ಅನಿತಾ ತಾಕೊಡೆ ಹಾಗೂ ಜಯಶ್ರೀ ಕಾಸರವಳ್ಳಿ ಅವರಿಗೆ ಪ್ರಶಸ್ತಿ

‘ಜನಸ್ಪಂದನ ಟ್ರಸ್ಟ್ ಶಿಕಾರಿಪುರ’ ನೀಡುವ ‘ಅಲ್ಲಮ ಸಾಹಿತ್ಯ ಪ್ರಶಸ್ತಿ’ಗೆ ಅನಿತಾ ತಾಕೊಡೆಯವರ ಕವನ ಸಂಕಲನ ‘ಅಂತರಂಗದ ಮೃದಂಗ’ ಹಾಗೂ ಜಯಶ್ರೀ ಕಾಸರವಳ್ಳಿಯವರ ಕಥಾ ಸಂಕಲನ ‘ದಿನಚರಿಯ ಕಡೆ ಪುಟಗಳು’ ಆಯ್ಕೆಯಾಗಿದೆ ಎಂದು, ಜನಸ್ಪಂದನ ಟ್ರಸ್ಟ್ ನ ಅಧ್ಯಕ್ಷ ಸುನೀಲ್ ಕುಮಾರ್ ತಿಳಿಸಿದ್ದಾರೆ.

ನವೆಂಬರ್ ತಿಂಗಳಿನಲ್ಲಿ ಶಿಕಾರಿಪುರ ಸಾಹಿತ್ಯೋತ್ಸವ-2018 ಸಂದರ್ಭದಲ್ಲಿ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಖ್ಯಾತ ಸಾಹಿತಿ ನಾ.ಡಿಸೋಜ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಉತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಗೋಷ್ಠಿಯಲ್ಲಿ, ಡಾ.ಬಿ.ವಿ. ವಸಂತ್ ಕುಮಾರ್ ಹಾಗೂ ಡಾ.ಬೋಜರಾಜ ಪಾಟೀಲ್ ಅವರು ಶಿಕಾರಿಪುರದ ಇತಿಹಾಸಕ್ಕೆ ಜನಸಾಮಾನ್ಯರ ಕೊಡುಗೆ ಬಗ್ಗೆ ಹಾಗೂ ಸಮಕಾಲೀನ ಸಾಹಿತ್ಯದ ಬಗ್ಗೆ ಡಾ. ಶುಭಾ ಮರವಂತೆ, ಡಾ.ರಮೇಶ್ ಆಚಾರ್, ಡಾ ಮೋಹನ ಚಂದ್ರಗುತ್ತಿ ಮಾತನಾಡಲಿದ್ದಾರೆ. ಅಂದು ನಾಡಿನ ಹಿರಿಯ ಕಿರಿಯ ಸಾಹಿತಿಗಳ ಹಲವಾರು ಪುಸ್ತಕಗಳು ಲೋಕಾರ್ಪಣೆಗೊಳ್ಳಲಿದೆ. ಅಂದಿನ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ವಿಜೇತರಾದ ಅನಿತಾ ತಾಕೊಡೆ ಮತ್ತು ಜಯಶ್ರೀ ಕಾಸರವಳ್ಳಿಯವರಿಗೆ ‘ಅಲ್ಲಮ ಸಾಹಿತ್ಯ ಪ್ರಶಸ್ತಿ’ ಪ್ರಧಾನಿಸಲಾಗುವುದು.

Leave a Reply