ನಗರ ನಕ್ಸಲ್ ಕವಿತೆಗಳು: ಕೊರಳಿಗೆ ತಗುಲಿ ಹಾಕಿಕೊಂಡ ಘೋಷಣೆ..

ಪರಿಣತಮತಿಗಳ್

ಕಾವ್ಯ ಗೊತ್ತಿಲ್ಲದವರ ಮುಂದೆ

ಧ್ವನಿಯ ಪ್ರಯೋಗ ಕೂಡದು

ಅಂತ ಗೊತ್ತಿಲ್ಲದವರು ಕೊರಳಿಗೆ

ತಗುಲಿ ಹಾಕಿಕೊಂಡ ಘೋಷಣೆಯೇ

ತುಂಬಾ ಸದ್ದು ಮಾಡಿ ಸಡ್ಡು ಹೊಡೆದು

ನಾಯಿಮರಿ ನಾಯಿಮರಿ ತಿಂಡಿ ಬೇಕೇ

ಎನ್ನುವುದನ್ನು ವಿರೋಧಿಸಿ

ಪ್ರಾಣಿ ದಯಾ ಸಂಘದವರು ರಿಟ್ ಹಾಕಿ

ತಿಂಡಿ ತೀರ್ಥದ ವ್ಯಾಖ್ಯಾನ ನಡೆದು

ನಾಯಿಗೆ ಕಷ್ಟಕೊಟ್ಟ ಆರೋಪದಲ್ಲಿ

ನಗರ ನಕ್ಸಲರನ್ನು ಕಟ್ಟಿಹಾಕಿ….

Leave a Reply