‘ಹೊಂಗಿರಣ ಹಾಸ್ಯ ನಾಟಕ ಉತ್ಸವ’ದಲ್ಲಿ ಇಂದು: ಬಯಲುಸೀಮೆ ಕಟ್ಟೆಪುರಾಣ

ಹಾಸ್ಯ ರಂಗೋತ್ಸವ
ಮೂರು ದಿನಗಳ ಹಾಸ್ಯ ನಾಟಕಗಳ ಸಂಭ್ರಮ

ದಿನಾಂಕ 12, 13, 14 ಅಕ್ಟೋಬರ್ 2018
ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು
ಪ್ರತಿ ದಿನ ಸಂಜೆ 7.00ಕ್ಕೆ

 

ಬಯಲುಸೀಮೆ ಕಟ್ಟೆಪುರಾಣ

ಅಂಕಣವೇ ನಾಟಕವಾಗಿ ರೂಪಾಂತರವಾದ ಕನ್ನಡದ ಮೊದಲ ರಂಗಕೃತಿ ಇದು. ಪ್ರಸ್ತುತ ವಿದ್ಯಮಾನಗಳನ್ನು ಗ್ರಾಮೀಣರು ತಮ್ಮದೇ ಆದ ವಿಶ್ಲೇಷಣೆಯ ಮೂಲಕ ಅರ್ಥೈಸುವ ಕಥಾವಸ್ತು ಈ ನಾಟಕದ್ದು. ಸರ್ಕಾರಗಳು ಬದಲಾಗುತ್ತವೆ. ರಾಜಕಾರಣಿಗಳ ಪಾತ್ರ ಬದಲಾಗುತ್ತಲೇ ಇರುತ್ತದೆ. ನೂರಾರು ಯೋಜನೆಗಳು ರೂಪುಗೊಳ್ಳುತ್ತವೆ. ಆದರೆ ಅಂತಿಮವಾಗಿ ಜನರಿಗೆ ತಲುಪುತ್ತವೆಯೇ? ಜನರಿಗೆ ಬೇಕಾದ ಯೋಜನೆಗಳೇನು? ಅವುಗಳ ಸಾರ್ಥಕತೆ ಏನು ಎಂಬುದನ್ನು ಈ ನಾಟಕವು ಹರಟೆಯ ರೂಪದಲ್ಲಿ ಮುಂದಿಡುತ್ತದೆ.

ನಾಟಕದ ಮೂಲ ಹಂದರವನ್ನು ಉಳಿಸಿಕೊಂಡು ಪ್ರತಿ ಪ್ರದರ್ಶನದಲ್ಲಿಯೂ ಸಾಂದರ್ಭಿಕವಾದ ಹಲವು ರಾಜಕೀಯ ಚರ್ಚೆಗಳು ಈ ನಾಟಕದಲ್ಲಿ ಬರುತ್ತವೆ. ಗ್ರಾಮೀಣ ಜನರ ನೋವು-ನಲಿವುಗಳನ್ನು ಚಿತ್ರಿಸುತ್ತಾ, ಅದನ್ನು ವಿಡಂಬನಾತ್ಮಕವಾಗಿ ಜನರಿಗೆ ತಲುಪಿಸುವ ಪ್ರಯತ್ನವಾಗಿದೆ.

ರಂಗದ ಮೇಲೆ

ವಾಟಿಸ್ಸೆ, ಲತೀಫ – ಡಾ. ಸಾಸ್ವೆಹಳ್ಳಿ ಸತೀಶ್
ಚಿಕ್ಕ – ಶಿವಕುಮಾರ ಮಾವಲಿ
ಕಾಳ ಮಾವ – ಚಂದ್ರಶೇಖರ ಶಾಸ್ತ್ರಿ
ಸೀರ – ಚಂದ್ರಶೇಖರ ಹಿರೇಗೋಣಿಗೆರೆ
ಅಮಾಸೆ – ರಮೇಶ್ ಹೆಚ್.ಕೆ.
ಬಾಂಬೆ ರೌಡಿ, ಕಲಕಪ್ಪ ಮಾಸ್ತರ್, ಅಧಿಕಾರಿ – ರಾಜ್‍ಕುಮಾರ್ ಡಿ.ಎಂ.
ಕರುಣಾಕರ – ಕನಕದಾಸ್ ಮಹರಾಜ್
ಜಯಲಲಿತ, ಸಿದ್ದವ್ವ – ಜಯಶ್ರೀ
ಜುಮ್ಮಿ – ಸುಪ್ರಿಯಾ ಎಸ್. ರಾವ್
ಉಗ್ರಿ – ಹೊನ್ನಾಳಿ ಚಂದ್ರಶೇಖರ್

ರಂಗದ ಹಿಂದೆ

ಪ್ರಸಾಧನ – ಡಾ. ಸಾಸ್ವೆಹಳ್ಳಿ ಸತೀಶ್
ಸಂಗೀತ – ಕೊಂಡಯ್ಯ
ತಬಲ – ಹನುಮಂತಪ್ಪ
ಬೆಳಕು – ಹರಿಗೆ ಗೋಪಾಲಸ್ವಾಮಿ
ರಚನೆ – ಬಿ. ಚಂದ್ರೇಗೌಡ
ನಿರ್ದೇಶನ – ಎಸ್.ಆರ್. ಗಿರೀಶ್

Leave a Reply