬಹುದಾದ ಉಡಾಫೆಯ ಬರವಣಿಗೆಗಳಿಂದ ಸುರೇಶ ದೂರ ಉಳಿದಿದ್ದಾರೆ. ಹಾಗೂ ಕಠಿಣವಾದ ವಿಷಯಗಳನ್ನು ಸರಳವಾಗಿ ಬರೆಯುವುದನ್ನು, ನಿಲುವುಗಳನ್ನು ನಿಷ್ಠುರವಾಗಿ ತೆಗೆದುಕೊಳ್ಳುವುದನ್ನೂ ಸುರೇಶ ಕರಗತ ಮಾಡಿಕೊಂಡಿರುವುದರಿಂದ ಪುಸ್ತಕವು ಓದಿಸಿಕೊಂಡು ಹೋಗುವುದೂ ಅಲ್ಲದೇ, ತುಸು ನಿಂತು ಆಲೋಚಿಸಿ ಚಿಂತೆಗೂ ಹಚ್ಚುವ ಕೆಲಸವನ್ನು ಮಾಡುತ್ತದೆ. —-ಎಂ.ಎಸ್ ಶ್ರೀರಾಮ್

ಸುರೇಶ ಅವರ ಲೇಖನಗಳು ಹಲವು ವಿಷಯಗಳನ್ನು ಚರ್ಚಿಸುತ್ತಾ ಅವುಗಳನ್ನು ಅರ್ಥ ಮಾಡಿಕೊಳ್ಳಲು ನಮ್ಮನ್ನು ಆಹ್ವಾನಿಸುತ್ತವಷ್ಟೇ ಅಲ್ಲ; ಈ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಬೇಕಾದ ಸತತ ಪ್ರಯತ್ನಗಳ ಅವಶ್ಯಕತೆಯನ್ನು ಸೂಚಿಸುತ್ತವೆ. ಇವರು ಒಂದು ಬೌದ್ಧಿಕ ಉಳುಮೆಯ ಮೂಲಕ ಅಗೇಡಿ ಸಾಲು ನಿರ್ಮಿಸಿದ್ದಾರೆ. ತನ್ಮೂಲಕ ಗ್ರಾಮೀಣ ಭಾರತದ ಸ್ಥಿತಿಗತಿ ಕೇವಲ ಕೃಷಿಕರಿಗೆ ಸಂಬಂಧಿಸಿದ ಚಿಂತೆಯಲ್ಲ; ಅದೊಂದು ನಾಗರಿಕತೆಯ ಪ್ರಶ್ನೆ ಎಂಬುದನ್ನು ನಿರೂಪಿಸಿದ್ದಾರೆ.
-ಎ. ಆರ್. ವಾಸವಿ

Leave a Reply