ಕಮೂ ಬರ್ತಿದ್ದಾನೆ.. ತರುಣರ ಬಳಿಗೆ..

ಪ್ರಿಯರೆ,

ಕಮೂನನ್ನು ಸಂಭ್ರಮಿಸುವ ಕಾಲ ಬಂದಿದೆ. ‘ಅನ್ಯ’ ಕಾದಂಬರಿ ಓದಿದವರಿಗೆ ಕಮೂನ ಆವರಿಸಿಕೊಳ್ಳುವ ಭಾವಗೀತಾತ್ಮಕ ಬರವಣಿಗೆಯ ಶಕ್ತಿ ಗೊತ್ತಿದೆ. ಈ ಕಾದಂಬರಿ, ಇನ್ನೊಂದೆರಡು ಬರಹಗಳು ಬಿಟ್ಟರೆ ಕನ್ನಡಕ್ಕೆ ಕಮೂ ಅನುವಾದಗೊಂಡಿದ್ದು ಕಡಿಮೆ. ಅನನ್ಯ ಕತೆಗಾರ ಕೇಶವ ಮಳಗಿಯವರು ಎಂಟು ವರ್ಷಗಳ ಕಾಲ ಶ್ರಮವಹಿಸಿ ಕಮೂನನ್ನು ಈಗ ಕನ್ನಡಕ್ಕೆ ಕರೆ ತಂದಿದ್ದಾರೆ. ಈ ‘ಕಮೂ ತರುಣ ವಾಚಿಕೆ’ಯನ್ನು ಸಂಗಾತ ಪುಸ್ತಕ ಪ್ರಕಟಿಸಿದೆ.

ಕಮೂನದು ವರ್ಣರಂಜಿತ, ವಿಕ್ತಿಪ್ತ ಮತ್ತು ಭಾವೋನ್ಮಾದದ ಬದುಕು. ಬದುಕಿದ್ದು ನಲ್ವತ್ತೇಳು ವರ್ಷವಾದರೂ ನೂರು ವರ್ಷದಂತೆ ಬದುಕಿದವನು. ಅವನಿಗೆ ಅಕ್ಷರಶಃ ನೂರಾರು ಗೆಳೆಯರು, ಹತ್ತಾರು ಗೆಳತಿಯರು. ಕಾಲಿಗೆ ಚಕ್ರ ಕಟ್ಟಿಕೊಂಡವನಂತೆ ಆತನ ಪ್ರವಾಸ. ಉದ್ವೇಗದುತ್ತಂಗದಂತೆ ಆತನ ಪತ್ರ ವ್ಯವಹಾರಗಳು ; ಸದಾ ಹತಾಶೆ, ಮಾರಣಾಂತಿಕ ಕಾಯಿಲೆಯಿಂದ ನರಳುವ ಬದುಕು. ಇತಿಹಾಸ, ಅಕ್ಷರಗಳ ಬೆಂಬಲವಿಲ್ಲದ, ಬಡತನ, ಅವಮಾನಗಳೇ ಸಹಜ ಉಸಿರಾದ ಕುಟುಂಬದಿಂದ ಬಂದು ತಾನು ಪ್ರತಿನಿಧಿಸುವ ಸಮುದಾಯಕ್ಕೆ ಅಸ್ಮಿತೆಯನ್ನು, ಘನತೆಯನ್ನು ತಂದು ನೀಡಲು ಕಮೂ ಯತ್ನಿಸಿದ. ಅವನು ವಿಶ್ವದ ಬಂಡುಕೋರ ತರುಣ.

ಈ ಕಮೂನನ್ನು ನಾವೆಲ್ಲ ಓದಲೇಬೇಕು. ಆಸಕ್ತರು ಪ್ರತಿಗಳಿಗಾಗಿ ಸಂಪರ್ಕಿಸಬಹುದು.

-ಟಿ ಎಸ್ ಗೊರವರ 

ಕಮೂ ತರುಣ ವಾಚಿಕೆ

ಲೇಖಕರು : ಕೇಶವ ಮಳಗಿ

ಪುಟ : 134

ಬೆಲೆ : 160

ಪ್ರಕಾಶಕರು :  ಸಂಗಾತ ಪುಸ್ತಕ

ಸಂಪರ್ಕ : 9341757653
ಬ್ಯಾಂಕ್ ವಿವರ : ಟಿ.ಎಸ್.ಗೊರವರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗಜೇಂದ್ರಗಡ
Account NO : 31699243539,
IFSC Code : SBIN 0011275
ಇಲ್ಲಿಗೆ ಹಣ ಪಾವತಿಸಿ ವಿಳಾಸ ಕಳಿಸಿದರೆ ಪುಸ್ತಕ ಕಳಿಸಲಾಗುವುದು.

 

Leave a Reply