ಮಿಸ್ ಮಾಡ್ಬೇಡಿ ಲೋಕೇಶ್ ಮೊಸಳೆಯ ‘ಬನದ ಬದುಕು’

“ನನ್ನ ಛಾಯಾಚಿತ್ರಗಳಿಗೆ ರೈತರೇ ಪ್ರೇರಣೆ”

ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುತ್ತಿರುವಂತಹ ‘ಬನದ ಬದುಕು’ ಛಾಯಾಚಿತ್ರ ಪ್ರದರ್ಶನಕ್ಕೆ ‘ಅವಧಿ’ avadhimag.com ತಂಡ ಭೇಟಿಕೊಟ್ಟಾಗ ನಮಗೆ ನಿಜವಾದ ವನ್ಯಜೀವಿಗಳನ್ನು ಕಂಡ ಅನುಭವವಾದ್ದಂತೂ ನಿಜ. ಕಣ್ಣಿಗೆ ಹಬ್ಬವೆನಿಸುವ ಛಾಯಾಚಿತ್ರಗಳು ಪ್ರಕೃತಿ ಹಾಗು ವನ್ಯಜೀವಿಗಳ ಬಗ್ಗೆ ಲೋಕೇಶ್ ಮೊಸಳೆ ಅವರಿಗಿರುವ ವಿಶೇಷವಾದ ಕಾಳಜಿಯನ್ನು ತೋರುತ್ತದೆ.

ವನ್ಯಜೀವಿಗಳು ಅಮಾಯಕ ಪ್ರಾಣಿಗಳು. ಅವುಗಳ ಚಲನವಲನಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಅದರ ಮನಸ್ಥಿತಿಯನ್ನು ಅರ್ಥಮಾಡಿಕೊಂಡಾಗ ಮಾತ್ರ ನಮಗೆ ಇಂತಹ ಚಿತ್ರಗಳು ಸೆರೆಹಿಡಿಯಲು ಸಾಧ್ಯ.

‘ನನ್ನ ಬಾಲ್ಯದಿಂದಲೂ ಪರಿಸರ ಮತ್ತು ವನ್ಯಜೀವಿಗಳ ಬಗ್ಗೆ ವಿಶೇಷವಾದ ಆಸಕ್ತಿ ಹೊಂದಿದ್ದೆ. ರೈತರ ಪರಿಸರದ ಮೇಲಿನ ಕಾಳಜಿ ಹಾಗು ವನ್ಯಜೀವಿಗಳ ಮೇಲಿನ ಪ್ರೀತಿ ನನಗೆ ಬಹಳಾ ಆಶ್ಚರ್ಯವಾಗಿತ್ತು. ಹಾಗಾಗಿ ನನ್ನ ಛಾಯಾಗ್ರಹಣಕ್ಕೆ ರೈತರೇ ಪ್ರೇರಣೆ’ ಎನ್ನುತ್ತಾರೆ ಲೋಕೇಶ್.

ವನ್ಯಜೀವಿ ಛಾಯಾಗ್ರಹಣ ಪ್ರದರ್ಶನ ಇವತ್ತಿನ ಕಾಲಘಟಕ್ಕೆ ಪರಿಸರ, ಪ್ರಕೃತಿ ಹಾಗು ವನ್ಯಜೀವಿಗಳ ಬಗೆಗಿನ ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ ಮತ್ತು ಈಗಿನ ಡಿಜಿಟಲ್ ಆರ್ಟ್ ನ ಗ್ರಾಫಿಕ್ ಚಿತ್ರಗಳೊಡನೆ ನೈಜ್ಯತೆ ಇರುವ ಈ ಪ್ರದರ್ಶನ ಹಲವರಿಗೆ ಪ್ರೇರಣೆಯಾಗಲಿದೆ .

ಈ ಬನದ ಬಯಲು ವನ್ಯಜೀವಿ ಛಾಯಾಗ್ರಹಣ ಪ್ರದರ್ಶನ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಅಕ್ಟೋಬರ್ 16ಕ್ಕೆ ಪ್ರಾರಂಭಗೊಂಡಿದ್ದು 21ರ ವರೆಗೂ ನಡೆಯಲಿದೆ

 

 

 

 

Leave a Reply