ಮಳ್ಳು ಮಳೆ ಮೀಯುವುದು ಹೇಗೋ..

   ರಾಜು ಹೆಗಡೆ

ಮಳ್ಳು ಮಳೆ

ವಿಚಿತ್ರವಾದ ವಿಷಾದವೊಂದು
ಖುಷಿಯಿಂದ ಬಂದು
ಕೂತಿದೆ
ಮಳೆಯಲ್ಲಿ ಬಿಸಿಲು
ರಸ್ತೆಗಳ ಉದ್ದಕ್ಕೂ
ಹಣ್ಣು ತರಕಾರಿ
ಬಗೆ ಬಗೆಯ
ಮಂದಿ
ಸಾಲಾಗಿ ನಿಂತ

ಆಟೊ
ಸರ್ ಎಲ್ಲಿಗೆ..
ಭಯವಾಗುತ್ತದೆ
ಖುಷಿಯಲ್ಲಿ
ಕಡಲ ಭೋರ್ಗೆರತ
ಕಡಿಮೆಯಾಗಿದೆ

ಮತ್ತದೇ ದಾರಿಗಳು
ಅದೇ ಹೊಳೆಯ ಹಾಡು
ನಾಡೇ ನಡೆದು
ಬರುತ್ತಿದೆ
ಕಾಣದ ನವಿಲ ಹಿಂದೆ

ಮಳ್ಳು ಮಳೆ
ಮೀಯುವುದು ಹೇಗೋ
ನಗುವ ಒರತೆಗಳು..

1 comment

  1. ಮಳೆ ಮತ್ತು ಪದ್ಯ ಯಾವಾಗಲೂ ಜೀವಂತ.
    ಚೆನ್ನಾಗಿದೆ ಸರ್.

Leave a Reply