ಮತ್ತೆ ಮತ್ತೆ ನೆನಪಾಗುವುದು ನಮ್ಮನೆಯೇ…

ರತೀಶ್ ಹೆಬ್ಬಾರ್ 

ಅವು ನೆನಪಿಸುವುದು
ಮತ್ತೆ ಮತ್ತೆ
ನಮ್ಮನೆಯೇ

ಕಾಂಕ್ರೀಟು ಕಟ್ಟಡದ
ಬಿಸಿಗೋಡೆಯೊಳಗೆ ಮಲಗಿ ನಿದ್ರೆ
ಬರುವುದೂ ತುಸು ಲೇಟೇ..
ಅದಕೊಂದು ಕೃತಕ ತಂಪುಸಿರು
ಕಾಲಬದಲಾಗಿದೆ ಕೂರಲು
ಕಂಬಳಿ ಕಾಣಲೊಲ್ಲದು
ಸೋಫೆಯ ಮೃದುತ್ವ ಮೈಯ ಮೆತ್ತನಾಗಿಸಲು
ಮುತ್ತಿಟ್ಟ ಮಣ್ಣು ಮತ್ತೆ ನೆನಪಾಗುವುದು

ಬಣ್ಣ ಬಳಿಯದ ಗೋಡೆ ಗೋಡೆಗೆ
ಛಾವಣಿ ಕಾಣುವ ಬಯಕೆ
ಅಲ್ಲಲ್ಲಿ ನಡು ನಡುವೆಯಷ್ಟೇ
ಬೀದಿ ಬದಿಗಳಲ್ಲಿ ಇಂತ ಒಂದಷ್ಟು
ಮನೆಗಳು.. ಈ ನಗರವೇ ಇಷ್ಟೋ
ಅಲ್ಲಲ್ಲ ಇಂತದೇ ತಾರಸಿಯ
ಮನೆ ನಮ್ಮೂರಲ್ಲಿ ಕಟ್ಟಿ ಬೀಗ ಬಯಸಿದ್ದಿದೆ.
ಅದೇ ಇಲ್ಲಿ ಬಿಸಿಲಿಗೆ ನೆರಳಷ್ಟು
ಮಳೆಗೆ ಕೊಡೆ ಹಿಡಿದಷ್ಟು
ಸೂರು ಸಿಕ್ಕರೆ ಸಾಕು
ಮತ್ತೆ ಮತ್ತೆ ನೆನಪಾಗುವುದು
ನಮ್ಮನೆಯೇ…

ಇಂತದೇ ಒಂದಷ್ಟು ಊರ ಗುಡಿಸಲು
ಸೋಗೆ ಜಾರುವುದು ಇಂದಿಗೆ ಕೊನೆ
ಮುಂದೆ ಸೋರುವ ಮಾಳಿಗೆಯೂ ಇತಿಹಾಸ
ಮತ್ತೆ ಮತ್ತೆ ನೆನಪಾಗುವುದು ನಮ್ಮನೆಯೇ..

Leave a Reply