ಒಂದು ಮಿದಿಕೆ ಮಣ್ಣು ಇಲ್ಲವೇ ಸಗಣಿ..

ಎಲ್ ಸಿ ನಾಗರಾಜ್ 

ಒಂದು ಮಿದಿಕೆ ಮಣ್ಣು ಇಲ್ಲವೇ ಸಗಣಿ , ಅದಕ್ಕೆ ನೆಟ್ಟ ಗರಿಕೆ ಪತ್ರೆ ಅಷ್ಟೇ , ಮಣ್ಣಿಂದೆದ್ದು ಮತ್ತೆ ಮಣ್ಣಾಗುವ ರೂಪ

ಇದನ್ನ ಬೆನಕ , ಬೆನವಣ್ಣ ಎಂಬ ಹೆಸರುಗಳಿಂದ ಕರೆಯುತ್ತಿದ್ದರು . ಭೂಮಿ ಉಳುಮೆಗೆ ಇಂತಹದೊಂದು ಮಿದಿಕೆ ಮಾಡಿ , ಪೂಜಿಸಿದ ನಂತರ ಬಾಳೆಹಣ್ಣು , ತೆಂಗಿನಕಾಯಿಯನ್ನ ಎತ್ತುಗಳಿಗೆ ತಿನಿಸಿದ ನಂತರವೇ ಹೊನ್ನೇರು

ಬೆನಕ ಗಣಪತಿ ಆದದ್ದು ಹ್ಯಾಗೆ ಅಂತಾ ಗೊತ್ತಿಲ್ಲ , ಪಶ್ಚಿಮದ ಅಧ್ಯಯನಕಾರ Zeigler ಪುರಾಣಗಳ ಮೂಲವನ್ನ ತಡಕಿದ್ದಿದೆ , ದೇಬಿ ಪ್ರಸಾದ್ ಚಟ್ಟೋಪಾಧ್ಯಾಯರ what is living and what is dead in Indian philosophy ಇದೆ

ಇದೆಲ್ಲದರ ಆಚೆಗೆ ಈಗಲೂ ಮಣ್ಣು ಅಥವಾ ಸಗಣಿಯ ಮಿದಿಕೆಯಿಂದ ರೂಪುಗೊಂಡ ಬೆನಕ , ಬೆನವಣ್ಣ ಇವನು

ರಸ್ತೆಗೆ ಹಗ್ಗ ಹಿಡಿದು ರೊಕ್ಕ ಕೀಳುವುದಿಲ್ಲ , ಕಿವಿಯ ತಮಟೆ ಒಡೆದು ಹೋಗುವ ಹಾಗೆ ಸಿನಿಮಾ ಹಾಡು ಹಾಕುವುದಿಲ್ಲ

ಭೂಮಿಯಲ್ಲಿ ಹುಟ್ಟಿ ಮತ್ತೆ ಭೂಮಿ ಸೇರಿಬಿಡುತ್ತಾನೆ , ಉಳಿದ ವಿಕೃತಿಗಳೆಲ್ಲ ಆಧುನಿಕ ಕೇಡುಗಳು

Leave a Reply