ಕೊಂಚವಾದರೂ ಸಮಚಿತ್ತ ಸಾಧಿಸಲಿ ಎಂಬುದು ಕೃತಿಯ ಆಶಯ..

’ಒಂದೇ ಗುರಿ, ಬೇರೆ ದಾರಿ’ ಹೊಸ ಪುಸ್ತಕ. ಹೈದರಾಬಾದ್‌ ಕರ್ನಾಟಕದ ಪ್ರಮುಖ ಪ್ರಕಾಶಕ ಹಾಗೂ ಸ್ನೇಹಿತರಾದ ಪಲ್ಲವ ವೆಂಕಟೇಶ ಕೃತಿಯ ಪ್ರಕಾಶಕರು.

ಆಧುನಿಕ ಭಾರತೀಯ ಸಮಾಜದಲ್ಲಿ ಪತ್ರ ಸಂವಾದ ಪರಂಪರೆಯನ್ನು ರೂಪಿಸಿದ ಗಾಂಧಿ ಈ ಕೃತಿಯ ಕೇಂದ್ರ. ಅವರೊಂದಿಗೆ ಸಂವಾದ/ವಾಗ್ವಾದಗಳನ್ನು ನಡೆಸಿದ ರವೀಂದ್ರನಾಥ ಠಾಕೂರ, ಜವಹರ ಲಾಲ್‌ ನೆಹರು, ಸುಭಾಸ ಚಂದ್ರ ಬೋಸ್‌ ಮತ್ತು ಬಿ. ಆರ್‌. ಅಂಬೇಡ್ಕರ್‌ರ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ನಿಲುವುಗಳು ಕೃತಿಯಲ್ಲಿವೆ. ಮೊದಲ ಬಾರಿಗೆ ಎಷ್ಟೋ ಪತ್ರಗಳು ಕನ್ನಡದಲ್ಲಿ ಕಾಣಿಸಿಕೊಳ್ಳುತ್ತಿವೆ.

ಧ್ರುವೀಕರಣದ ಚಂಡಮಾರುತಕ್ಕೆ ಸಿಲುಕಿ ನಲುಗುತ್ತಿರುವ ಸಮಾಜ ಇಂಥ ಕೃತಿಗಳನ್ನು ಓದುತ್ತ ಕೊಂಚವಾದರೂ ಸಮಚಿತ್ತ ಸಾಧಿಸಲಿ ಎಂಬುದು ಕೃತಿಯ ಆಶಯ.

ಹೊಸ ತಲೆಮಾರಿನ, ಮುಕ್ತ ಮನಸ್ಸನ್ನು ಹೊಂದಿರುವ ತರುಣರು, ವಿಚಾರವಂತರು ಪ್ರತಿಗಳಿಗಾಗಿ ನಿಮ್ಮೂರಿನ ಪುಸ್ತಕ ಮಾರಾಟಗಾರರಲ್ಲಿ ವಿಚಾರಿಸಿ. ಇಲ್ಲವೆ ಪಲ್ಲವ ವೆಂಕಟೇಶ ಅವರನ್ನು ಸಂಪರ್ಕಿಸಿ. ಪುಸ್ತಕ ಕೊಳ್ಳುವ ಮೂಲಕ ಇನ್ನಷ್ಟು ಹೊಸ ಬಗೆಯ ಪುಸ್ತಕಗಳು ಪ್ರಕಟಿಸುವ ಹುಮ್ಮಸ್ಸು ವೆಂಕಟೇಶ ಅವರಲ್ಲಿ ತುಂಬಿ.

ಪುಸ್ತಕದ ಬೆಲೆ: ೨೨೦ (ಇನ್ನೂರ ಇಪ್ಪತ್ತು)
ಪಲ್ಲವ ವೆಂಕಟೇಶ: ೯೪೮೦೩೫೩೫೦೭

ಕೇಶವ ಮಳಗಿ 

Leave a Reply