‘ಹೊಂಗಿರಣ ಹಾಸ್ಯ ರಂಗೋತ್ಸವ’ದಲ್ಲಿ ಇಂದು: ವೀರ ಉತ್ತರಕುಮಾರ

ಹಾಸ್ಯ ರಂಗೋತ್ಸವ
ಮೂರು ದಿನಗಳ ಹಾಸ್ಯ ನಾಟಕಗಳ ಸಂಭ್ರಮ

ದಿನಾಂಕ 12, 13, 14 ಅಕ್ಟೋಬರ್ 2018
ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು
ಪ್ರತಿ ದಿನ ಸಂಜೆ 7.00ಕ್ಕೆ

ವೀರ ಉತ್ತರಕುಮಾರ.

ಮಹಾಭಾರತದ ಒಂದು ವಿಲಕ್ಷಣ ಪಾತ್ರ ಈ ಉತ್ತರಕುಮಾರ. ಈ ಹುಡುಗ ಏಕೆ ಹೀಗಾದ ? ಇವನಿಂದಾಗಿಯೇ ಉತ್ತರನ ಪೌರುಷ ಎಂಬ ನಾಣ್ಣುಡಿ ಹುಟ್ಟಿತಲ್ಲ ಏಕೆ ಎಂಬಿತ್ಯಾದಿ ಉತ್ತರವಿಲ್ಲದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ನಾಟಕದಲ್ಲಿದೆ.

ವಿರಾಟ ಪರ್ವದಲ್ಲಿ ಅತಿ ಮುಖ್ಯ ಭಾಗವಾದ ಗೋಗ್ರಹಣ ಈ ನಾಟಕದಲ್ಲಿ ಸೂಕ್ಷ್ಮವಾಗಿ ಬಂದು ಹೋಗುತ್ತದೆ. ತನ್ನವರ ಮುಂದೆ ತನ್ನನ್ನು ಬಣ್ಣಿಸಿಕೊಂಡು ಇದಿರನ್ನು ಹಳಿಯುವುದು ಉತ್ತರ ಕುಮಾರ ಪಾಲಿಸಿಕೊಂಡು ಬಂದ ನೀತಿ. ನಮ್ಮ ದೇಶದ ಅನೇಕ ರಾಜಕೀಯ ನಾಯಕರು ಸದ್ಯದ ಪರಿಸ್ಥಿತಿಯಲ್ಲಿ ಉತ್ತರನಂತೆ ಮಾತನಾಡುತ್ತ ಅವನ ಮುಂದುವರೆದ ಪೀಳಿಗೆಯಂತೆ ಕಾಣುತ್ತಿರುವುದು ನಾಟಕದ ವಿಶೇಷತೆಯಾಗಿ ಪ್ರಕಟವಾಗುತ್ತದೆ.

ಕೌರವರು ಗೋವುಗಳನ್ನು ಬಂಧಿಸಿರುವ ಸಮಯದಲ್ಲಿ ಉತ್ತರ ಕುಮಾರನಾಡುವ ಮಾತುಗಳು ಸಮಕಾಲೀನ ಭಾರತದ ರಾಜಕಾರಣದ ಚಿತ್ರಣವನ್ನು ನೀಡುತ್ತಾ ಹಾಸ್ಯದ ಜೊತೆಗೆ ಚಿಂತನೆಗೆ ಹಚ್ಚುವ ಪ್ರಯತ್ನ ಈ ನಾಟಕದ್ದಾಗಿದೆ.

ರಂಗದ ಮೇಲೆ

ಉತ್ತರ ಕುಮಾರ – ಚಂದ್ರಶೇಖರ ಹಿರೇಗೋಣಿÂಗೆರೆ
ಬೃಹನ್ನಳೆ – ಸುರೇಂದ್ರ ಕೆ.ಎನ್. (ಕನಸು)
ಸೈನಿಕ – ಮಂಜುನಾಥ್ ಎಸ್.ಎಸ್.
ಸೈರೇಂದ್ರಿ – ಹೆಚ್.ಎಂ. ಪೂರ್ಣಿಮ
ಸುದೇಷ್ಣೆ – ಪ್ರಭಾ ಅನಿಲ್‍ಜೈನ್
ಉತ್ತರೆ – ಸುಪ್ರಿಯಾ ಎಸ್. ರಾವ್
ಸಖಿ 1 – ಮಾಸನ ಸಂತೋಷ್
ಸಖಿ 2 – ಧನ್ಯಕುಮಾರಿ
ಸಖಿ 3 – ಸ್ಮೃತಿ ಬಿ.ಆರ್.
ವಿರಾಟರಾಯ – ಚಂದ್ರಶೇಖರ ಶಾಸ್ತ್ರಿ

ರಂಗದ ಹಿಂದೆ

ಪ್ರಸಾಧನ – ಸುಪ್ರಿಯಾ ಎಸ್. ರಾವ್
ಸಂಗೀತ – ಕೊಂಡಯ್ಯ
ಸಂಗೀತ ಸಹಕಾರ – ಸಂತೋಷ್ ಕಟ್ಟೆ
ತಬಲ – ಹನುಮಂತಪ್ಪ
ಬೆಳಕು – ಹರಿಗೆ ಗೋಪಾಲಸ್ವಾಮಿ
ರಚನೆ, ವಿನ್ಯಾಸ, ನಿರ್ದೇಶನ – ಡಾ. ಸಾಸ್ವೆಹಳ್ಳಿ ಸತೀಶ್

Leave a Reply