ಶ್ರೀನಾಥ್, ಸ್ವ್ಯಾನ್ ಕಿಟ್ಟಿ ಸೇರಿದಂತೆ ಐವರಿಗೆ ಅಮ್ಮ ಗೌರವ ಪುರಸ್ಕಾರ

ನಾಡು-ನುಡಿಗೆ ಮಹತ್ವದ ಕೊಡುಗೆ ನೀಡಿದ ಸಾಧಕರಿಗೆ ನೀಡುವ `ಅಮ್ಮ ಗೌರವ ಪುರಸ್ಕಾರ’ವನ್ನು ಘೋಷಿಸಲಾಗಿದೆ.

ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಗಣನೀಯ ಸಾಧನೆಯನ್ನು ಗುರುತಿಸಿ ಕಳೆದ ೯ ವರ್ಷಗಳಿಂದ ಅಮ್ಮ ಗೌರವ ಪುರಸ್ಕಾರವನ್ನು ನೀಡಲಾಗುತ್ತಿದೆ.

೨೦೧೮ನೇ ಸಾಲಿಗೆ ಹಿರಿಯ ಚಲನಚಿತ್ರ ನಟ ಶ್ರೀನಾಥ್, ಮಾಜಿ ಉಪ ಸಭಾಪತಿ ಚಂದ್ರಶೇಖರರೆಡ್ದಿ ದೇಶಮುಖ್ ಮದನಾ, ಮುದ್ರಣ ಕ್ಷೇತ್ರದಲ್ಲಿ ವಿಭಿನ್ನ ಪ್ರಯೋಗಕ್ಕೆ ಕಾರಣರಾದ ಬೆಂಗಳೂರಿನ ಸ್ವ್ಯಾನ್ ಕೃಷ್ಣಮೂರ್ತಿ, ಹಿರಿಯ ಲೇಖಕ ಚಂದ್ರಕಾಂತ ಕರದಳ್ಳಿ ಶಹಾಪುರ ಮತ್ತು ಕೆರೆ ಹೂಳೆತ್ತುವ ಮೂಲಕ ಮಹಿಳಾ ಸ್ವಾವಲಂಬಿತನಕ್ಕೆ ಸಾಕ್ಷಿಯಾಗಿರುವ ಚಂದಮ್ಮ ಅವರನ್ನು ಆಯ್ಕೆ ಮಾಡಲಾಗಿದೆ.

ಇದೇ ನವೆಂಬರ್ 26 ರಂದು ಸಂಜೆ 5.30ಕ್ಕೆ ಸೇಡಮ್‍ನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಶಸ್ತಿ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಟ ಶ್ರೀನಾಥ್

 

Leave a Reply