ಮೊರೆಯುವ ಗಾಳಿಯ ಶಿಳ್ಳೆಯನ್ನ, ದಪ್ಪ ಹನಿಗಳ ಮಳೆಯನ್ನ ವಿವರಿಸಲು ಸಾಧ್ಯವೇ ಇಲ್ಲ..

ಗಂಗಾಧರ ಕೊಳಗಿ 

ಪ್ರಾಯಶ: ಕಳೆದ 12-13 ವರ್ಷಗಳಿಂದ ಸುರಿದಿರದ ಮಳೆ ಈ ಬಾರಿ ಮಲೆನಾಡಿನಲ್ಲಿ ಸುರಿಯುತ್ತಿದೆ.

ಅದೇನು ವಿಸ್ಮಯವೋ ಮಳೆ, ಬಿಸಿಲು, ಚಳಿ ಎಷ್ಟೇ ಭೀಕರವಾಗಿದ್ದರೂ ನಂತರ ಮರೆತುಹೋಗಿಬಿಡುವದು ಪ್ರಾಯಶ: ಬಹುತೇಕರ ಅನುಭವ. ಅವನ್ನು ಯಥಾವತ್ತಾಗಿ ನೆನಪಿನಲ್ಲಿ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುವದಿಲ್ಲ. ಕಳೆದ ಒಂದು ತಿಂಗಳಿನಿಂದ ಹಗಲು, ರಾತ್ರಿ ಬಿಟ್ಟೂಬಿಡದೇ ಸುರಿಯುತ್ತಿರುವ ಮಳೆ ಕಳೆದ ನಾಲ್ಕಾರು ದಿನಗಳಿಂದ ರಭಸದ ಗಾಳಿಯನ್ನೂ ತನ್ನಜೊತೆಗೆ ಸೇರಿಸಿಕೊಂಡಿದೆ. ಮರ ಗಿಡಗಳನ್ನು ಅಲ್ಲಾಡಿಸುತ್ತ ಮೊರೆಯುವ ಗಾಳಿಯ ಶಿಳ್ಳೆಯನ್ನ, ದಪ್ಪ ಹನಿಗಳ ಮಳೆಯನ್ನ ವಿವರಿಸಲು ಸಾಧ್ಯವೇ ಇಲ್ಲ.

ಕೆಲವರಿಗೆ ಮಳೆಯಲ್ಲಿ ತೊಯ್ದು ತೊಪ್ಪೆಯಾಗುವದು ಮೋಜಾದರೆ, ನೆಲದಿಂದ, ದುಡಿಮೆಯಿಂದ ಅನ್ನ ಕಾಣಬೇಕಾದವರಿಗೆ ಯಮ ಸಂಕಟ. ಹಾಗಂತ ಅವರೇನೂ ಮಳೆಯ ದ್ವೇಷಿಗಳಲ್ಲ; ಅದರ ಜೊತೆ ಜೊತೆಗೆ ಬದುಕುತ್ತ ಬಂದವರು, ಬದುಕುವವರು. ಆದರೆ ಮನೆಯ ಸದಸ್ಯನೊಬ್ಬ ಹಠ ತೊಟ್ಟು, ಭಯಂಕರ ಚಂಡಿ ಹಿಡಿದು ಮನೆಯನ್ನ ಧ್ವಂಸ ಮಾಡಲು ಮುಂದಾದರೆ ಆಗುವ ತಲ್ಲಣ, ಸಂಕಟ, ಭಯ ಮಲೆನಾಡಿನ ಜನರಿಗಾಗುತ್ತಿದೆ. ಹುಟ್ಟಿನಿಂದ ಮಳೆ, ಕಾಡು ಇವುಗಳ ಜೊತೆಗೇ ಬದುಕುತ್ತ ಬಂದವರಿಗೂ ಭೀತಿ ಹುಟ್ಟಿಸುವ ಪರಿ ಇದು. ಮರೆತುಹೋದ ಮಳೆ ಮತ್ತೆ ನೆನಪಿಸತೊಡಗಿದೆ.

ಅವನ್ನೆಲ್ಲ ಪ್ರಾಯ:ಶ ಬರಹದ ಮೂಲಕ ವಿವರಿಸಲು ಸಾಧ್ಯವಿಲ್ಲ. ಚಿತ್ರಗಳು ಹೇಳಬಹುದೇನೋ?

1 comment

Leave a Reply