ಪಾಯಸದಲ್ಲಿ ಗೋಡಂಬಿಯಂತೆ ದಿನಕ್ಕೊಂದು ನಾಟ್ಕ

ದಿನಕ್ಕೊಂದು ನಾಟ್ಕ
‘ ಉತ್ತರ ರಾಮಾಯಣಂ’
‘ಪಾಯಸದಲ್ಲಿ ಗೋಡಂಬಿ ಸಿಕ್ಕಿದ್ ಹಾಗೆ‘

ನಾನು ಈ ಬಾರಿ ಕೇರಳಕ್ಕೆ ಹೋಗೋ ಮನಸು ಮಾಡಿದ್ದೇ ಒಂದಿಷ್ಟು ಸಾಂಸ್ಕøತಿಕ ಅನುಭವ ಗಳಿಸೋ ಆಶೆಯಿಂದ. ಮುನ್ನೂರರವತ್ತೈದು ದಿನಗಳೂ ಇಪ್ಪತ್ನಾಲ್ಕು ಗಂಟೆಗಳೂ ಸದಾ ಅಲರ್ಟ್ ಆಗಿರಬೇಕಾದ ಕೆಲ್ಸ ನಂದು. ನಿರಂತರ ಸಂಪರ್ಕ ನೀಡಬೇಕಾದ ವಿಭಾಗ ನಂದಾಗಿದ್ರಿಂದ ಏನೇ ತೊಂದರೆ ಆದ್ರೂ ಬಿಸಿಲು ಮಳೆ, ಹಗಲು, ರಾತ್ರಿ ನೋಡ್ದೇ ಓಡೋದೇ. ರಜಾ ಹಾಕೋದೂ ಕಷ್ಟ. ನನ್ ಆಸಕ್ತಿಗಳಿಗೂ ನನ್ ಕೆಲಸಕ್ಕೂ ತಾಳ ಮೇಳ ಇಲ್ಲ. ಅಂಥಾದ್ರಲ್ಲಿ ವೇಳೆ ಹೊಂದಿಸ್ಕೊಂಡು ನಾಟ್ಕ ನೋಡೋದೂ ಮಾಡೋದೂ ತಂಬಾ ಕಷ್ಟವೇ.

ಕೆಲ್ಸ ಮಾಡಿದ್ದೂ ಚಿಕ್ ಚಿಕ್ ಊರುಗಳಲ್ಲಿ.ಹಾಗಾಗೇ ನಾನು ಹಲವಾರು ಮಹತ್ವದ ರಂಗಪ್ರಯೋಗಗಳನ್ನ ನೋಡೋದ್ರಿಂದ ವಂಚಿತ. ಇಂಥಾದ್ರಲ್ಲಿ ಬಂದ ಪ್ರಮೋಷನ್, ‘ಎವರ್ ಬಿಸಿ’ ಫೀಲ್ಡ್ ನಿಂದ ಸ್ವಲ್ಪ ಆಚೆ ಇಟಿರೋದ್ರ ಜೊತೆ ಸಾಂಸ್ಕøತಿಕವಾಗಿ ಶ್ರೀಮಂತವಾಗಿರೋ ಮಧ್ಯ ಕೇರಳಕ್ಕೂ ಕರ್ಕೊಂಡು ಹೋಗ್ತೀನಿ ಅಂದಾಗ ಸಹಜವಾಗೇ ಖುಶಿಯಿತ್ತು. ಇರೋ ಎರಡು ವರ್ಷಗಳಲ್ಲೇ ಸಾಕಷ್ಟು ಅನುಭವ ತುಂಬಿಕೊಳ್ಳೊ ಹಪಾಹಪೀನೂ ಇತ್ತು. ಅದಕ್ಕೆ ಸರಿಯಾಗಿ ಮನೇ ಪಕ್ಕದಲ್ಲೇ ರಂಗಮಂದಿರ ಸಿಕ್ಕಿದ್ದು ಪಾಯಸ ಕುಡಿದಂಥ ಖುಶಿ.

ಈಗ ಪಾಯಸದಲ್ಲಿ ಗೋಡಂಬೀನೂ ಸಿಕ್ಕೋ ಕಾಲ ಬಂದಿತ್ತು. ‘ಕೇರಳ ಸಂಗೀತ ನಾಟಕ ಅಕಾಡಮಿ’ಯ ‘ ದಿನಕ್ಕೊಂದು ನಾಟಕ’ ಕಾರ್ಯಕ್ರಮ ಶುರುವಾಗಿತ್ತು.

ಕೇರಳದಲ್ಲಿ ಸಂಗೀತ, ನಾಟಕ, ಕ್ಕೆ ಬೇರೆ ಬೇರೆ ಅಕಾಡಮಿಗಳಿಲ್ಲ. ಎರಡೂ ಸೇರಿ ‘ ಸಂಗೀತ ನಾಡಕ ಅಕಾಡಮಿ’ ಅದೇ ಎಲ್ಲ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳೋದು. ನನ್ ಯೋಗಕ್ಕೆನೋ ಎನ್ನೋ ಹಾಗೆ ಈ ವರ್ಷದ ಹೊಸಾ ಪ್ರಾಜೆಕ್ಟ್ ‘ ದಿನಕ್ಕೊಂದು ನಾಟ್ಕ’
ಒಂದು ಅಕಾಡಮಿ ಮನಸನು ಮಾಡಿದ್ರೆ ಎಂತೆಂಥ ಕೆಲಸಗಳನ್ನ ಮಾಡ್ಬಹುದು ನೋಡಿ. ಈ ಕಾರ್ಯಕ್ರಮ ಹೇಗೆ ಅಂದ್ರೆ: ಅಕಾಡಮಿ ಪ್ರತಿ ವರ್ಷ ಪ್ರೊಫೆಷನಲ್ ಮತ್ತು ಹವ್ಯಾಸಿ ನಾಟಕಗಳಿಗಾಗಿ ಬೇರೆ ಬೇರೆ ಸ್ಪರ್ಧೆಗಳನ್ನ ಮಾಡತ್ತೆ. ಅದರಲ್ಲಿ ಹೆಚ್ಚಿನ ಎಲ್ಲ ತಂಡಗಳೂ ಭಾಗವಹಿಸ್ತವೆ. ಎಲ್ಲ ಭಾಗಗಳಲ್ಲೂ ಬಹುಮಾನಗಳನ್ನ  ಇರುತ್ತವೆ .

ಈ ಕಾರ್ಯಕ್ರಮಕ್ಕಾಗಿ ಅಕಾಡಮಿ ಸುಮಾರು ಐವತ್ತು ಅರವತ್ತು ತಂಡಗಳನ್ನ ಗುರುತಿಸಿ ಕೈತುಂಬ ಹಣ ಕೊಡತ್ತೆ. ಪ್ರತಿ ತಂಡವೂ ಅಕಾಡಮಿ ಗುರುತಿಸಿದ ಏಳು ಸೆಂಟರ್ ಗಳಲ್ಲಿ ನಾಟ್ಕ ಆಡ್ತವೆ. ಒಂದು ತಂಡ ನಾಟ್ಕ ಮುಗಿಸಿ ಹೋಗ್ತಿದ್ದಂಗೆ ಮುಂದಿನ ವಾರ ಇನ್ನೊಂದು ತಂಡ ಬರತ್ತೆ. ಈ ಏಳು ಸೆಂಟರ್ಗಳಲ್ಲಿ ನನ್ ಪಕ್ಕದ ಟಾಸ್ ಹಾಲ್ ಕೂಡ ಒಂದಾದದ್ದು ನನಗೆ ‘ಗೋಡಂಬಿ’ ಯಾಯ್ತು. ವರ್ಷವಿಡೀ ಪ್ರತಿ ವಾರ ಮಿನಿಮಮ್ ಒಂದು ನಾಟ್ಕಕ್ಕೆ ಧೋಖಾ ಇರ್ಲಿಲ್ಲ. ಹೀಗಾಗಿಯೇ ನಾನು ಮಲಯಾಳಂ ನ ಒಂದಿಷ್ಟು ಪ್ರೊಫೆನಲ್ ಮತ್ತು ಹವ್ಯಾಸಿ ಶ್ರೇಷ್ಠ ನಾಟ್ಕಗಳನ್ನ ನೋಡೋಕೆ ಸಾಧ್ಯವಾಯ್ತು.

ನನ್ನೂರಿಗೆ ನಾಟಕಗಳು ಬರುತ್ತಿದ್ದುದು ಪ್ರತಿ ಬುಧವಾರ. ಒಂದುವಾರ ಹವ್ಯಾಸಿ, ಒಂದು ವಾರ ಪ್ರೊಫೆಷನಲ್ ಹೀಗೆ. ಪ್ರೊಫೆಷನಲ್ ನಾಟ್ಕಗಳು ಅವಧಿಯಲ್ಲಿ ತುಸು ದೊಡ್ಡವು. ಮೂರು ಘಂಟೆಗೂ ಮೀರಿದವು. ನಾಟಕದ್ ಮಧ್ಯೆ ಸ್ವಲ್ಪ ದೊಡ್ಡವೇ ಆನ್ನಬಹುದಾದ ಇಂಟರ್ವಲ್. ಆದ್ರೆ ಎಲ್ಲರಿಗೂ ಬೋರ್ ಆಗೋ ಈ ಇಂಟರ್ವಲ್ ನನಗೆ ಮಾತ್ರ ಹಿತವಾಗಿತ್ತು. ಇಂಟgವಲ್ ನಲ್ಲಿ ಮನೆಗೆ ಹೋಗಿ ಊಟ ಮಾಡ್ಕೊಂಡು ಬರ್ತಿದ್ದೆ! ಬರೋವಾಗ ಪಕ್ಕದ್ ಹೋಟ್ಲಿಂದ ಉಣ್ಣಿ ಗೆ ತಿಂಡಿ ತರ್ತಿದ್ದೆ.

‘ ದಿನಕ್ಕೊಂದು ನಾಟಕ’ ದಲ್ಲಿ ನಾವು ಮೊದಲು ನೋಡಿದ ನಾಟ್ಕ ‘ ಉತ್ತರ ರಾಮಾಯಣಂ’. ಪೌರಾಣಿಕ ಪ್ರೊಫೇಷನಲ್ ನಾಟ್ಕ. ಈ ಪ್ರೊಫೆಷನಲ್ ನಾಟ್ಕಗಳು ನಮ್ಮ ಕಂಪನಿ ನಾಟಕಗಳಿಂತ ಭಿನ್ನ. ಆ ಕುರಿತು ಇನ್ನೊಮ್ಮೆ ಹೇಳ್ತೀನಿ. ಎಲ್ಲರಿಗೂ ಗೊತ್ತಿರೋ ರಾಮ ರಾವಣ ಯುದ್ಧಾನಂತರದ ಕಥೆ. ಸೀತೆಯ ಮೇಲೆ ಕೇಂದ್ರಿತವಾದ ರಂಗಪ್ರಯೋಗ ಅದು. ರಾಮ ಸೀತೇನ ಕಾಡಿಗಟ್ಟೋದು, ಲವ ಕುಶರ ಜಜನ, ಬಾಲ್ಯ, ಯಾಗದ ಕುದುರೇ ಕಟ್ಟೋದು, ಯುದ್ಧ, ತಂದೆ ಮಕ್ಕಳ ಸಮಾಗಮ….ಹೀಗೆ.

ಪ್ರಸ್ತುತ ಪ್ರಯೋಗ ಯುದ್ಧಾನಂತರದ ಸೀತೆಯ ಬದುಕು, ಹೋರಾಟಗಳ ಮೇಲೆ ಹೆಚ್ಚು ಒತ್ತುಕೊಡುತ್ತ ಮಹಿಳಾಪರವಾಗಿತ್ತು. ರಾಮ£ ನಡೆಗಳನ್ನ ಹೆಚ್ಚು ಹೆಚ್ಚು ವಿಮರ್ಶಿಸುವ ಪ್ರಯತ್ನವಿತ್ತು. ಶ್ರೇಷ್ಠ ದರ್ಜೆಯ ನಟ ನಟಿಯರು, ನಿಧಾನ ಹರಿವ ತೊರೆಯಂಥ ಸಂಗೀತ, ಚೆಂದನ್ನ ಸೆಟ್ಟಿಂಗ್ ಗಳು. ನಾನು ನೋಡಿದ ಮೊದಲ ಪ್ರೊಫೆಷನಲ್ ನಾಟ್ಕ ಇಷ್ಟವಾಯ್ತು

7 comments

 1. ಪಾಯಸದಲ್ಲಿ ಗೋಡಂಬಿಯಂತೆ ದಿನಕ್ಕೊಂದು ನಾಟಕ .ವಷಯ ವಿವರಣೆ ಸೊಗಸಾಗಿತ್ತು .ರಾಮಾಯಣದಲ್ಲಿ ಸೀತಾ ಪರಿತ್ಯಾಗದ ಸನ್ನಿವೇಶ ತುಂಬಾ ಸ್ವಾರಸ್ಯಕರವಾಗಿದೆ .‌ವಿವರಣೆ ನೀಡಿದ್ದಕ್ಕೆ ಧನ್ಯವಾದಗಳು .

 2. ಯಾಕೆ ಅರ್ಧಕ್ಕೆ ನಿಲ್ಲಿಸಿಬಿಟ್ಟಿರಿ? ಪಾಯಸದ ಮಧ್ಯೆ ಗೋಡಂಬಿ ಸಿಕ್ಕಿತು ಎನ್ನುವಷ್ಟರಲ್ಲಿ ಕೈ ಜಾರಿ ಬಿದ್ದ ಅನುಭವ. ದಯವಿಟ್ಟು ಇನ್ನೊಂದು ಚೂರು ಗೋಡಂಬಿ ದಯಪಾಲಿಸಿ.‌
  ವಂದನೆಗಳೊಂದಿಗೆ,
  ಧನ್ಯಕುಮಾರ ಮಿಣಜಗಿ

 3. ಬರೀತೀದೀನಿ ಸರ್ ಪ್ರತಿ ವಾರ.
  ಶನಿವಾರ ಬರ್ತದೆ.
  ತುಂಬ ಧನ್ಯವಾದಗಳು

 4. ಸೂಪರ್ ಆಗಿದೆ.ಜಾರುಬಂಡೆಯಲ್ಲಿ ಜಾರಿದಂತೆ ಓದಿಸಿಕೊಂಡು ಹೋಗುತ್ತೆ.ಧನ್ಯವಾದಗಳು..

Leave a Reply