ತುಂಬಾ ಬೋರ್ ಹೊಡೆಸುತ್ತಿದ್ದರು ಆದರೆ ಹಾರ್ಮ್ ಲೆಸ್ ವ್ಯಕ್ತಿ..

ಪ್ರತಿಭಾ ನಂದಕುಮಾರ್ 

ತುಂಬಾ ಬೋರ್ ಹೊಡೆಸುತ್ತಿದ್ದರು ಆದರೆ ಹಾರ್ಮ್ ಲೆಸ್ ವ್ಯಕ್ತಿ.

ಒಂದು ದಿನ ರಾತ್ರಿ ಹನ್ನೆರಡರ ಮೇಲೆ ಅವರು ಫೋನ್ ಮಾಡಿ “ನೋಡಿ ಕಾವ್ಯ ಅಂದರೆ…” ಅಂತ ಮಾತು ಶುರು ಮಾಡಿದ ತಕ್ಷಣ ನಾನು ಅವರನ್ನು ಅರ್ಧದಲ್ಲೇ ನಿಲ್ಲಿಸಿ “ಸಾರ್..ನಾವು ಸಂಸಾರಸ್ಥರು ಇಷ್ಟು ಹೊತ್ತಿನಲ್ಲಿ ಕಾವ್ಯದ ಬಗ್ಗೆ ಮಾತಾಡಲ್ಲ ಸಾರ್. ನಾನು ಪುರುಸೊತ್ತಾದಾಗ ಮಾತಾಡ್ತೀನಿ” ಅಂತ ಫೋನಿರಿಸಿದ್ದೆ.

ಆಮೇಲೆ ಕಾಲರ್ ಐಡಿ ಫೋನ್ ಬಂದ ಮೇಲೆ ಅವರ ಕಾಲ್ ನ ಕಟ್ಟುನಿಟ್ಟಾಗಿ ತಪ್ಪಿಸುತ್ತಿದ್ದೆ.

ಒಂದು ದಿನ ಅವರಿಗೆ ನೇರವಾಗಿ ಹೇಳಿದ್ದೆ “ಸಾರ್ ಕಿರಂ ಕಾವ್ಯ ಬರೆಯಲ್ಲ ಅದಕ್ಕೆ ಕಾವ್ಯದ ಬಗ್ಗೆ ಮಾತಾಡ್ತಾರೆ ಹಾಗಾಗಿ ಕೇಳಕ್ಕೆ ಚೆನ್ನಾಗಿರುತ್ತೆ. ನೀವು ಕವಿ, ಕಾವ್ಯ ಬರೀತೀರಿ, ಅದರ ಬಗ್ಗೆ ಮಾತಾಡಬಾರದು ಸಾರ್”

ಒಂದು ಕವಿಗೋಷ್ಠಿ ಪ್ರಾರಂಭದಲ್ಲಿಯೂ ಎಚ್ಚರಿಸಿದ್ದೆ “ಸಾರ್ ಸುಮ್ಮನೆ ಕವನ ಓದಿ ಅದರ ಬಗ್ಗೆ ಲೆಕ್ಚರ್ ಕೊಡಬೇಡಿ ಪ್ಲೀಸ್”. ಆದರೂ ಅವರು ಹತ್ತು ನಿಮಿಷ ಮಾತಾಡಿಯೇ ಕವನ ಓದಿದ್ದು.

ಆದರೂ ನಮ್ಮಿಬ್ಬರ ನಡುವೆ ಕಹಿತನ ಇರಲಿಲ್ಲ. ಸ್ನೇಹವೇ ಇತ್ತು.

ನಿನ್ನೆ ತಾನೇ ಅವರನ್ನು ಒಂದು ಮಕ್ಕಳ ಸಾಹಿತ್ಯ ಪ್ರಶಸ್ತಿಗೆ ಪರಿಗಣಿಸಿ ಅಂತ ಹೇಳ್ತಿದ್ದೆ.

Leave a Reply