ಎಲ್ಲದರಲ್ಲೂ ಸ್ಯಾನಿಟರಿ ಪ್ಯಾಡ್ ಗಳು ಇವೆ..

ಮೇಘಾ ಯಲಿಗಾರ್ 

ನೆರೆ ಸಂತ್ರಸ್ತರಿಗಾಗಿ ಪರಿಹಾರ ಸಾಮಗ್ರಿ ಸಂಗ್ರಹಿಸಲು‌ ಯೋಚಿಸಿದಾಗ ನಮ್ಮ ಪಟ್ಟಿಯಲ್ಲಿ ಮೊದಲಿದ್ದ ವಸ್ತುವೇ ಸ್ಯಾನಿಟರಿ ಪ್ಯಾಡ್.

ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಲ್ಲಿ ಪಿರಿಯಡ್ಸ್ ಆದ ಹೆಣ್ಮಕ್ಕಳ ಕಷ್ಟವನ್ನು ಪ್ರತಿ ಹುಡುಗಿಯೂ ಅನುಭವಿಸಬಲ್ಲಳು.

ನನ್ನ ಬಳಿ ಸಂಗ್ರಹವಾದ ಬಹುಪಾಲು ಹಣವನ್ನು ನಾನು ಪ್ಯಾಡ್ ಖರೀದಿಸಲು ಬಳಸಿದೆ.

ಆಮೇಲೆ ಈಗ ಸಂಜೆ ಯಾರೋ ಹುಡುಗಿಯೊಬ್ಬಳು ಕರೆ ಮಾಡಿ ತಮ್ಮ ಪಿ ಜಿ ಯಿಂದ ಒಂದಿಷ್ಟು ಸಾಮಾಗ್ರಿಗಳನ್ನು ಸಂಗ್ರಹಿಸಲಾಗಿದೆ ಆದರೆ ನಾನು ಊರಿಗೆ ಹೋಗ್ಬೇಕು ಪ್ಲೀಸ್ ಬಂದು ತಗೊಂಡು ಹೋಗಿ ಅಂದ್ಲು,

ಅಲ್ಲಿಗೆ ಹೋಗಿ ಅವರು ಕೊಟ್ಟ ವಸ್ತುಗಳನ್ನು ತಗೊಂಡು ಬಂದೆ.

ಅವರು ಕೊಟ್ಟ ಮೂರ್ನಾಲ್ಕು‌ ಪುಟ್ಟ ಚೀಲಗಳಲ್ಲಿ ಎಲ್ಲದರಲ್ಲೂ ಸ್ಯಾನಿಟರಿ ಪ್ಯಾಡ್ಗಳು ಇವೆ.

ನನಗಾದ ಖುಷಿ, ನೆಮ್ಮದಿ ಎದೆಯಲ್ಲಿ ಮೂಡಿದ ಭರವಸೆಯನ್ನು ವರ್ಣಿಸಲಾಗುತ್ತಿಲ್ಲ.‌

ನಾವು ಹುಡುಗಿಯರು ಈ ಒಗ್ಗಟ್ಟನ್ನು ಎಲ್ಲಾ ವಿಷಯಗಳಲ್ಲೂ ತೋರಿಸಿದರೆ I swear we can make this world a better place  🙂
Love you girls  ☺

1 comment

Leave a Reply