ಮುಂಬೈನಲ್ಲಿ ಹೊಸ ಕೃತಿಗಳ ಲೋಕಾರ್ಪಣೆ

 

 

 

 

 

ಶ್ಯಾಮಲಾ ಮಾಧವ

ಸರೋಜಾ ಶ್ರೀನಾಥ್, ಸರೋಜಾ ಶ್ರೀನಾಥ್ ಅವರ  ‘ಜಗದಗಲ ಕುತೂಹಲ’ ಮತ್ತು ‘ಸಂಗೀತ – ಸಾಹಿತ್ಯ ಅನುಸಂಧಾನ’  ಹಾಗೂ ಗೀತಾ ಮಂಜುನಾಥ್ ಅವರ  ‘ಕಲಾ ಸೌರಭ ಸರೋಜಾ ಶ್ರೀವಾಥ್’ ಕೃತಿಗಳ ಬಿಡುಗಡೆ ಸಮಾರಂಭ ಮುಂಬೈ ನಲ್ಲಿ ಜರುಗಿತು.

ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗಮತ್ತು ಕನಕ ಸಭಾ ಪರ್ಫಾರ್ಮಿಂಗ್ ಆರ್ಟ್ ಸೆಂಟರ್, ಚೆಂಬೂರ್ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಜರುಗಿತು.

ಕನ್ನಡ ವಿಭಾಗ ಮುಖ್ಯಸ್ಥ ಡಾ.ಜಿ.ಎನ್.ಉಪಾಧ್ಯ ಅವರ ಅಧ್ಯಕ್ಷತೆ ವಹಿಸಿದ್ದರು. ರಂಗಕರ್ಮಿ, ಮೈಸೂರ್ ಅಸೋಸಿಯೇಶನ್ ಸಂಪಾದಕ ಮಂಡಳಿಯ ಡಾ. ಬಿ.ಆರ್. ಮಂಜುನಾಥ್ ಅವರು ಮುಖ್ಯ ಅತಿಥಿಗಳಾಗಿದ್ದರು. ಪತ್ರಕರ್ತ ಶ್ರೀನಿವಾಸ ಜೋಕಟ್ಟೆ, ಪ್ರಾಧ್ಯಾಪಕಿ ಡಾ.ಪೂರ್ಣಿಮಾ ಶೆಟ್ಟಿ ಪರಿಚಯಿಸಿದರು.

ಮೈಸೂರು ಅಸೋಸಿಯೇಶನ್ ನ ಡಾ.ಮಂಜುನಾಥಯ್ಯ, ಅಕ್ಷಯ ಸಂಪಾದಕ ಡಾ.ಈಶ್ವರ ಅಲೆವೂರು, ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿ ಡಾ.ಭರತ್ ಕುಮಾರ್ ಪೊಲಿಪು ಹಾಗೂ ಓಂದಾಸ್ ಕಣ್ಣಂಗಾರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಳಿನಿ ಪ್ರಸಾದ್ ಕಾರ್ಯಕ್ರಮವನ್ನು ನಿರೂಪಿಸಿದರು.

ಕನಕ ಸಭಾ ಪರ್ಫಾರ್ಮಿಂಗ್ ಆರ್ಟ್ಸ್ ವಿದ್ಯಾರ್ಥಿಗಳಿಂದ ಡಾ.ಸಿರಿ ರಾಮ ನಿರ್ದೇಶನದಲ್ಲಿ ನಡೆದ ನೃತ್ಯ ಕಾರ್ಯಕ್ರಮದ ಕಲಾ ಸೌರಭದೊಡನೆ ಸಾಹಿತ್ಯಿಕ ಕಾರ್ಯಕ್ರಮ ಸ್ಮರಣೀಯ ಸಂಜೆಯಾಯ್ತು.

 

1 comment

  1. ಬಹಳ ಖು಼ಷಿ. ಇಂತಹ ಬರಹ ಇನ್ನಷ್ಟು ಬರಲಿ

Leave a Reply