ಕೆನೆಪದರ ಮುಖ್ಯವಲ್ಲ…! ಹೋರಾಟ ದಿಕ್ಕುತಪ್ಪಬೇಕಿಲ್ಲ…!?

ಸಿ ಎಸ್ ದ್ವಾರಕಾನಾಥ್ 

“ನ್ಯಾಯಮೂರ್ತಿ ಸದಾಶಿವ ಕಮೀಷನ್ ವರದಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ‘ಕ್ರೀಮೀ ಲೇಯರ್’ ಅನ್ವಯಿಸಬೇಕೆಂದು ಶಿಫಾರಸ್ಸು ಮಾಡಿದ್ದಾರೆಯೇ..?”ಎಂದು ಕೆಲವರು ಫೋನ್ ಮಾಡಿ ಆತಂಕದಿಂದ ಕೇಳುತಿದ್ದಾರೆ. ಕಳೆದ ಒಂದು ವಾರದಿಂದ ನಾನು ಊರಲ್ಲಿರಲಿಲ್ಲ, ಸಾಮಾಜಿಕ ಜಾಣತಾಣವಷ್ಟೇ ಅಲ್ಲ ಕರ್ನಾಟಕದ ಯಾವುದೇ ಆಗುಹೋಗುಗಳ ಬಗ್ಗೆ ನನಗೆ ಅರಿವಿರಲಿಲ್ಲ.

ನಾನು ಸದಾಶಿವ ಆಯೋಗದಲ್ಲಿ ಇರಬಹುದಾದ ಕೆನೆಪದರದ ಬಗ್ಗೆ ಚಿಂತಿಸತೊಡಗಿದೆ! ನನ್ನ ಬಳಿಯೂ ಜಸ್ಟೀಸ್ “ಸದಾಶಿವ ಕಮೀಷನ್ ಆಫ್ ಎನ್ಕ್ವಯಿರಿ” ಹೆಸರಿನ ಒಂದು ಕಾಪಿಯಿದೆ, ಇದು ಅಧಿಕೃತವೋ ಅನಧಿಕೃತವೋ ಗೊತ್ತಿಲ್ಲ! ಇದನ್ನು ಸದ್ಯಕ್ಕೆ ಅನಧಿಕೃತ ಎಂತಲೇ ಭಾವಿಸುತ್ತೇನೆ. ಕಳೆದ ಸರ್ಕಾರದ ಆರಂಭದಿಂದ ಈವರೆಗೂ ನಾನು ಸರ್ಕಾರದ ಯಾವುದೇ ಸ್ಥಾನಮಾನ ಅಥವ ಸಂಪರ್ಕದಲ್ಲಿ ಇಲ್ಲದ ಕಾರಣ ನನಗೆ ಅಧಿಕೃತವಾದುದನ್ನು ಪಡೆಯುವುದಿರಲಿ, ನೋಡಲೂ ಸಾದ್ಯವಿರಲಿಲ್ಲ. ನನ್ನ ಬಳಿ ಇರುವ ‘ಅನಧಿಕೃತ’ ಪ್ರತಿಯನ್ನೇ ತಡಕಾಡಿದೆ, ಅದರಲ್ಲಿರುವ ಅಂಶಗಳ ಆಧಾರದ ಮೇಲೆ ನನ್ನ ಅಲ್ಪ ಗ್ರಹಿಕೆಗೆ ತೋಚಿದ್ದನ್ನು ಇಲ್ಲಿ ಮಂಡಿಸುತಿದ್ದೇನೆ‌‌‌…? ನನ್ನ ಬರಹಕ್ಕೂ ಅಧಿಕೃತತೆಯ sanctity ಇಲ್ಲ ಎಂದೇ ಭಾವಿಸಿ caveat ಹಾಕಿಕೊಂಡೇ ನಾನಿದ್ದನ್ನು ಬರೆಯುತಿದ್ದೇನೆ.

ಇದನ್ನು ಬರೆಯುವ ಮುಂಚೆ ನನ್ನ ಕೆಲವು ನಿಲುವುಗಳನ್ನು ಸ್ಪಷ್ಟಪಡಿಸಿಬಿಡುತ್ತೇನೆ!? ನಾನು ಒಳಮೀಸಲಾತಿಯ ಪರ ಇರುವವನು, ಕೇವಲ ಪರಿಶಿಷ್ಟ ಜಾತಿ,ಪಂಗಡಗಳಲ್ಲಷ್ಟೇ ಅಲ್ಲ ಹಿಂದುಳಿದ ವರ್ಗಗಳಲ್ಲೂ ಒಳವರ್ಗೀಕರಣ ಆಗಬೇಕೆಂದು ಸ್ಪಷ್ಟವಾಗಿ ಪ್ರತಿಪಾದಿಸುವವನು. ಅಂತೆಯೇ ನಾನು ‘ಕ್ರೀಮಿ ಲೇಯರ್’ ಅಥವ ‘ಕೆನೆಪದರ’ಕ್ಕೆ ಬದ್ದ ವಿರೋದಿ.‌ ನಾನು ಆಯೋಗದಲ್ಲಿದ್ದಾಗ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅದ್ಯಕ್ಷರಾಗಿದ್ದ ಜಸ್ಟೀಸ್ ರತ್ನವೇಲು ಪಾಂಡ್ಯನ್( ಸುಪ್ರೀಂ ಕೋರ್ಟಿನ ಇಂದ್ರಾ ಸಹಾನಿ ತೀರ್ಪು ಕೊಟ್ಟ ಸಂವಿಧಾನ ಪೀಠದಲ್ಲಿದ್ದ ನ್ಯಾಯಮೂರ್ತಿಗಳಲ್ಲಿ ಒಬ್ಬರು) ರವರ ಮುಂದೆ ಬಹಳ ಗಟ್ಟಿದನಿಯಲ್ಲಿ ‘ಕ್ರೀಮಿ ಲೇಯರ್’ ಅನ್ನು ವಿರೋಧಿಸಿದವನು. ಹಿಂದುಳಿದವರಿಗೇ ಕ್ರೀಮಿ ಲೇಯರ್ ಇರಬಾರದು ಎನ್ನುವ ನಾನು ಪರಿಶಿಷ್ಟ ಜಾತಿ ಮತ್ತು‌ ಪರಿಶಿಷ್ಟ ಪಂಗಡಕ್ಕೆ ಕ್ರೀಮಿ ಲೇಯರ್ ಅನ್ವಯಿಸುವುದನ್ನು ಹೇಗೆ ಸಹಿಸಿಕೊಳ್ಳಲಿ?
‘ಕ್ರೀಮಿ ಲೇಯರ್’ ಎನ್ನುವುದು ಸಂವಿಧಾನದಲ್ಲೂ ಇಲ್ಲದ್ದು, ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ಅವರ ಮನಸ್ಸಲ್ಲೂ ಇಲ್ಲದ್ದು ಮತ್ತು ಬಾಬಾಸಾಹೇಬರು ಎಲ್ಲೂ ಪ್ರತಿಪಾದಿಸದೆ ಇರುವುದು! ಇದು ಯಾರೋ ಮೀಸಲಾತಿ ವಿರೋಧಿಗಳು ಹುಟ್ಟಿಹಾಕಿದ್ದು,‌ಇಂದ್ರಾ ಸಹಾನಿ vs ಯೂನಿಯನ್‌ ಆಫ್ ಇಂಡಿಯಾ ಪ್ರಕರಣದಲ್ಲಿ ಹಿಂದುಳಿದ ವರ್ಗಗಳಿಗೆ ಈ ಕ್ರೀಮಿ ಲೇಯರ್ ಅನ್ನು ಅನ್ವಯಿಸಿದ್ದಷ್ಟೇ. ಪರೋಕ್ಷವಾಗಿ ಮೀಸಲಾತಿಯನ್ನು ವಿರೋಧಿಸುವವರು ಒಡಲ ಭಾದೆ ತಾಳಲಾರದೆ ಆಗಾಗ ಈ ಕ್ರೀಮಿ ಲೇಯರ್ ವಿಷಯ ತೇಲಿಬಿಡುತ್ತಿರುತ್ತಾರೆ!

ನ್ಯಾ.ಸದಾಶಿವ ಆಯೋಗದ ವರದಿಗೆ ಬರುವುದಾದರೆ ಆಯೋಗಕ್ಕೆ ಸರ್ಕಾರ ನೀಡಿರುವ “terms of reference” ನಲ್ಲಿ ಕ್ರೀಮಿ ಲೇಯರ್ ಬಗ್ಗೆ ಪ್ರಸ್ತಾಪ ಇಲ್ಲ, ಇಲ್ಲಿ ಸದಾಶಿವ ಆಯೋಗಕ್ಕೆ ಸರ್ಕಾರ ನೀಡಿರುವ “terms of reference” ಅನ್ನು ಗಮನಿಸಿ…

The terms of reference came to be modified as the terms of reference made to earlier commission were almost the same, except the words “scheduled tribes” and they were the subject matter in ‘E.V.Channaiah’.

1.23.The terms of reference of this Commission are modified slightly in view of the judgement of supreme court of India in the case of E.V.Channaiah Vs State of Andhra Pradesh (AIR 2005 SC 162); they read as follows:
1.“Examine and report whether the benefits of reservation extended by the Govt. to the Scheduled Castes under Articles 15 and 16 of the Constitution have been enjoyed by all castes, races and tribes of Scheduled Castes equitably.
2.If not,
(i) Reasons (educational, economical or others) for the same;
(ii) The extent to which different castes, races and tribes of
Scheduled Caste have enjoyed those benefits;
(iii) Steps that may be taken to ensure that the benefits are
equitably distributed among the different castes, races and tribes of Scheduled Castes.
(iv) Any other matter, relevant or incidental to or arising out of the matter referred to above”.

ಮೇಲಿನ‌ “terms of reference” ನಲ್ಲಿ ಎಲ್ಲಾದರು ‘ಕ್ರೀಮಿ ಲೇಯರಿ’ನ ಪ್ರಸ್ತಾಪವಿದೆಯೇ? ಎಲ್ಲೂ ಇಲ್ಲ. ಆದರೆ ಸದಾಶಿವ ಆಯೋಗ terms of reference ನಲ್ಲಿ ಇಲ್ಲದ ಅನೇಕ ವಿಷಯಗಳನ್ನು ಹೇಳುತ್ತಾ ಅದರಲ್ಲಿ ಪುಟ 344 (7.2.33.) ನಲ್ಲಿ ಈ ಕೆಳಗಿನಂತೆ ನಮೂದಿಸಿದೆ…

7.2.33. EMPLOYMENT

a)The State shall adopt the policy of creamy layer while distributing the reservation benefits to the Scheduled Castes under Articles 15 & 16 of the Constitution.

b)Such reservation benefits shall be confined only for one generation of the cadre of Class-1 and Class-II and two Generation of Class-III and other cadres of the Scheduled Castes.
c)The benefits of reservation under Articles 15 & 16 of the Constitution of the officers of the rank of IAS, IPS, IFS and officers of the Equivalent cadre.

d)The State Shall make all endeavours to secure reservations for scheduled Castes in the private sector in the same anology as in the State Sector.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಕ್ರೀಮಿ ಲೇಯರ್ ಅನ್ವಯಿಸುವುದನ್ನು ಸರ್ವೋಚ್ಚ ನ್ಯಾಯಾಲಯದ ಯಾವ ತೀರ್ಪೂ ಪ್ರತಿಪಾದಿಸಿಲ್ಲ, ಪಾರ್ಲಿಮೆಂಟೂ ಅಂಗೀಕರಿಸಿಲ್ಲ ಮತ್ತು ಸಂವಿಧಾನದಲ್ಲೂ ಪ್ರಸ್ತಾಪಿಸಿಲ್ಲ, ಸರ್ಕಾರವೂ ತನ್ನ terms of reference ನಲ್ಲೂ ಸೂಚಿಸಿಲ್ಲದ ಕಾರಣ ಆಯೋಗದ ಈ ಅಂಶವನ್ನು passing remark ಎಂದೋ, ಕಾನೂನಿನ ಭಾಷೆಯಲ್ಲಿ obiter dicta ಎಂದೋ ಭಾವಿಸಿ ನಿರ್ಲಕ್ಷಿಸಬಹುದು. ಒಳಮೀಸಲಾತಿ ನಿರಾಕರಣೆಗೆ ಇದೇ ಒಂದು ನೆಪವಾಗಬಾರದು ಇದರಿಂದ ಒಳಮೀಸಲಾತಿ ಹೋರಾಟಕ್ಕೆ ಹಿನ್ನಡೆಯಾಗಬಾರದು. ಈ ಕಾರಣಕ್ಕೆ ಯಾರೂ ದಿಕ್ಕು ತಪ್ಪಬಾರದಷ್ಟೆ.

ಕಡೆಗೆ ಆಯೋಗದ concluding para ಗಳಲ್ಲೂ ಕೆನೆಪದರ ಅಥವ ಕ್ರೀಮಿ ಲೇಯರ್ ಅಂಶವನ್ನು ಉಲ್ಲೇಕಿಸಿಲ್ಲ. ಆಯೋಗದ ಶಿಪಾರಸ್ಸಿನ ಅಂತಿಮ ಅಂಶ ಈ ಕೆಳಕಂಡಂತಿದೆ ನೋಡಿ…

7.3.49. Accordingly the Commission recommends for categorization of scheduled castes into four groups namely (1)Group-1 (Left hand group) (2)Group-2 (Right hand group) (3)Group-3 (other Scheduled Castes)
(4)Group-4 (Touchable Scheduled Castes) and the distribution of reservation benefits under article 15 & 16 of Constitution of India in proportion to in population of each group in the context of the total population of Scheduled Caste in the State.

7.3.50. In order to secure the categorization of Scheduled castes, the state government shall make appropriate recommendation to the Union of India, to move the parliament for appropriate order under Art.341(2) of the Constitution of India, in view of the observation of Supreme Court in E.V.Channaiah that: “Art.341 Provides that exclusion even of a part or a group of castes from the Presidential list can be done only by the parliament, the logical corollary thereof would be that the State Legislature are forbidden from doing that…”

7.3.51. In case of categorization the reservation benefits shall be distributed in accordance with the proportion mentioned hereunder:

The Proportion of reservation for Group-1 is as follows:

Group-1: %
Group-2: %
Group-3: %
Group-4: %

The compliance of reservation benefits in accordance with the proportion mentioned above shall be taken up only after complying with Article 341(2) of the constitution of India.

ಇಲ್ಲೂ ಎಲ್ಲೂ ಕ್ರೀಮಿ ಲೇಯರಿನ ಅಂಶವಿಲ್ಲ ಆದ್ದರಿಂದ ಸದರಿ ವರದಿಯಲ್ಲಿ ಕ್ರೀಮಿಲೇಯರ್ ಅನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ.

‘ಅನಧಿಕೃತ’ ಎನಿಸುವ ಈ ವರದಿಯಲ್ಲಿ ಕ್ರೀಮಿ ಲೇಯರ್ ಅನ್ನು ಹೊರತುಪಡಿಸಿ ಇನ್ನೂ ಕೆಲವು ಬಿಟ್ಟಿರುವ ಅಂಶಗಳೂ ಇದ್ದಂತಿವೆ! ಇದರಿಂದಾಗಿ ಗೊಂದಲವೂ ಉಂಟಾಗಿರುವುದು ಸಹಜ! ‘ಅಧಿಕೃತ’ ವರದಿಯಲ್ಲಿ ಈ ಎಲ್ಲವನ್ನೂ ಸರಿಪಡಿಸಿರಬಹುದು ಅಥವ ಇದಕ್ಕೆಲ್ಲ ಆಗಾಗಿನ ‘ಕ್ಯಾಬಿನೆಟ್ ನೋಟ್’ ಗಳು ಉತ್ತರಿಸಬಲ್ಲವೇನೋ? ಈ ಅಂಶಗಳನ್ನು ಹೊರತುಪಡಿಸಿ ಈ ವರದಿಯಲ್ಲಿರುವ ಕೇವಲ ನಕಾರಾತ್ಮಕ ವಿಷಯಗಳನ್ನೇ ಎತ್ತಿ ಗೊಂದಲಗೊಳಿಸುವುದಕ್ಕಿಂತಲೂ ಇಲ್ಲಿರುವ ಅನೇಕ ಸಕಾರಾತ್ಮಕ ವಿಷಯಗಳ ಬಗ್ಗೆಯೂ ತಜ್ನರು ಪೂರ್ವಾಗ್ರಹಗಳಿಲ್ಲದೆ ಆರೋಗ್ಯಪೂರ್ಣವಾಗಿ ಚರ್ಚಿಸುವುದು ವರದಿಯ ಅಧಿಕೃತ ಪ್ರಕಟಣೆಗೂ, ಹೋರಾಟಕ್ಕೂ ಮತ್ತು ಅನುಷ್ಟಾನಕ್ಕೂ ಹೆಚ್ಚು ನೈತಿಕ ಬಲವನ್ನು ನೀಡುತ್ತದೆ ಎಂಬುದು ನನ್ನ ನಮ್ರ ಅಭಿಪ್ರಾಯ..

Leave a Reply