‘ನಗರ ನಕ್ಸಲ್’ ಕವನ: ನನ್ನ ಪಾಡಿಗೆ ನಾನು

ನನ್ನ ಪಾಡಿಗೆ ನಾನು

ಎಲ್ಲವನ್ನೂ ಎಲ್ಲರನ್ನೂ ಬೈದುಕೊಂಡು

ಸುಖವಾಗಿದ್ದೆ.

ಬೈಸಿಕೊಂಡವರು ಬೈದು ನಕ್ಕು

ಮುಂದೆ ಸಾಗುತ್ತಿದ್ದರು

ಊರಲ್ಲಿ ಹೋಗುವ ದಾಸಯ್ಯ ಬಂದು

ನಾನು ಅಪಾರ ಅಪಾಯಕಾರಿ ಎಂದು

ಅವರ ಬುಡಕ್ಕೆ ಬತ್ತಿಯಿಡುವ ಬಾಂಬೆಂದು

ಸಮಾಜ ಘಾತಕಳೆಂದು

ಧರ್ಮ ಭ್ರಷ್ಠೆ ಎಂದು

ನಿಂದಿಸಿ ಬಂಧಿಸಿದರು.

ಆಮೇಲೆ ನಾನು ಎಲ್ಲರನ್ನೂ ಎಲ್ಲವನ್ನೂ

ಹೊಗಳಿಕೊಂಡು ತಿರುಗಾಡುವ

ಮುಚ್ಚಳಿಕೆ ಬರೆದುಕೊಟ್ಟೆ.

ಹೊಗಳಿಸಿಕೊಂಡವರು ಈಗ

ನನ್ನನ್ನು ಅರ್ನಾಬನ ತಂಗಿ ಎನ್ನುತ್ತಿದ್ದಾರೆ

ಅದು ಉಪಕಾರಿಯೋ ಅಪಾಯಕಾರಿಯೋ

ತಿಳಿಯದೇ ಕಂಗಾಲಾಗಿದ್ದೇನೆ

ನನ್ನ ಪಾಡಿಗೆ ನಾನು.

Leave a Reply